ದರ್ಶನ್ ಸೇರಿ ೯ ನಾಯಕರಿಗೆ ದಿನಕರ್ ಒಬ್ಬನೇ ವಿಲನ್: ಇದು ಚಕ್ರವರ್ತಿ ಹೈಲೇಟ್

0
1774

ಬಹುನಿರೀಕ್ಷಿತ ಚಕ್ರವರ್ತಿ ಚಿತ್ರದ ಒಂದೊಂದೇ ರಹಸ್ಯ ಬಹಿರಂಗವಾಗುತ್ತಿದ್ದು, ಅಭಿಮಾನಿಗಳ ಕುತೂಹಲ ದಿನ ದಿಂದ ಹೆಚ್ಚುತ್ತಿದೆ.

ಚಕ್ರವರ್ತಿ ಚಿತ್ರದ ಹೀರೊ ದರ್ಶನ್ ಹಾಗೂ ನಾಯಕಿ ದೀಪಾ ಸನ್ನಿಧಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.
ಇದೀಗ ಈ ಚಿತ್ರದಲ್ಲಿ ೯ ನಾಯಕ ನಟರು ನಟಿಸುತ್ತಿರುವ ವಿಷಯ ಬಹಿರಂಗವಾಗಿದೆ. ಹಿಂದೇ ದರ್ಶನ್ ಬ್ಯಾನರ್ ನಲ್ಲಿ ದಿನಕರ್ ನಿರ್ದೇಶಿಸಿದ್ದ ನವಗ್ರಹ ಚಿತ್ರದಲ್ಲಿ ೯ ಖಳ ನಟರ ಮಕ್ಕಳು ಅಭಿನಯಿಸಿದ್ದರು.

ಈ ಚಿತ್ರದಲ್ಲಿ ೯ ಮಂದಿ ನಾಯಕ ನಟರು ನಟಿಸುತ್ತಿ ದ್ದಾರೆ. ಇವರೆಲ್ಲರಿಗೂ ಮಹತ್ವದ ಪಾತ್ರವನ್ನೇ ನೀಡಲಾ ಗಿದೆಯಂತೆ.

ಕುಮಾರ್ ಬಂಗಾರಪ್ಪ, ಸೃಜನ್ ಲೋಕೇಶ್, ಎಕೆ೫೬ ಚಿತ್ರದ ಸಿದ್ಧಾರ್ಥ, ಗುಂಡ್ರಗೋವಿ ಚಿತ್ರದ ಸತ್ಯ, ಶರಾ ವತಿ ತೀರದ ಭರತ್, ಹರೀಶ್ ರಾಯ್, ಶಿವಶ್ವಜ್, ದೋಣಿ ಸಾಗಲಿ ಚಿತ್ರದ ಯಶಸ್, ದರ್ಶನ್ ಅಕ್ಕನ ಮಗ ಮನೋಜ್ ನಟಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಇದೆಲ್ಲದಕ್ಕಿಂತ ಮತ್ತೊಂದು ಸ್ಫೋಟಕ ರಹಸ್ಯ ಅಂದರೆ ದರ್ಶನ್ ಸೋದರ ಹಾಗೂ ನಿರ್ದೇಶಕ ದಿನಕರ್ ಈ ಚಿತ್ರದ ಮೂಲಕ ಬಣ್ಣ ಹಚ್ಚುತ್ತಿದ್ದಾರೆ. ಇನ್ನೊಂದು ವಿಷಯ ಅಂದರೆ ದರ್ಶನ್ ಗೆ ಅಪೊಸಿಟ್ ಆಗಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಲನ್ ಪೋಷಾಕಿನಲ್ಲಿ ದಿನಕರ್, ತಂದೆ ತೂಗುದೀಪ ಅವರನ್ನು ಹೋಲುತ್ತಿದ್ದು ತೆರೆ ಮೇಲೆ ಹೇಗೆ ನಟಿಸಿದ್ದಾರೆ ಎಂಬ ಕುತೂಹಲ ಹೆಚ್ಚಿದೆ.

ಮಲೇಷ್ಯಾದಲ್ಲಿ ಶೂಟಿಂಗ್ ಮುಗಿಸಿರುವ ಚಕ್ರವರ್ತಿ ತಂಡ ಇದೀಗ ಎರಡನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದೆ.