ಚಕ್ರವರ್ತಿ ದಾಖಲೆ ಮುರಿಯಲು ಹೋಗಿ ಹಿಂದೆ ಸರಿದ ಬಾಹುಬಲಿ…!

0
943

ಕನ್ನಡದ ಚಕ್ರವರ್ತಿ ಬಿಡುಗಡೆ ಮುನ್ನ ಮತ್ತು ಬಿಡುಗಡೆಯಾಗಿ ಹಲವು ದಾಖಲೆಯನ್ನು ಮಾಡಿದೆ. ಪ್ರಭಾಸ್ ಅಭಿನಯದ ‘ಬಾಹುಬಲಿ-2’ ಚಿತ್ರ ಕೂಡಾ ಬಿಡುಗಡೆಗೆ ಮುನ್ನವೇ ಸುದ್ದಿಯಾಗಿ ಮೇನಿಯಾ ಸೃಷ್ಟಿಸಿದೆ.

 

‘ಬಾಹುಬಲಿ-2’ ಜಾಗತಿಕ ದಾಖಲೆ ಬರೆಯಲು ಹೊರಟಿದೆ ಎಂದೇ ಹೇಳಲಾಗುತ್ತಿದೆ. ಆದರೆ ಕನ್ನಡ ಚಿತ್ರರಂಗದಲ್ಲಿ ದರ್ಶನ್ ಅಭಿನಯದ ಚಕ್ರವರ್ತಿ ನಿರ್ಮಿಸಿದ ದಾಖಲೆಯನ್ನು ಅಳಿಸಿ ಹಾಕಲು ಬಾಹುಬಲಿಯ ಭುಜಬಲದಿಂದ ಸಾಧ್ಯವಿಲ್ಲ.
‘ಚಕ್ರವರ್ತಿ’ ಕನ್ನಡ ಚಿತ್ರರಂಗದಲ್ಲಿ ಒಂದು ಚರಿತ್ರೆ ಎನಿಸಿತು. ಚಿತ್ರ ವೀಕ್ಷಿಸಲು ಜನ ಕಾತುರದಿಂದ ಕಾದಿದ್ದರಿಂದಾಗಿ ಚಿತ್ರ ಬಿಡುಗಡೆಯ ಮುನ್ನಾದಿನ ಮಧ್ಯ ರಾತ್ರಿಯೇ ಪ್ರದರ್ಶನವಾಗಿತ್ತು. ಒಂದು ಮಧ್ಯರಾತ್ರಿಯಿಂದ ಮರುದಿನ ಮಧ್ಯರಾತ್ರಿವರೆಗೆ ನಿರಂತರ ಪ್ರದರ್ಶನ ನೀಡಿದ ದಾಖಲೆ ಮತ್ತು ಖ್ಯಾತಿಗೆ ‘ಚಕ್ರವರ್ತಿ’
ಚಿತ್ರ ಪಾತ್ರವಾಯಿತು.

 

ಇದೇರೀತಿ ಆಂಧ್ರ ಹಾಗೂ ತೆಲಂಗಾಣಗಳಲ್ಲಿ ಮಧ್ಯರಾತ್ರಿಯಿಂದ ಮರುದಿನ ಮಧ್ಯರಾತ್ರಿವರೆಗೆ ‘ಬಾಹುಬಲಿ-2’ ಪ್ರದರ್ಶನ ಮಾಡುವ ಪ್ರಯತ್ನಕ್ಕೆ ಚಿತ್ರತಂಡ ಮುಂದಾಗಿತ್ತು . ಆದರೆ ನಿರಂತರ ಪ್ರದರ್ಶನದ ನಡುವೆ ಯಾವುದಾದರೊಂದು ಶೋ ಹೌಸ್ ಫುಲ್ ಆಗದಿದ್ದರೆ ಮುಜುಗರದ ಸನ್ನಿವೇಶ ಸೃಷ್ಟಿಯಾಗಬಹುದು ಎಂಬ ಕಾರಣಕ್ಕಾಗಿ 24 ತಾಸುಗಳ ನಿರಂತರ ಪ್ರದರ್ಶನದಿಂದ ‘ಬಾಹುಬಲಿ-2’ ತಂಡ ಹಿಂದೆ ಸರಿಯಿತೆನ್ನಲಾಗಿದೆ.