ಸೊಪ್ಪುಗಳಲ್ಲೇ ಶ್ರೇಷ್ಟ ಚಕ್ರಮುನಿ ಸೊಪ್ಪು ಹಾಗಾದರೆ ಇದರ ಮಹತ್ವ ನೀವು ತಿಳಿದುಕೊಳ್ಳಲೇಬೇಕು..!

0
1670

ಆಹಾರ ಮತ್ತು ಆರೋಗ್ಯಕ್ಕೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಆಹಾರ ಪೋಷಣೆಯು ಸಮರ್ಪಕವಾಗಿದ್ದರೆ ಮಾತ್ರ ಸದೃಡ ಆರೋಗ್ಯ ಸಾಧ್ಯ. ನಾವು ಅರೋಗ್ಯಕ್ಕೆ ಬೇಕಾದ ಎಲ್ಲ ಪೋಷಕಾಂಶಗಳನ್ನು ನಾವು ಸೇವಿಸುವ ಆಹಾರದಿಂದ ಪಡೆಯಬೇಕು. ಪರಿಪೂರ್ಣ ಆರೋಗ್ಯಕ್ಕಾಗಿ ಪ್ರತಿಯೊಬ್ಬರಿಗೂ ಸಮತೋಲನ ಆಹಾರದ ಅವಶ್ಯಕತೆ ಇದೆ.

Related image
ಸಮತೋಲನ ಆಹಾರವು ನಮ್ಮ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾಗುವ ಎಲ್ಲಾ ಪೋಷಕಾಂಶಗಳನ್ನು ಮತ್ತು ಶಕ್ತಿಯನ್ನು ಬೇಕಾದ ಪ್ರಮಾಣದಲ್ಲಿ ನೀಡುತ್ತದೆ. ಈ ನಿಟ್ಟಿನಲ್ಲಿ ಚಕ್ರಮುನಿ ಒಂದು ಪರಿಪೂರ್ಣ ಸೊಪ್ಪು. ಇದರಲ್ಲಿ ಬೇರೆ ಸೊಪ್ಪುಗಳಿಗೆ(ಸಬ್ಬಸಿಗೆ, ಮೆಂತ್ಯ, ದಂಟು, ಪುದಿನಾ, ಗಣಿಕೆ, ಬಸಳೆ, ಹೊನಗೊನೆ ಮತ್ತು ಪಾಲಕ್) ಹೋಲಿಸಿದಾಗ ಹೆಚ್ಚಿನ ಪ್ರಮಾಣದಲ್ಲಿ ಸಸಾರಜನಕ(ಪ್ರೋಟೀನ್), ಕೊಬ್ಬು, ಖನಿಜಾಂಶಗಳು, ಸಕ್ಕರೆ-ಪಿಷ್ಠ, ಸುಣ್ಣ, ರಂಜಕ ಮತ್ತು ಕಬ್ಬಿಣಾಂಶಗಳನ್ನು ಹೊಂದಿರುತ್ತದೆ. ನಾರಿನಾಂಶವು ಸಹ ಸಾಕಷ್ಟು ಪ್ರಮಾಣದಲ್ಲಿರುತ್ತದೆ ಮತ್ತು ಅತ್ಯಧಿಕ ಶಕ್ತಿಯನ್ನು ನೀಡುತ್ತದೆ.

Image

ಇತರೆ ಸೊಪ್ಪುಗಳಿಗೆ ಹೋಲಿಸಿದಾಗ ಚಕ್ರಮುನಿ ಸೊಪ್ಪು ಅತ್ಯಧಿಕ ಪ್ರಮಾಣದಲ್ಲಿ ಸಿ, ಬಿ1 ಮತ್ತು ಬಿ3 ಜೀವಸತ್ವಗಳನ್ನು ಹೊಂದಿರುತ್ತದೆ. ಇದರಲ್ಲಿದೆ ಎ ಮತ್ತು ಬಿ ಜೀವಸತ್ವಗಳನ್ನು ಸಹ ಸಾಕಷ್ಟು ಪ್ರಮಾಣದಲ್ಲಿ ಹೊಂದಿರುತ್ತದೆ. ಒಟ್ಟಿನಲ್ಲಿ ಚಕ್ರಮುನಿ ಸೊಪ್ಪನ್ನು ಸೊಪ್ಪುಗಳ ರಾಜ ಎಂದರೆ ತಪ್ಪಾಗಲಾರದು. ಚಕ್ರಮುನಿ ಸೊಪ್ಪು ಪೂರ್ಣವಾಗಿ ಬೆಳೆದಾಗ 2-3 ಮೀ ಎತ್ತರ ಪೊದೆಯಂತೆ ಕಾಣುತ್ತದೆ. ಪಕ್ಕದ ರೆಂಬೆಗಳು ನೆಲಮುಖವಾಗಿ ಇಳಿಬಿದ್ದಿರುತ್ತವೆ. ಸಸ್ಯಭಾಗಗಳು ಹಸಿರಾಗಿದ್ದು ನೋಡಲು ಅಕರ್ಷಕವಾಗಿರುವವು. ಎಲೆಗಳು ಕಿರಿದಾದ ತೊಟ್ಟುಗಳಿಂದ ಕೂಡಿರುತ್ತವೆ ಮತ್ತು ಅಂಚು ಒಡೆದಿರುವುದಿಲ್ಲ. ಎಲೆಗಳ ಉದ್ದ 2.5 ರಿಂದ 7.5 ಸೆಂಮೀ ಹಾಗೂ ಅಗಲ 1.25 ರಿಂದ 3 ಸೆಂ.ಮೀ. ಚಕ್ರಮುನಿ ಸೊಪ್ಪನ್ನು ಹಸಿಯಾಗಿ ತಿನ್ನಬಹುದು ಬೇಯಿಸಿ ಸಾರು, ಪಲ್ಯ ಹಾಗೂ ಚಟ್ನಿ ಮುಂತಾದ ವಿಧದಲ್ಲಿ ಉಪಯೋಗಿಸಬಹುದು.