ನಿವೃತ್ತಿಯಾದವರಿಗೆ ಸೆಂಟ್ರಲ್ ರೈಲ್ವೆಯಲ್ಲಿ ವಿವಿಧ 463 ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

0
364

ನಿವೃತ್ತಿಯಾದರೆ ಉದ್ಯೋಗ ಮಾಡುವ ಅವಕಾಶ ಮುಗಿಯಿತು ಅಂತ ಯೋಚನೆಯಲ್ಲಿರುವವರಿಗೆ ಸುವರ್ಣಾವಕಾಶ ಹೌದು ಸೆಂಟ್ರಲ್ ರೈಲ್ವೆ ನೇಮಕಾತಿ ವಿವಿಧ 463 ನಿವೃತ್ತ ಸಿಬ್ಬಂದಿ ಸ್ಥಾನಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ. ಆಸಕ್ತ ನಿವೃತ್ತಿ ಅಭ್ಯರ್ಥಿಗಳು. ಫೆಬ್ರುವರಿ 18, 2019 ರ ಒಳಗೆ ಅರ್ಜಿ ಸಲ್ಲಿಸಬೇಕು.

Also read: ಬಿ.ಎಸ್.ಎಫ್ 1763 ಕಾನ್ಸ್ಟೇಬಲ್ ಹುದ್ದೆಗಳಿಗೆ ಪುರುಷ್ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ..

ಹುದ್ದೆಗಳಿಗೆ ಸಂಬಂಧಪಟ್ಟ ಮಾಹಿತಿ:

ಹುದ್ದೆಗಳ ಹೆಸರು: (Name Of The Posts): ಸ್ಟೇಷನ್ ಮಾಸ್ಟರ್ , ಜ್ಯೂನಿಯರ್ ಇಂಜಿನಿಯರ್, ಹೆಲ್ಪರ್,ಆಫೀಸ್ ಸೂಪರಿಂಟೆಂಡರ್, ಸೀನಿಯರ್ ಕ್ಲರ್ಕ್ , ಸೀನಿಯರ್ ಸೆಕ್ಷನ್ ಇಂಜಿನಿಯರ್, ವೆಲ್ಡರ್, ಟ್ಯೂನರ್, ಪೈಂಟರ್, ಕ್ರೇನ್.

ಸಂಸ್ಥೆ (Organisation): ಸೆಂಟ್ರಲ್ ರೈಲ್ವೆ

ವಿದ್ಯಾರ್ಹತೆ (Educational Qualification): ಹುದ್ದೆಗಳಿಗೆ ಅನುಸಾರ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Application End Date): February 18, 2019

ವಯೋಮಿತಿ: (Age): ವಿವಿಧ ಹುದ್ದೆಗಳಿಗೆ ಡಿಸೆಂಬರ್ 1,2019ಕ್ಕೆ ಗರಿಷ್ಟ 65ವರ್ಷ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ /ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ: ಈ ಹುದ್ದೆಗಳಿಗೆ ನಿವೃತ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅಭ್ಯರ್ಥಿಗಳು ಅರ್ಜಿಗಳನ್ನು ಕಚೇರಿಗೆ ಫೆಬ್ರವರಿ 18,2019ರೊಳಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ: http://www.cr.indianrailways.gov.in/cris//uploads/files/1548679536583-combinepdf.pdf ಕ್ಲಿಕ್ ಮಾಡಿ.