ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದಿಂದ ಬಿಗ್ ಶಾಕ್; ನೌಕರರ ನಿವೃತ್ತಿ ವಯಸ್ಸು ಕಡಿತಗೊಳಿಸಲು ನಡೆಯುತ್ತಿದೆ ಪ್ಲಾನ್??

0
1610

ದಸರಾ ಹಬ್ಬದ ಉಡುಗೊರೆಯ ನಿರೀಕ್ಷೆಯಲ್ಲಿರುವ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಗುನ್ನ ಇಡಲು ಸಿದ್ದತೆ ನಡೆಸಿದ್ದು, ಗಿಫ್ಟ್ ಹೋಗಲಿ ಇರುವ ನೌಕರಿಯಲ್ಲೇ ಕಡಿತ ಗೊಳಿಸಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಅದರಂತೆ ನಿವೃತ್ತಿ ಅಂಚಿನಲ್ಲಿರುವ ಕೇಂದ್ರ ಸರ್ಕಾರಿ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು ಇಳಿಕೆ ಮಾಡುವ ಕುರಿತು ಚಿಂತನೆ ನಡೆಸಿದೆ.ಈ ಪ್ರಸ್ತಾವನೆಯನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಸರ್ಕಾರದ ವೆಚ್ಚ ಇಲಾಖೆಯ ಮುಂದಿಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Also read: ನೋಟ್ ಬ್ಯಾನ್ ರೀತಿ ಜನತೆಗೆ ಇನ್ನೊಂದು ಶಾಕ್ ಕೊಡಲು ಮುಂದಾದ ಮೋದಿ ಸರ್ಕಾರ, ಹಳೆಯ ವಾಹನಗಳಿಗೆ ಬ್ಯಾನ್??

ಸರ್ಕಾರಿ ವೃತ್ತಿಯ ವಯಸ್ಸು ಕಡಿತ?

ಹೌದು ನಿವೃತ್ತಿಯ ಅಂಚಿನಲ್ಲಿರುವ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಇದು ಕಹಿ ಸುದ್ದಿಯಾಗಿದ್ದು, ಉದ್ಯೋಗ ನಿರೀಕ್ಷೆಯಲ್ಲಿರುವ ಯುವ ಜನತೆಗೆ ಸಿಹಿ ಸುದ್ದಿ ಎಂದರು ಎನ್ನಬಹುದು. ಏಕೆಂದರೆ ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ 33 ವರ್ಷ ಸೇವೆ ಪೂರೈಸಿದ ಅಥವಾ 60 ವರ್ಷಕ್ಕೆ ತಲುಪಿದವರ, ಯಾವುದು ಮೊದಲು ಸಾಧ್ಯವಾಗುತ್ತದೆಯೋ ಅದನ್ನು ಪರಿಗಣಿಸಿ ಸೇವೆಯಲ್ಲಿರುವವರ ನಿವೃತ್ತಿ ವಯಸ್ಸನ್ನು ಕಡಿಮೆ ಮಾಡುವ ಪ್ರಸ್ತಾವನೆಯನ್ನು ಸರ್ಕಾರ ಜಾರಿಗೆ ತರುವ ಸಾಧ್ಯತೆಯಿದೆ. 1998ರಲ್ಲಿ ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 58 ವರ್ಷಗಳಿಂದ 60 ವರ್ಷಗಳಿಗೆ ಹೆಚ್ಚಿಸಲಾಗಿತ್ತು. ಹಲವು ರಾಜ್ಯ ಸರ್ಕಾರಗಳು ನೌಕರರ ನಿವೃತ್ತಿ ವಯಸ್ಸನ್ನು 60ರಿಂದ 62 ವರ್ಷಗಳಿಗೆ ಹೆಚ್ಚಿಸಿದ್ದವು. ಆದರೆ ಈಗ ಹಲವು ಕಾರಣಗಳಿಂದ ವೃತ್ತಯ ವಯಸ್ಸು ಕಡಿತ ಗೊಳಿಸಲು ಚಿಂತನೆ ನಡೆಸಿದೆ.

Also read: ಹತ್ತಾರು ಕೆಲಸಕ್ಕೂ ಒಂದೇ ಸ್ಮಾರ್ಟ್‌ ಕಾರ್ಡ್‌; ಇನ್ಮುಂದೆ ಆಧಾರ್, ಪಾಸ್ಪೋರ್ಟ್, ಡಿಎಲ್ ಮತ್ತು ವೋಟರ್ ಐಡಿ ಎಲ್ಲವೂ ಒಂದೇ ಕಾರ್ಡ್-ನಲ್ಲಿ??

ಉದ್ದೇಶವೇನು?

ಈ ಪ್ರಸ್ತಾವನೆಯನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಸರ್ಕಾರದ ವೆಚ್ಚ ಇಲಾಖೆಯ ಮುಂದಿಟ್ಟಿದೆ. ಇಲಾಖೆಗೆ ಆಗುವ ಹಣಕಾಸು ಹೊರೆ, ವೆಚ್ಚ ಇತ್ಯಾದಿಗಳ ಸಾಧ್ಯಾಸಾಧ್ಯತೆಯನ್ನು ಅದು ಪರಿಶೀಲಿಸಲಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ಕೇಂದ್ರ ಸರ್ಕಾರದ ಕೇಂದ್ರೀಯ ವಿಶ್ವವಿದ್ಯಾಲಯಗಳು ಮತ್ತು ವೈದ್ಯರುಗಳು ಹೊರತುಪಡಿಸಿ ಬಹುತೇಕ ಇಲಾಖೆಗಳ ಉದ್ಯೋಗಿಗಳಿಗೆ ನಿವೃತ್ತಿ ವಯಸ್ಸು 60 ವರ್ಷ ಆಗಿದೆ. ಈ ಪ್ರಸ್ತಾವನೆಯನ್ನು ಜಾರಿಗೆ ತಂದರೆ ದೇಶದ ಯುವ ಜನತೆ ಎದುರಿಸುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ಬಹಳಷ್ಟು ನಿವಾರಣೆ ಮಾಡಬಹುದು.

Also read: ವಾಹನ ದಾಖಲಾತಿಯಲ್ಲಿ ಭಾರಿ ಬದಲಾವಣೆ; ಅಕ್ಟೋಬರ್​​ 1ರಿಂದಲೇ ದೇಶಾದ್ಯಂತ ಒಂದೇ ಮಾದರಿ ಡಿಎಲ್, ಆರ್.ಸಿ.

ಸರ್ಕಾರಿ ಅಧಿಕಾರಿಗಳ ಕ್ರಿಯಾ ನಿಶ್ಚಲತೆಯನ್ನು ಕಡಿಮೆ ಮಾಡಿ ಕೆಲಸದಲ್ಲಿ ದಕ್ಷತೆ ಹೆಚ್ಚಿಸಬಹುದು. ಅಧಿಕಾರಿಗಳ ಬಡ್ತಿಯಿಂದ ಸರ್ಕಾರದ ಖಜಾನೆಗೆ ಆಗುವ ವೆಚ್ಚದ ಹೊರೆಯನ್ನು ದೀರ್ಘಾವಧಿಯಲ್ಲಿ ಕಡಿಮೆ ಮಾಡಬಹುದು ಎನ್ನಲಾಗುತ್ತಿದೆ. ಪ್ರಸ್ತಾವನೆಗೆ ಸರ್ಕಾರದಿಂದ ಹಸಿರು ನಿಶಾನೆ ಸಿಕ್ಕಿದರೆ ಕೇಂದ್ರ ಸರ್ಕಾರದ ಎಲ್ಲಾ ಸೇವೆಗಳಲ್ಲಿ ಹಂತ ಹಂತವಾಗಿ ಮುಂದಿನ ದಿನಗಳಲ್ಲಿ ಜಾರಿಗೆ ಬರಲಿದೆ. ಈ ಮಧ್ಯೆ, ಮಾನವ ಸಂಪನ್ಮೂಲ ಮತ್ತು ನೀತಿಗಳನ್ನು ಸುಗಮಗೊಳಿಸಲು, ಕೇಂದ್ರ ಸರ್ಕಾರ ಎಲ್ಲಾ ಸಚಿವಾಲಯಗಳಿಗೆ ಉದ್ಯೋಗಿಗಳ ಕೇಡರ್ ಪ್ರಕಾರ ಮತ್ತು ಗ್ರೇಡ್ ಪ್ರಕಾರ ಹುದ್ದೆಗಳ ಪಟ್ಟಿಯನ್ನು, ಹಲವು ಇಲಾಖೆಗಳಲ್ಲಿರುವ ಹಲವು ಹುದ್ದೆಗಳು ಮತ್ತು ಸಿಬ್ಬಂದಿಗಳ ಸಂಖ್ಯೆಯ ವಿವರಗಳನ್ನು ಸೆಪ್ಟೆಂಬರ್ 30ರೊಳಗೆ ಸಲ್ಲಿಸುವಂತೆ ಹೇಳಿದೆ.