ಅದ್ಭುತ ಸಂಜೀವಿನಿ – ಚಕ್ರಮುನಿ

0
1787

ಮಲ್ಟಿ ವಿಟಮಿನ್ ಪ್ಲಾಂಟ್ ಎಂದೇ ಕರೆಯಲ್ಪಡುವ ಚಕ್ರಮುನಿ ಒಂದು ಔಷಧೀಯ ಸಸ್ಯ. ವರ್ಷವಿಡೀ ಸಿಗುವ ಚಕ್ರಮುನಿ ಸೊಪ್ಪು ಅದ್ಭುತ ಮತ್ತು ಅತ್ಯಂತ ಉಪಯುಕ್ತವಾದದ್ದು.

ವಿಶೇಷವಾಗಿ ಇದರಲ್ಲಿ ಅತೀ ಹೆಚ್ಚು ವಿಟನಿನ್ ‘ಎ’ ಸತ್ವವನ್ನು ಅಂದರೆ 100 ಗ್ರಾಂ ಗೆ 47500 ಐ. ಯುನ್ನು ಹೊಂದಿರುತ್ತದೆ.

ಚಕ್ರಮುನಿ ಸೊಪ್ಪಿನ ಅನುಕೂಲಗಳು

*ಪ್ರಮುಖವಾಗಿ ರಕ್ತದ ಕೊರತೆಯನ್ನು ನಿವಾರಿಸಿ ರಕ್ತವೃದ್ಧಿಗೆ ನೆರವಾಗುತ್ತದೆ.

*ಮುಖ್ಯವಾಗಿ ಕಣ್ಣಿನ ನರಗಳನ್ನು ಸದೃಢಗೊಳಿಸಿ ನೇತ್ರಗಳ ಆರೋಗ್ಯವನ್ನು ಕಾಪಾಡುತ್ತದೆ.

*ದೇಹದಲ್ಲಿರುವ ವಿಷಾಂಶಗಳನ್ನು ಹೊರ ಹಾಕುತ್ತದೆ.

*ಸಮತಾನ ಪ್ರಾಪ್ತಿಗೂ ಸಹಾಯವಾಗುತ್ತದೆ.

*ಬಾಯಿಯಲ್ಲಿ. ದೇಹದಲ್ಲಿ ಹುಣ್ಣುಗಳು ಬೆಳೆಯದಂತೆ ನೋಡಿಕೊಳ್ಳುತ್ತದೆ,

*ಕ್ಯಾನ್ಸರ್ ಕಾರಣ ಅಂಶಗಳನ್ನು ಹೊರ ಹಾಕಿ ಆರೋಗ್ಯ ರಕ್ಷಿಸಿ ಕ್ಯಾನ್ಸರ್ ಬರದಂತೆ ನೋಡಿಕೊಳ್ಳುತ್ತದೆ.

*ಮೂತ್ರಪಿಂಡಗಳು ಸುರಕ್ಷಿತವಾಗಿರುವಂತೆ ಬೆಂಬಲಿಸುತ್ತದೆ.

*ಕರುಳಿನ ಚಟುವಟಿಕೆಯನ್ನು ಚುರುಕಾಗಿಡುತ್ತದೆ.

*ಹಲ್ಲು, ವಸಡುಗಳ ರಕ್ಷಣೆ, ಹಲ್ಲಿನ ನೋವು, ವಸಡಿನ ರಕ್ತಸ್ರಾವವನ್ನು ತಡೆಯಲು ಸಹಕಾರಿಯಾಗಿದೆ,

*ಸಂಧಿವಾತ, ದೇಹದ ತೂಕ ಇಳಿಸಲು ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಪೂರಕವಾಗಿದದೆ.

*ಇದರ ಸೊಪ್ಪಿನಲ್ಲಿ ಹೇರಳವಾದ ಕ್ಲೋರೋಫಿಲ್ ಇದೆ, ಇದು ರಕ್ತದಲ್ಲಿರುವ ಹಮಿನ್ ಗೆ ಸಮಾನವಾದದು ಆದ್ದರಿಂದ ರಕ್ತಶುದ್ಧಿಗೆ, ರಕ್ತ ವೃದ್ಧಿಗೆ ಸೊಪ್ಪಿನ ಸೇವನೆ ಬಹು ಉಪಯುಕ್ತವಾದುದು.

*ಗಿಡಗಳನ್ನು ಬೆಳೆಸುವ ವಿಧಾನ:

*ಗಿಡಗಳನ್ನು ಕಾಂಡದ ತುಂಡುಗಳಿಂದ ವೃದ್ಧಿಸಬಹುದು ಇತರೇ ಸಸ್ಯಗಳ, ಗಿಡಗಳ ಪಕ್ಕದಲ್ಲೂ ಹಾಕಬಹುದು. ಸಾವಯವ ಗೊಬ್ಬರ, ಸಗಣಿ ಗೊಬ್ಬರ, ಕಸ ಕಡ್ಡಿಗಳನ್ನು ಬುಡಕ್ಕೆ ಹಾಕಿ ನೀರು ಕೊಡುತ್ತಿದ್ದರೆ ಗಿಡದಲ್ಲಿ ಒಳ್ಳೆಯ ಸೊಪ್ಪು ಸಿಗುತ್ತದೆ.

*ಚಕ್ರಮುನಿಯನ್ನು ಸರ್ವರೂ ಬೆಳೆಸಿರಿ, ಜೀವನದ ಸಂಜೀವಿನಿಯಗಿ ಸ್ವೀಕರಿಸಿ.