ಎಸ್‌ಎಸ್‌ಎಲ್‌ಸಿ ಮತ್ತು ಐಟಿಐ ಕೋರ್ಸ್‌ ಪಡೆದವರಿಗೆ ನಾರ್ಥ್‌ ಸೆಂಟ್ರಲ್‌, ನಾರ್ಥ್‌ ವೆಸ್ಟರ್ನ್‌ ಮತ್ತು ಸೆಂಟ್ರಲ್‌ ರೈಲ್ವೆಯಲ್ಲಿ ಸದಾವಕಾಶ…!!

0
887

ಒಟ್ಟು 3806 ಅಭ್ಯರ್ಥಿಗಳಿಗೆ ಅವಕಾಶ

ಸೆಂಟ್ರಲ್‌ ರೈಲ್ವೆ:
ಈ ವಲಯಕ್ಕೆ ಸೇರಿದ ಮುಂಬೈ, ಭುಸಾವಾಲ್‌, ಪುಣೆ, ನಾಗ್ಪುರ ಮತ್ತು ಸೋಲಾಪುರ ಕ್ಲಸ್ಟರ್‌ಗಳಲ್ಲಿ ಒಟ್ಟು 2196 ಅಭ್ಯರ್ಥಿಗಳಿಗೆ ಅಪ್ರೆಂಟಿಸ್‌ಶಿಪ್‌ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ನವೆಂಬರ್‌ 30 ಕೊನೆಯ ದಿನವಾಗಿದೆ.

ನಾರ್ಥ್‌ ವೆಸ್ಟರ್ನ್‌ ರೈಲ್ವೆ:
ಇಲ್ಲಿ 1164 ಅಭ್ಯರ್ಥಿಗಳು ಆ್ಯಕ್ಟ್ ಅಪ್ರೆಂಟಿಸ್‌ಶಿಪ್‌ ಪಡೆಯಬಹುದಾಗಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ನವೆಂಬರ್‌ 29 ಕೊನೆಯ ದಿನವಾಗಿದೆ.

ನಾರ್ಥ್‌ ಸೆಂಟ್ರಲ್‌ ರೈಲ್ವೆ:
ಇಲ್ಲಿ ಒಟ್ಟು 446 ಅಭ್ಯರ್ಥಿಗಳು ಆ್ಯಕ್ಟ್ ಅಪ್ರೆಂಟಿಸ್‌ಶಿಪ್‌ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್‌ 30 ಕೊನೆಯ ದಿನವಾಗಿದೆ. 15ರಿಂದ 24 ವರ್ಷದೊಳಗಿನ ಅಭ್ಯರ್ಥಿಗಳು ಈ ತರಬೇತಿ ಪಡೆಯಬಹುದು.

-ಎಸ್‌ಎಸ್‌ಎಲ್‌ಸಿ ಮತ್ತು ಐಟಿಐ ಕೋರ್ಸ್‌ ಪಡೆದವರು ಅರ್ಜಿ ಸಲ್ಲಿಸಿ

-ನಿಗದಿತ ವಿದ್ಯಾರ್ಹತೆಯಲ್ಲಿ ಪಡೆದ ಶೇಕಡಾವಾರು ಅಂಕಗಳ ಆಧಾರದಲ್ಲಿ ಅಭ್ಯರ್ಥಿಗಳ ಆಯ್ಕೆ

-ತರಬೇತಿ ಅವಧಿ ಒಂದು ವರ್ಷ

ನಾರ್ಥ್‌ ಸೆಂಟ್ರಲ್‌ ರೈಲ್ವೆ, ನಾರ್ಥ್‌ ವೆಸ್ಟರ್ನ್‌ ರೈಲ್ವೆ ಮತ್ತು ಸೆಂಟ್ರಲ್‌ ರೈಲ್ವೆಗಳಲ್ಲಿ ಸಾವಿರಾರು ಅಭ್ಯರ್ಥಿಗಳಿಗೆ ಅಪ್ರೆಂಟಿಸ್‌ಶಿಪ್‌ ಪಡೆಯುವ ಅವಕಾಶ ಸಿಗಲಿದೆ. ಫಿಟ್ಟರ್‌, ವೆಲ್ಡರ್‌, ಮೆಕ್ಯಾನಿಕ್‌, ಮಷಿನಿಸ್ಟ್‌, ಪೇಂಟರ್‌, ಕಾರ್ಪೆಂಟರ್‌, ಎಲೆಕ್ಟ್ರಿಷಿಯನ್‌ , ಟೇಲರ್‌, ಲ್ಯಾಬೋರೇಟರಿ ಅಸಿಸ್ಟೆಂಟ್‌ ಸೇರಿದಂತೆ ಹಲವಾರು ಹುದ್ದೆಗಳಲ್ಲಿ ಟ್ರೇಡ್‌ ಅಪ್ರೆಂಟಿಸ್‌ಶಿಪ್‌ ಪಡೆಯಬಹುದಾಗಿದೆ. ಎಸ್‌ಎಸ್‌ಎಲ್‌ಸಿ ಮತ್ತು ಸಂಬಂಧಪಟ್ಟ ಟ್ರೇಡ್‌ಗಳಲ್ಲಿ ಐಟಿಐ ಕೋರ್ಸ್‌ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗೆ: www.rrccr.com / www.railwayrecruitment.co.in.

ವಯೋಮಿತಿ:
ಅಭ್ಯರ್ಥಿಗಳ ವಯಸ್ಸು 15ರಿಂದ 24 ವರ್ಷದೊಳಗಿರಬೇಕು. ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಮೀಸಲಾತಿ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.

ಅಭ್ಯರ್ಥಿಗಳ ಶುಲ್ಕ:
ಅಂತೆಯೇ ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು 100 ರೂ. ಶುಲ್ಕ ಪಾವತಿಸಬೇಕು. ಎಸ್‌ಸಿ/ಎಸ್‌ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯ್ತಿ ನೀಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