ಮೈಸೂರು ದಸರಾ ವೇದಿಕೆಯಲ್ಲೇ ನಿವೇದಿತಾಳಿಗೆ ಪ್ರಪೋಸ್ ಮಾಡಿದ ಚಂದನ್ ಶೆಟ್ಟಿ; ಸಾಮಾಜಿಕ ಜಾಲತಾಣದಲ್ಲಿ ಭಾರಿ ಟಿಕೆ.!

0
331

ಮೈಸೂರು ದಸರಾ ವೇದಿಕೆಯಲ್ಲೇ ಕನ್ನಡ Rapper, ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ನಿವೇದಿತಾ ಗೌಡ ಅವರಿಗೆ ಪ್ರಪೋಸ್ ಮಾಡಿದ್ದಾರೆ. ಸರ್ಪ್ರೈಸ್ ಕೊಡಬೇಕು ಎಂದುಕೊಂಡು, ಯುವ ದಸರಾ ವೇದಿಕೆಯಲ್ಲಿ ಪ್ರಪೋಸ್ ಮಾಡಿದೆ ಆಗ ನನ್ನ ಹಾಗೂ ಅಲ್ಲಿ ಸೇರಿದ್ದ ಪ್ರತಿಯೊಬ್ಬರ ಮನಸ್ಸಿನಲ್ಲಿ ಖುಷಿ ಇತ್ತು. ಅಂತಹ ದೊಡ್ಡ ಕಾರ್ಯಕ್ರಮದಲ್ಲಿ ಸರ್ಪ್ರೈಸ್ ನೀಡುವುದರ ಜೊತೆಗೆ ನಮ್ಮಿಬ್ಬರ ಕುರಿತ ಊಹಾಪೋಹಗಳಿಗೆ ಸ್ಪಷ್ಟನೆ ನೀಡಬೇಕಾಗಿತ್ತು. ಈ ರೂಮರ್ಸ್‍ಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ವೇದಿಕೆಯ ಮೇಲೆ ಪ್ರಪೋಸ್ ಮಾಡಿದೆ ಎಂದಿದ್ದಾರೆ.

Also read: ರಿಷಬ್ ಶೆಟ್ಟಿ ಅವರ ಹೊಸ ಸಿನಿಮಾ ‘ರುದ್ರಪ್ರಯಾಗ’ ದಲ್ಲಿ ನಟಿಸಲು ಹೊಸ ಕಲಾವಿದರಿಗೆ ಅವಕಾಶ; ಸಿನಿಮಾದಲ್ಲಿ ನಟಿಸುವ ಆಸಕ್ತಿ ಇದ್ದರೆ ಈ ಮಾಹಿತಿ ನೋಡಿ.!

ಹೌದು ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಪ್ರತಿ ಸೀಸನ್ ನಲ್ಲಿಯೂ ಸಾಕಷ್ಟು ಜೋಡಿಗಳು ಹುಟ್ಟುಕೊಳ್ಳುತ್ತಾರೆ. ಕಾರ್ಯಕ್ರಮದಲ್ಲಿ ಪ್ರೇಮಪಕ್ಷಿಗಳ ಹಾಗೆ ಜೊತೆ ಜೊತೆಗೆ ಓಡಾಡುವ, ಜೋಡಿಗಳು ಕಾರ್ಯಕ್ರಮ ಮುಗಿದ ಮೇಲೆ ಮರೆಯಾಗುತ್ತಾರೆ. ಆದರೆ, ಚಂದನ್ ಮತ್ತು ನಿವೇದಿತಾ ಈಗ ನಿಜ ಜೀವನದಲ್ಲಿ ಒಂದಾಗಿದ್ದು, ಹೊಸ ಬದುಕಿನ ಕಾಲಿಟ್ಟಿದ್ದಾರೆ. ನಿನ್ನೆ (ಅಕ್ಟೋಬರ್ 4) ಯುವ ದಸರಾದಲ್ಲಿ ಚಂದನ್ ಶೆಟ್ಟಿ ಸಂಗೀತ ಕಾರ್ಯಕ್ರಮ ನೀಡಿದರು. ಇದೇ ಕಾರ್ಯಕ್ರಮದಲ್ಲಿ ನಿವೇದಿತಾಗೆ ಚಂದನ್ ಪ್ರಪೋಸ್ ಮಾಡಿದ್ದಾರೆ. ಆಕೆಯ ಕೈಗೆ ಉಂಗುರ ತೊಡಿಸುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವೇದಿಕೆ ಮೇಲೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದರ ಮೂಲಕ ನಿವೇದಿತಾಗೆ ಸರ್ ಪ್ರೈಸ್ ನೀಡಿದ್ದಾರೆ.

Also read: ಶಾಲೆಯ ಬಿಸಿಊಟ ತಯಾರಿಸುವ ಮಹಿಳೆ ಕೌನ್ ಬನೇಗಾ ಕರೋಡ್‍ಪತಿಯಲ್ಲಿ 7 ಕೋಟಿಗೆ ಉತ್ತರ ನೀಡಿ ಒಂದು ಕೋಟಿ ಗೆದ್ದು ಮಾದರಿಯಾಗಿದ್ದು ಹೇಗೆ ನೋಡಿ..!

