ಕೇವಲ ಒಂದು ಬಾಟಲಿ ನೀರಿನಿಂದಲೇ ಕಾರು ಸರ್ವಿಸ್ ಮಾಡಬಹುದಂತೆ, ಅದು ಹೇಗೆ ಸಾಧ್ಯ ನೀವೇ ನೋಡಿ…!

0
747

ಈಗಿನ ದಿನಗಳಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುವ ಸ್ಥಿತಿ ಬಂದಿದೆ. ಇನ್ನು ಸಿಟಿ ಗಳಲ್ಲಿ ಅಂತು ಜನ ನೀರಿಗೆ ಸಾವಿರಾರು ರೂಪಾಯಿ ವ್ಯಯ ಮಾಡುತ್ತಾರೆ. ಇನ್ನು ಇಷ್ಟೆಲ್ಲಾ ತೊಂದರೆ ಇದ್ದರು ಕೆಲವರು ವಾಹನ ತೊಳೆಯಲು ನೂರಾರು ಲೀಟರ್ಗಳಷ್ಟು ನೀರನ್ನು ಪೋಲು ಮಾಡುತ್ತಾರೆ. ಇದಕ್ಕೆಲ್ಲ ಪರಿಹಾರ ಕಂಡುಹಿಡಿದ್ದಾರೆ, ನಮ್ಮ ಕರ್ನಾಟಕದ ಈ ಇಂಜಿನಿಯರ್.

ಹೌದು, ಕುಡಿಯುವ ನೀರಿಗಾಗಿ ರಾಜ್ಯಗಳು ಮತ್ತು ದೇಶಗಳು ಪರದಾಡುತ್ತಿರುವಾಗ ವಾಹನ ತೊಳೆಯಲು ನೂರಾರು ಲೀಟರ್ ನೀರು ವೇಸ್ಟ್ ಮಾಡುವುದು ಎಷ್ಟು ಸರಿ ಎಂದು ಯೋಚಿಸಿದ ವಿಕಾಸ್ ಅವರು, ಒಂದು ಹೊಸ ವಿಧಾನವನ್ನು ಕಂಡುಹಿಡಿದ್ದಾರೆ. ಇದರ ಮೂಲಕ ನೀವು ನಿಮ್ಮ ಕಾರನ್ನು ಅತಿ ಕಡಿಮೆ ನೀರಿನಲ್ಲಿ, ಅಂದರೆ ಕೇವಲ 3 ಲೀಟರ್ ನೀರಿನಲ್ಲಿ ಸ್ವಚ್ಛಾಗೊಳಿಸಬಹುದಂತೆ.

ವಿಕಾಸ್ ಅವರು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ನಿವಾಸಿ, ಜರ್ಮನಿಯಲ್ಲಿ ಐದು ವರ್ಷಗಳ ಕಾಲ ಆಟೋಮೊಬೈಲ್ ಇಂಜಿನಿಯರಿಂಗ್-ನಲ್ಲಿ ಸ್ನಾತಕೋತರ ಪದವಿ ಮುಗಿಸಿ, ಪ್ರತಿಷ್ಠಿತ ಫೋಕ್ಸ್ ವೆಗಾನ್ ಕಾರು ತಯಾರಿಕಾ ಕಂಪನಿಯಲ್ಲಿ ಸಲಹೆಗಾರನಾಗಿ ಒಂದು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ.

