೫೦ನೇ ಟೆಸ್ಟ್ ನಲ್ಲಿ ೧೪ನೇ ಶತಕ ಸಿಡಿಸಿದ ಕೊಹ್ಲಿ, ಪೂಜಾರ ಶತಕ

0
626
  • 4ನೇ ಬಾರಿ 150ಕ್ಕೂ ಹೆಚ್ಚು ರನ್ ಸಿಡಿಸಿದ ಕೊಹ್ಲಿ
  • 15ನೇ ಶತಕ ಬಾರಿಸಿದ ವಿರಾಟ್
  • 50ನೇ ಟೆಸ್ಟ್ ಆಡುತ್ತಿರುವ ಕೊಹ್ಲಿ, ರೂಟ್
  • 3000 ರನ್ ಗಡಿ ದಾಟಿದ ಪೂಜಾರ
  • 10ನೇ ಬಾರಿ ಟೆಸ್ಟ್‌ನಲ್ಲಿ ಪೂಜಾರ ಮೂರಂಕಿ ಸಾಧನೆ
  • 5 ಭಾರತದ ಪರ ವೇಗವಾಗಿ 3 ಸಾವಿರ ರನ್ ಕಲೆ ಹಾಕಿದ ಪೂಜಾರ

ವಿಶಾಖಪಟ್ಟಣ: ಟೆಸ್ಟ್ ಕ್ರಿಕೆಟ್ ನ ೫೦ನೇ ಪಂದ್ಯವನ್ನು ವಿರಾಟ್ ಕೊಹ್ಲಿ ಶತಕದೊಂದಿಗೆ ಅವಿಸ್ಮರಣೀಯವಾಗಿಸಿ ಕೊಂಡರೆ, ಚೇತೇಶ್ವರ್ ಪೂಜಾರ ಸತತ ೨ನೇ ಶತಕ ಬಾರಿಸಿದರು. ಇವರಿಬ್ಬರ ಶತಕದ ಜುಗಲ್ ಬಂದಿ ಆಟದಿಂದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದ ಇಂಗ್ಲೆಂಡ್ ಪಾಲಿಗೆ ಭಾರೀ ಹಿನ್ನಡೆಗೆ ಕಾರಣವಾಯಿತು.

ಮೊದಲ ಟೆಸ್ಟ್ ಪಂದ್ಯದ ಸೋಲಿನಿಂದ ಪಾರಾಗಿದ್ದ ಭಾರತ ತಂಡ ಈ ಪಂದ್ಯದಲ್ಲಿ ಅಮೋಘವಾಗಿ ಚೇತರಿಸಿಕೊಳ್ಳುವ ಮೂಲಕ ಭರ್ಜರಿಯಾಗಿ ತಿರುಗೇಟು ನೀಡಿತು. ಗುರುವಾರ ಅರಂಭಗೊಂಡ ಪಂದ್ಯದ ಮೊದಲ ದಿನವೇ ಎರಡು ಶತಕಗಳು ದಾಖಲಾಗಿದ್ದು, ಮೊದಲ ಇನಿಂಗ್ಸ್ ನಲ್ಲಿ ೪ ವಿಕೆಟ್ ಗೆ ೩೧೭ ರನ್ ಕಲೆ ಹಾಕಿರುವ ಭಾರತ ಬೃಹತ್ ಮೊತ್ತದ ಸೂಚನೆ ನೀಡಿದೆ.

ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲಿನಿಂದ ಪಾರು ಮಾಡಿದ್ದ ನಾಯಕ ವಿರಾಟ್ ಕೊಹ್ಲಿ ಪಾಲಿಗೆ ಇದು ೫೦ನೇ ಟೆಸ್ಟ್. ಈ ಅವಿಸ್ಮರಣೀಯ ಪಂದ್ಯದಲ್ಲಿ ಶತಕ ಸಿಡಿಸಿದ ಕೊಹ್ಲಿ ಮತ್ತಷ್ಟು ಅವಿಸ್ಮರಣೀಯವಾಗಿಸಿ ಕೊಂಡರು.

ಇದು ಕೊಹ್ಲಿ ಪಾಲಿಗೆ ೧೪ನೇ ಶತಕವಾಗಿದೆ. ೨೪೧ ಎಸೆತಗಳಲ್ಲಿ ೧೫ ಬೌಂಡರಿ ನೆರವಿನೊಂದಿಗೆ ೧೫೧ ರನ್ ಬಾರಿಸಿ ಅಜೇಯರಾಗಿ ಉಳಿದಿದ್ದು, ದ್ವಿಶತಕದ ಕನಸು ಬಿತ್ತಿದ್ದಾರೆ.

ಮತ್ತೊಂದೆಡೆ ನಾಯಕನಿಗೆ ಭರ್ಜರಿ ಸಾಥ್ ನೀಡಿದ ಚೇತೇಶ್ವರ್ ಪೂಜಾರ ಕೂಡ ಶತಕದ ಗೌರವ ಸಂಪಾದಿಸಿದರು. ೨೦೪ ಎಸೆತಗಳಲ್ಲಿ ೧೨ ಬೌಂಡರಿ ಹಾಗೂ ೨ ಸಿಕ್ಸರ್ ಸೇರಿದಂತೆ ೧೧೯ ರನ್ ಬಾರಿಸಿದ ಪೂಜಾರ ೩ನೇ ವಿಕೆಟ್ ಗೆ ೨೪೮ ರನ್ ಗಳ ಜೊತೆಯಾದಲ್ಲಿ ಪಾಲ್ಗೊಂಡರು. ೨೩ ರನ್ ಗಳಿಸಿದ ಅಜಿಂಕ್ಯ ರಹಾನೆ ಕೊನೆಯಲ್ಲಿ ಔಟಾದರು.

ಸಂಕ್ಷಿಪ್ತ ಸ್ಕೋರ್: ಭಾರತ ಮೊದಲ ಇನಿಂಗ್ಸ್ ೪ ವಿಕೆಟ್ ಗೆ ೩೧೭ ( ಕೊಹ್ಲಿ ೧೫೧*, ಪೂಜಾರ ೧೧೯, ಮುರಳಿ ೨೦, ರಹಾನೆ ೨೩, ಅಂಡರ್ಸನ್ ೪೦/೨).