ಈ ವೇಳೆ ಮಾತನಾಡಿದ ನಿವೇದಿತಾ ಗೌಡ ”ನನಗೆ ತುಂಬ ಶಾಕ್ ಆಗುತ್ತಿದೆ. ಐ ಲವ್ ಯೂ ಸೋ ಮಚ್. ಬಿಗ್ ಬಾಸ್ ಮನೆಯಲ್ಲಿ ನಾವು 105 ದಿನ ಜೊತೆಯಲಿ ಇದ್ವಿ. ಹೊರಗೆ ಬಂದ ಮೇಲೆ ಒಳ್ಳೆಯ ಫ್ರೆಂಡ್ಸ್ ಆದ್ವಿ. ನಂತರ ಬೆಸ್ಟ್ ಫ್ರೆಂಡ್ಸ್ ಆದ್ವಿ. ಆಮೇಲೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡ್ವಿ. ಈ ತರ ಪ್ರಪೋಸ್ ಬಂದರೆ, ಓ ಮೈ ಗಾಡ್.” ಎಂದು ನಿವೇದಿತಾ ಸಂತಸ ಹಂಚಿಕೊಂಡರು ವೇದಿಕೆ ಮೇಲೆ ನಿವೇದಿತಾಗೆ ರಿಂಗ್ ಹಾಕಿದ ಚಂದನ್ ನಂತರ ತಮ್ಮ ಅಭಿಮಾನಿಗಳ ಜೊತೆಗೆ ಮಾತನಾಡಿದರು. ”ಈ ದಿನ ನಾನು ಪ್ರಪೋಸ್ ಮಾಡುತ್ತಾನೆ ಎಂದು ತಿಳಿದಿರಲಿಲ್ಲ. ಆದರೆ, ನಿಮ್ಮೆಲ್ಲರ ಮುಂದೆ ನಿವೇದಿತಾಗೆ ಪ್ರಪೋಸ್ ಮಾಡಿದ್ದೇನೆ. ಸದ್ಯದಲ್ಲಿಯೇ ನಾವು ಮದುವೆ ಆಗುತ್ತಿದ್ದೇವೆ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲೆ ಇರಲಿ.” ಎಂದು ಹೇಳಿದ್ದಾರೆ.

ಸಾರ್ವಜನಿಕರಿಂದ ವಿರೋದ್ಧ?

Also read: ತೆರೆಗೆ ಬರಲಿದೆ ಕಾಂಗ್ರೆಸ್ ಟ್ರಬಲ್ ಶೂಟರ್, ಕನಕಪುರ ಬಂಡೆ ಡಿ.ಕೆ ಶಿವಕುಮಾರ್ ಜೀವನಾಧಾರಿತ ಚಿತ್ರ?

ಯುವ ದಸರಾ ವೇದಿಕೆಯಲ್ಲಿ ಪ್ರಪೋಸ್ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಖಂಡನೆ ವ್ಯಕ್ತವಾಗಿದೆ. ಸರ್ಕಾರೀ ವೇದಿಕೆ ದುರ್ಬಳಕೆ ಆಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ, ಸೆಲೆಬ್ರಿಟಿ ಜೋಡಿಯ ನಡೆಯ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಆಯೋಜಕರನ್ನು ಪ್ರಶ್ನಿಸುತ್ತಿದ್ದಾರೆ. ವಾಟ್ಸಪ್, ಫೇಸ್‍ಬುಕ್‍ನಲ್ಲಿ ಯುವದಸರಾ ವೇದಿಕೆ ಕಾರ್ಯಕ್ರಮ ಟೀಕೆಗೆ ಗುರಿಯಾಗಿದೆ. ನಾವೇನು ದಸರಾ ನೋಡಲು ಬಂದಿದ್ದೇವಾ ಅಥವಾ ನಿಶ್ಚಿತಾರ್ಥ ನೋಡಲು ಬಂದಿದ್ದೇವಾ ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ.

ಸಚಿವ ವಿ.ಸೋಮಣ್ಣ ಹೆಸರನ್ನು ಹೇಳಿ ಸಹ ಟೀಕೆ ಮಾಡುತ್ತಿದ್ದಾರೆ. ನೆರೆ ಪರಿಹಾರಕ್ಕೆ ದುಡ್ಡಿಲ್ಲ ಅಂತಾರೆ ನಿಶ್ವಿತಾರ್ಥ ಮಾಡೋಕೆ ದುಡ್ಡೆಲ್ಲಿಂದ ಬಂತು? ಸಚಿವ ಸೋಮಣ್ಣರ ಕರಾಮತ್ತು ದಸರಾದಲ್ಲಿ ಎಂಗೇಜ್ಮೆಂಟು. ಯುವ ದಸರಾದಲ್ಲಿ ನಿಶ್ಚಿತಾರ್ಥ, ದಸರಾದಲ್ಲಿ ಮದುವೆ ಆಹಾರ ಮೇಳದಲ್ಲಿ ಬೀಗರ ಊಟ ಎಂಬಿತ್ಯಾದಿ ಸಾಲುಗಳನ್ನು ಸ್ಟೇಟಸ್ ಹಾಗೂ ಪೋಸ್ಟ್ ಹಾಕುತ್ತಿದ್ದಾರೆ. ಈ ಮೂಲಕ ಸರ್ಕಾರ ಹಾಗೂ ಯುವದಸರಾ ಉಪಸಮಿತಿ ಮಾಡಿದ್ದು ಸರೀಯೇ ಎಂದು ಪ್ರಶ್ನಿಸಿದ್ದಾರೆ.