ವಿಕಾಸ್ ಅವರು ಗುಂಡ್ಲುಪೇಟೆ ಪಟ್ಟಣ ಪುರಸಭೆಯ ಮಾಜಿ ಅಧ್ಯಕ್ಷೆ, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಪುಟ್ಟತಾಯಮ್ಮನವರ ಮೊಮ್ಮಗ, ತಾವು ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ, ಕಾರುಗಳನ್ನು ಸರ್ವಿಸ್ ಮಾಡಲು ಅಧಿಕ ಪ್ರಮಾಣದಲ್ಲಿ ನೀರು ಪೋಲಾಗುತ್ತಿರುವುದನ್ನು ಗಮನಿಸಿದ ಅವರು, ಹೇಗಾದರು ಮಾಡಿ ಕಡಿಮೆ ನೀರು ಬಳಕೆಯ ಉಪಾಯ ಹುಡುಕಬೇಕು ಎಂದು ತಮ್ಮ ಸ್ನೇಹಿತರೊಂದಿಗೆ ಚರ್ಚಿಸಿ, ನೀರು ಉಳಿಸಲು ಯೋಜನೆ ರೂಪಿಸಿದರು, ಆಗ ಅವರಿಗೆ ಹೊಳೆದಿದ್ದೇ ದ್ರವಣವನ್ನು ಬಳಸಿ ಕೇವಲ 3 ರಿಂದ 5 ಲೀಟರ್ ನೀರಿನಲ್ಲಿ ಕಾರುಗಳನ್ನು ಸರ್ವಿಸ್ ಮಾಡುವ ವಿಧಾನ.

ಸರ್ವಿಸ್ ಸ್ಟೇಷನ್ ಗಳಲ್ಲಿ ಒಂದು ಕಾರು ಸರ್ವಿಸ್ ಮಾಡಲು 150ರಿಂದ 180 ಲೀಟರ್ ನೀರು ಬೇಕಾಗುತ್ತದೆ. ಆದರೆ, ವಾಹನದ ಹೊರಭಾಗ, ಟಯರ್, ಒಳಭಾಗ ಮತ್ತು ಗಾಜುಗಳಿಗೆ ಪ್ರತ್ಯೇಕ ಪರಿಸರಸ್ನೇಹಿ ದ್ರವಣವನ್ನು ಬಳಸಿ ಬಟ್ಟೆಗಳಿಂದ ಒರೆಸುವ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿದ್ದ ನೀರಿನ ಪ್ರಮಾಣವನ್ನು ಕಡಿಮೆ ಮಾಡಿದ್ದಾರೆ.

ಪ್ರಾರಂಬಿಕವಾಗಿ ತಮ್ಮ ಸ್ನೇಹಿತರು ಮೈಸೂರಿನ ಕುವೆಂಪು ನಗರದಲ್ಲಿ ಪ್ರಾರಂಭಿಸಿರುವ ಸರ್ವಿಸ್ ಕೇಂದ್ರದಲ್ಲಿ, ಜರ್ಮನಿಯಿಂದ ಭಾರತಕ್ಕೆ ಮರುಳಿದ ನಂತರ ವಿಕಾಸ್ ತಮ್ಮ ವಿನೂತನ ಪ್ರಯೋಗವನ್ನು ಕಾರ್ಯರೂಪಕ್ಕೆ ತರಲು ಮುಂದಾಗಿದ್ದಾರೆ.

ವಿಕಾಸ್ ಅವರು ತಮ್ಮ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು-ಗಳಿಸಿದ್ದಾರೆ. ತಮ್ಮ ಈ ವಿನೂತನ ಪ್ರಯೋಗ ಇವರ ಕೈಹಿಡಿದಿದೆ. ಇದರಿಂದ ಪ್ರೇರಿತರಾದ ಅವರು ತಮ್ಮ ಸರ್ವಿಸ್ ಸ್ಟೇಷನ್-ಗಳಲ್ಲಿ, ನಿರುದ್ಯೋಗ ಕಿವುಡ, ಮೂಕ ಯುವಕ-ಯುವತಿಯರಿಗೆ ತರಬೇತಿ ನೀಡಿ ಕೆಲಸಕ್ಕೆ ನೇಮಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ಈ ಪರಿಸರಸ್ನೇಹಿ ಯೋಜನೆಯಿಂದ ಸಮಾಜದ ಎಲ್ಲ ವರ್ಗದವರಿಗು ತುಂಬ ಲಾಭವಾಗುತ್ತಿರುವುದು ಹೆಮ್ಮೆಯ ಸಂಗತಿ ಅಲ್ಲವೇ…!