ಭಾರತ್ ಮಾತಾ ಕೀ ಜೈ ಅಂತ ಹೇಳಿದ್ದೇ ತಪ್ಪಾಯ್ತಾ? ಪ್ರಾಣ ಕಳೆದು ಕೊಂಡ ಯುವಕನ ತಾಯಿಯ ರೋದನ..

0
576

ಈ ನೆಲದಲ್ಲೇ ಬದುಕಿ, ಹಿಂದೂಸ್ತಾನ್ ಜಿಂದಾಬಾದ್… ಭಾರತ್ ಮಾತಾ ಕೀ ಜೈ ಅಂತ ಹೇಳೋದು ಅಪರಾಧವಾಗೋದಾದ್ರೆ ನನ್ನನ್ನೂ ಕೂಡ ಗುಂಡಿಕ್ಕಿ ಸಾಯಿಸಿ ಅಂತ ಚಂದನ್ ತಾಯಿ ಸಂಗೀತ ಗುಪ್ತಾ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಉತ್ತರಪ್ರದೇಶದ ಕಾಸ್ ಗಂಜ್ ನಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಗಣರಾಜ್ಯೋತ್ಸವ ದಿನದಂದು ವಿಶ್ವ ಹಿಂದೂ ಪರಿಷತ್‌ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಕಾರ್ಯಕರ್ತರು ಮೆರವಣಿಗೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಿದ್ದು, ಚಂದನ್‌ಗುಪ್ತಾ ಎಂಬ ಯುವಕ ಮೃತಪಟ್ಟಿದ್ದ.

ಇನ್ನು ಶನಿವಾರ ನಡೆದ ಹಿಂಸಾಚಾರದಲ್ಲಿ ಅಂಗಡಿ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿ ಹಾನಿಯಾಗಿತ್ತು. 49 ಮಂದಿ ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಇಂಟರ್‌ನೆಟ್‌ ಸೇವೆ ಸ್ಥಗಿತಗೊಳಿಸಲಾಗಿದೆ. ಐಪಿಸಿ ಸೆಕ್ಷನ್‌ 144 ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದೆ ಹಾಗೂ ಭಾನುವಾರ ರಾತ್ರಿ 10ರ ವರೆಗೂ ಇಂಟರ್‌ನೆಟ್‌ ಸೇವೆ ಸ್ಥಗಿತಗೊಳಿಸಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಆರ್‌ಪಿ ಸಿಂಗ್‌ ಆದೇಶಿಸಿದ್ದಾರೆ.

ಈ ಸಂಬಂಧ ಚಂದನ್ ತಂದೆ ಮಾತನಾಡಿ, ನನ್ನ ಮಗ ಪಾಕಿಸ್ತಾನಕ್ಕೆ ಜಿಂದಾಬಾದ್ ಅಂತ ಹೇಳಿಲ್ಲವೆಂದು ದುಷ್ಕರ್ಮಿಗಳು ಆತನನ್ನು ಕೊಲೆ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ.