ಇನ್ಮುಂದೆ ರೇಷನ್ ಪಡೆಯಲು ಊರಿಗೆ ಹೋಗಲೇ ಬೇಕಿಲ್ಲ; ಈ ಕಾರ್ಡ್ ಇದ್ದರೇ, ದೇಶದ ಯಾವ ಭಾಗದಲ್ಲಾದ್ರೂ ರೇಷನ್ ಪಡಿಬಹುದು..

0
1853

ದೇಶದಲ್ಲಿ ರೇಷನ್ ಕಾರ್ಡ್-ನಿಂದ ಹಲವು ಕುಟುಂಬಗಳು ಊಟ ಮಾಡುತ್ತಿವೆ, ಆದರೆ ಇದರಲ್ಲಿ ಬಹುತೇಕ ಕುಟುಂಬಗಳು ಕಾರ್ಡ್ ಇದ್ದರು ಕೂಡ ರೇಷನ್ ಪಡೆಯಲು ಸಾಧ್ಯವಾಗುತ್ತಿಲ್ಲ ಕಾರಣ, ಊರು ಬಿಟ್ಟು ವಲಸೆ ಹೋಗುವುದು. ಇದರಿಂದ ಸ್ವಂತ ರೇಷನ್ ಕಾರ್ಡ್ ಇರುವ ಊರಿಗೆ ಹೋಗಿ ರೇಷನ್ ತರಲು ಆಗದ ಕಾರಣ ಸರ್ಕಾರ ನೀಡಿದ ಅನ್ನವನ್ನು ಕಳೆದುಕೊಳ್ಳುತ್ತಿದ್ದಾರೆ. ಇದನ್ನು ಅರಿತ ಕೇಂದ್ರ ಸರ್ಕಾರ ಈಗ ಹೊಸ ಯೋಜನೆಯನ್ನು ಜಾರಿಗೆ ತರಲು ತಯಾರಿ ನಡೆಸಿದ್ದು, ದೇಶದೆಲ್ಲೆಡೆ ಒನ್ ನೇಷನ್​ ಒನ್​ ರೇಷನ್​ ಯೋಜನೆ ಬರಲಿದೆ.

Also read: ವಾಹನ ಸವಾರರಿಗೆ ಎಚ್ಚರ ಇನ್ಮುಂದೆ ಚಿಕ್ಕ ತಪ್ಪಿಗೂ ಬೀಳುತ್ತೆ ಸಾವಿರಾರು ರೂ. ದಂಡ; ಯಾವ್ಯಾವ ರೂಲ್ಸ್ ಬ್ರೇಕ್‍ಗೆ ಎಷ್ಟೆಷ್ಟು ದಂಡ??

ಏನಿದು ಒನ್ ನೇಷನ್​ ಒನ್​ ರೇಷನ್​?

ಪ್ರಧಾನಿ ನರೇಂದ್ರ ಮೋದಿಯವರು ಒಂದು ರಾಷ್ಟ್ರ ಒಂದು ದೇಶ ಎಂಬ ನಿಯಮ ರೂಪಿಸಲು ಚಿಂತನೆ ನಡೆಸಿರುವ ಬೆನ್ನಲ್ಲೇ, ಇದೀಗ ಒಂದು ನೇಷನ್​, ಒಂದು ರೇಷನ್​ ಎಂಬ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ತರಲು ಮುಂದಾಗಿದೆ. ಈ ಬಗ್ಗೆ ಕೇಂದ್ರ ಆಹಾರ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್, ಈ ಯೋಜನೆ ಜಾರಿಯಾದ್ರೆ ಜನರಿಗೆ ನೆರವಾಗಿದೆ. ಇಷ್ಟು ದಿನಗಳ ಕಾಲ ಯಾವ ಊರಿನಲ್ಲಿ ಜನರು ರೇಷನ್​ ಕಾರ್ಡ್​ ಹೊಂದಿರುತ್ತಾರೋ, ಅದೇ ಊರಿನಲ್ಲಿ ರೇಷನ್​ ಪಡೆಯುವ ಅನಿವಾರ್ಯತೆ ಇತ್ತು. ಆದರೆ ಇನ್ಮುಂದೇ ಒನ್ ನೇಷನ್​ ಒನ್​ ರೇಷನ್​ ಯೋಜನೆ ಜಾರಿಯಾದಲ್ಲಿ, ಫಲಾನುಭವಿಗಳು ಪಡಿತರ ಚೀಟಿಯನ್ನು ಬಳಸಿ ದೇಶದ ಯಾವ ಊರಿನಲ್ಲಿ ಇದ್ದರೂ ದೇಶದಾದ್ಯಂತ ರೇಷನ್​ ಪಡೆಯಬಹುದಾಗಿದೆ. ಈ ನಿಯಮದಿಂದ ವಲಸೆ ಹೋಗುವ ಕಾರ್ಮಿಕರಿಗೆ ನೆರವಾಗಲಿದೆ.

Also read: ಅಪಾರ್ಟ್‌ಮೆಂಟ್‌-ನಲ್ಲಿ ಮನೆ ಖರೀದಿಸುವ ಯೋಚನೆಯಲ್ಲಿರುವವರಿಗೆ ಸರ್ಕಾರದಿಂದ ಶಾಕ್; ಇನ್ನೂ ಐದು ವರ್ಷ ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ತಡೆ..

ಒನ್​ ರೇಷನ್​ ಯೋಜನೆಯ ಉದ್ದೇಶ?

