ಇಸ್ರೋಯಿಂದ ಕರ್ನಾಟಕದಲ್ಲಿ `ಚಂದ್ರಯಾನ-2’ಕ್ಕೆ ಇಸ್ರೋ ಸಜ್ಜು!!!

0
970

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮತ್ತೊಂದು ಮೈಲುಗಲ್ಲು ಸಾಧಿಸಲು ಸಜ್ಜಾಗಿದೆ. ಚಂದ್ರಯಾನ-1 ಯಶಸ್ಸಿನ ಬಳಿಕ ಇದೀಗ ಚಂದ್ರಯಾನ-2 ಅನ್ನು 2017-18ಕ್ಕೆ ಚಂದ್ರನ ಕಕ್ಷೆಗೆ ತಲುಪಿಸಲು ಸಿದ್ಧತೆ ನಡೆಸಿದೆ. ಚಂದ್ರಯಾನ-2 ಅನ್ಯಗ್ರಹ ಜೀವಸಂಕುಲದ ಬಗ್ಗೆ ಹೆಚ್ಚು ಅನ್ವೇಷಣೆ ನಡೆಸಲಿದೆ.

ಕರ್ನಾಟಕದ ಚಳ್ಳಕೆರೆಯಲ್ಲಿ ಪರೀಕ್ಷೆ

ಇಸ್ರೋದ ಮಹತ್ವಾಕಾಂಕ್ಷಿ ಚಂದ್ರಯಾನ-2 ನೌಕೆಯನ್ನು ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಪರೀಕ್ಷಾರ್ಥ ಪ್ರಯೋಗ ನಡೆಸಲು ಇಸ್ರೋ ತಯಾರಿ ನಡೆಸಿದೆ. ಚಂದ್ರಯಾನ ನೌಕೆಯನ್ನು ಇಳಿಸಲು ಚಳ್ಳಕೆರೆಯಲ್ಲಿ ಚಂದ್ರನ ಮೇಲ್ಮೆಯನ್ನು ಹೋಲುವ ಕುಳಿಗಳನ್ನು ನಿರ್ಮಾಣ ಮಾಡಲಾಗಿದೆ. ನೌಕೆಯ ಉಪಕರಣಗಳನ್ನು ಮತ್ತು ಲ್ಯಾಂಡಿಂಗ್ ಸೆನ್ಸಾರ್‍ಗಳನ್ನು ಪರೀಕ್ಷಿಸಲು ಚಂದ್ರನ ಮೇಲೈಗೆ ಸಾಮ್ಯವಿರುವ ಹಲವಾರು ಕುಳಿಗಳನ್ನು ನೆಲದ ಮೇಲೆ ಸೃಷ್ಟಿಸಲಾಗಿದೆ. ಚಂದ್ರಯಾನ-2 ನೌಕೆಯನ್ನು ಇಳಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೆಲವೊಂದು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಚಳ್ಳಕೆರೆಯಲ್ಲಿ ನಿರ್ಮಿಸಲಾದ ಚಂದ್ರನ ಮೇಲ್ಮೆನಂತೆ ಕಾಣುವ ಕೃತಕ ಭೂಪ್ರದೇಶದ ಮೇಲೆ ಕೆಲವೊಂದು ಸಾಧನಗಳನ್ನು ಹೊತ್ತ ನೌಕೆ ಹಾರಾಟ ನಡೆಸಲಾಗಿದೆ.

ನೌಕೆ ಪರೀಕ್ಷೆ ಯಾಕೆ?

ಚಂದ್ರನ ಮೇಲೆ ನೌಕೆ ಇಳಿಯುವಾಗ ಎದುರಾಗಬಹುದಾದ ಸಮಸ್ಯೆಗಳನ್ನು ನಿವಾರಿಸಲು ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತಿದೆ. ತೀರಾ ಇಳಿಜಾರು ಅಥವಾ ತಗ್ಗು ಜಾಗದಲ್ಲಿ ನೌಕೆ ಇಳಿಯಬಾರದು ಎಂಬುದನ್ನು ಖಚಿತಪಡಿಸಲಾಗುತ್ತಿದೆ. ಇಲ್ಲವಾದರೆ, ನೌಕೆಯ ಲ್ಯಾಂಡರ್‍ನ ಕಾಲುಗಳು ಕುಳಿಯಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇರುತ್ತದೆ. ಭಾರತದ ಚಂದ್ರಯಾನ-2 ಈ ಹಿಂದಿನ ಚಂದ್ರಯಾನ-1ಗಿಂತ ಆಧುನಿಕವಾಗಿದೆ. ನೌಕೆ ