15 ದಿನಗಳ ಒಳಗೆ ಬರ್ಥ್, ಡೆತ್ ಸರ್ಟಿಫಿಕೇಟ್ ಪಡೆಯುವುದು ಹೀಗೆ !

0
1152

ಕೇಂದ್ರ ಸರ್ಕಾರ ಸಿವಿಲ್‌ ರಿಜಿಸ್ಟ್ರೆಷನ್ ಸಿಸ್ಟಮ್(CRS) ಎಂಬ ಒಂದು ಹೊಸ ಪ್ರೊಗ್ರಾಮ್ ಮೂಲಕ ಜನನ, ಮರಣ ದೃಢೀಕರಣ ಪತ್ರಗಳನ್ನು ನೀಡುತ್ತಿದೆ. ಅದಕ್ಕಾಗಿ ನೀವು ಎಲ್ಲಿಯೂ ಹೋಗಬೇಕಾಗಿಲ್ಲ. ಮನೆಯಲ್ಲೇ ಆನ್ಲೈನ್ ಮೂಲಕ ಸುಲಭವಾಗಿ ನಿಮಗೆ ಬೇಕಾದ ಸರ್ಟಿಫಿಕೇಟ್ ಪಡೆಯಬಹುದು.

ಬರ್ಥ್, ಡೆತ್ ಸರ್ಟಿಫಿಕೇಟ್’ಗಾಗಿ ಎಷ್ಟೊಂದು ಕಷ್ಟ ಪಡಬೇಕು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅವುಗಳಿಗಾಗಿ ನಾಡ ಕಚೇರಿ, ತಹಶಿಲ್ದಾರ್ ಕಚೇರಿ, ಇತ್ಯಾದಿ ಸಂಬಂಧಿತ ಕಚೇರಿಗಳ ಸುತ್ತ ಸುತ್ತಬೇಕು. ಆದರೂ ಕೆಲಸ ಆಗುತ್ತದೆ ಎಂಬ ಗ್ಯಾರಂಟಿ ಇಲ್ಲ. ಮಧ್ಯವರ್ತಿಗಳ ಬಳಿ ಹೋದರೆ ಸರ್ಟಿಫಿಕೇಟ್’ಗೆ ಒಂದು ಸಾವಿರದಿಂದ ಮೂರು ಸಾವಿರ ರೂಪಾಯಿ ಡಿಮೆಂಡ್ ಮಾಡುತ್ತಾರೆ. ಅವಶ್ಯಕತೆ ನಮ್ಮದು ನೋಡಿ, ಹಾಗಾಗಿ ಅವರು ಕೇಳಿದಷ್ಟು ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತವೆ. ಈಗ ಇಂತಹ ಕಷ್ಟ ಪಡಬೇಕಾಗಿಲ್ಲ.

http://crsorgi.gov.in/web/index.php/auth/signUp ವೆಬ್ಸೈಟ್ ಲಿಂಕ್’ಗೆ ಭೇಟಿ ನೀಡಿ ಅದರಲ್ಲಿ ಕೇಳಿದ ವಿವರಗಳನ್ನು ಭರ್ತಿ ಮಾಡಿದರೆ ಸಾಕು. 15 ದಿನಗಳಲ್ಲಿ ನಿಮಗೆ ಬೇಕಾದ ಸರ್ಟಿಫಿಕೇಟ್ ಮನೆಗೆ ಬರುತ್ತದೆ. ಅದಕ್ಕೆ ಯಾವುದೇ ರೀತಿಯ ಶುಲ್ಕ ನೀಡಬೇಕಾಗಿಲ್ಲ. ಈ ವೆಬ್ಸೈಟ್ ಸಂಬಂಧಿಸಿದ mCRS Civil Registration System ಎಂಬ ಒಂದು ಆಂಡ್ರಾಯ್ಡ್ ಆ್ಯಪ್ ಸಹ ನಮಗೆ ಸಹಾಯ ಮಾಡುತ್ತದೆ. ಅದನ್ನು ನಮ್ಮ ಪೋನ್’ನಲ್ಲಿ ಇನ್‌ಸ್ಟಾಲ್ ಮಾಡಿಕೊಂಡು ಈಗಾಗಲೇ ಹೇಳಿದಂತೆ ವಿವರಗಳನ್ನು ತುಂಬಿದರೆ ಸಾಕು ಸರ್ಟಿಫಿಕೇಟ್ ಪಡೆಯಬಹುದು.

ಮೇಲೆ ಹೇಳಿದ ಆ್ಯಪ್ ಅಥವಾ ವೆಬ್ಸೈಟ್’ನಲ್ಲಿ ವಿವರಗಳನ್ನು ತುಂಬಿ, 15 ದಿನಗಳ ನಂತರ ನಿಮಗೆ ಬೇಕಾದ ಸರ್ಟಿಫಿಕೇಟ್ ಸಿದ್ಧವಾಗುತ್ತದೆ. ಅದನ್ನು ನೀವು ಈ ಮುಂಚೆ ನೀಡಿದ ಇಮೇಲ್’ಗೆ ಕಳುಹಿಸುತ್ತಾರೆ. ಅಥವಾ ಮೇಲೆ ಹೇಳಿದ ವೆಬ್ಸೈಟ್’ನಲ್ಲೇ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದೆಲ್ಲಾ ನಿಮ್ಮ ಕೈಬೆರಳಿನ ತುದಿಯಿಂದ ನಡೆಯುವ ಪ್ರಕ್ರಿಯೆ. ಎಲ್ಲಿಯೂ ಹೋಗಬೇಕಾಗಿಲ್ಲ. ಕಳೆದ ಡಿಸೆಂಬರ್ 1ರಿಂದ ಈ ವ್ಯವಸ್ಥೆ ಕಲ್ಪಿಸಿದ್ದರೂ ಬಹಳಷ್ಟು ಜನರಿಗೆ ಇದರ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಅದರಿಂದ ಸಾಧ್ಯವಾದಷ್ಟು ಇದನ್ನು ಶೇರ್ ಮಾಡಿ ಇದರ ಬಗ್ಗೆ ತಿಳಿಸಿ. ಇದರಿಂದ ತುಂಬಾ ಜನರಿಗೆ ಅನುಕೂಲವಾಗಲಿದೆ.