ಬಡವರಿಗೆ ಕಡಿಮೆ ದರದಲ್ಲಿ ಆಹಾರಧಾನ್ಯವನ್ನು ದೇಶದ ಎಲ್ಲಾ ಕಡೆ ಪೂರೈಸುವ ನಿಟ್ಟಿನಲ್ಲಿ “ಒಂದು ದೇಶ, ಒಂದು ರೇಷನ್ ಕಾರ್ಡ್” ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಊರಿನಿಂದ ಊರಿಗ ವಲಸೆ ಹೋಗುವ ಕಾರ‍್ಮಿಕರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ಯೋಜನೆಯನ್ನು ಜಾರಿ ಮಾಡುವುದಕ್ಕೆ ಕೇಂದ್ರ ಸರಕಾರ ಮುಂದಾಗಿದ್ದು, ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳುವ ಈ ಜನರು ಮತ್ತೊಂದು ಪಡಿತರ ಚೀಟಿಯನ್ನು ಮಾಡಿಸಿಕೊಳ್ಳುವುದಕ್ಕೆ ಸಮಯವನ್ನು ತೆಗೆದುಕೊಳ್ಳಲಾಗುತ್ತದೆ. ಕೆಲವು ಸಾರಿ ಈ ಕೆಲಸ ನಾನಾ ಕಾರಣಗಳಿಂದ ಸಾಧ್ಯವಾಗದೇ ಇರಬಹುದು, ಹೀಗಾಗಿ ಒನ್‌ ರೇಷನ್ ಕಾರ್ಡ್ ಅನ್ನು ಜಾರಿ ಮಾಡಿದರೆ ದೇಶದ ಯಾವುದೇ ಮೂಲೆಯಲ್ಲಿ ಕೂಡ ಬಳಕೆ ಮಾಡಿ ಪಡಿತರ ಸಾಮಾನುಗಳನ್ನು ಪಡೆದುಕೊಳ್ಳಬಹುದು ಅಂತ ಹೇಳಿದ್ದಾರೆ.

Also read: ಇನ್ಮುಂದೆ ಯಾವುದೇ ತುರ್ತು ಸೇವೆಗೆ ಒಂದೇ ನಂಬರ್; 112ಕ್ಕೆ ಕಾಲ್ ಮಾಡಿ ಎಲ್ಲ ತರಹದ ತುರ್ತು ಸೇವೆ ಪಡೆಯಬಹುದು..

ಈ ಯೋಜನೆಯ ಪ್ರಯೋಜನ ವೇನು?

ಈ ಯೋಜನೆಯಿಂದ ಒಬ್ಬ ವ್ಯಕ್ತಿ ಅಥವಾ ಕುಟುಂಬ ವಿವಿಧ ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ರೇಶನ್ ಕಾರ್ಡ್‍ಗಳನ್ನು ಹೊಂದಿದ್ದರೆ ತಡೆಯಬಹುದು. ಈ ನಿಯಮದಿಂದ ಸರ್ಕಾರದ ಬೊಕ್ಕಸಕ್ಕೂ ಉಳಿತಾಯವಾಗುತ್ತದೆ. ಅಷ್ಟೇ ಅಲ್ಲದೇ ಪಿಡಿಎಸ್ ಹೆಸರಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಗಟ್ಟಲು ನೆರವಾಗಲಿದೆ. ಈ ಯೋಜನೆಯನ್ನು ಜಾರಿ ಮಾಡಲು ಕೇಂದ್ರ ಆಹಾರ ಸಚಿವಾಲಯ ದೇಶದ ಎಲ್ಲ ರೇಷನ್ ಕಾರ್ಡ್‍ಗಳನ್ನು ಒಂದೇ ವ್ಯವಸ್ಥೆಯಡಿಗೆ ತರಲಿದೆ. ಕೇಂದ್ರ ಸರ್ಕಾರ ಇದಕ್ಕಾಗಿ ಇಂಟಿಗ್ರೇಡೆಸ್ ಮ್ಯಾನೇಜ್‍ಮೆಂಟ್ ಆಫ್ ಪಬ್ಲಿಕ್ ಡಿಸ್ಟ್ರಿಬ್ಯೂಷನ್ ಸಿಸ್ಟಂ (ಐಎಂಪಿಡಿಎಸ್) ಮೂಲಕ ಆನ್‍ಲೈನ್ ಡೇಟಾಬೇಸ್ ಮಾಡಲು ಸಿದ್ಧತೆ ನಡೆಸಿದೆ. ಕರ್ನಾಟಕ, ಕೇರಳ, ಆಂಧ್ರ ಪ್ರದೇಶ, ಗುಜರಾತ್, ಹರ್ಯಾಣ, ಜಾರ್ಖಂಡ್, ಮಹಾರಾಷ್ಟ್ರ, ರಾಜಸ್ಥಾನ, ತೆಲಂಗಾಣ ಮತ್ತು ತ್ರಿಪುರಾದಲ್ಲಿ ಈಗಾಗಲೇ ಐಎಂಪಿಡಿಎಸ್ ಜಾರಿಯಲ್ಲಿದೆ. ಈ ರಾಜ್ಯಗಳ ಫಲಾನುಭವಿಗಳು ತಮ್ಮ ಜಿಲ್ಲೆಯ ಯಾವುದೇ ಪಡಿತರ ಅಂಗಡಿಗಳಿಂದ ಆಹಾರ ಧಾನ್ಯ ಖರೀದಿಸಬಹುದಾಗಿದೆ.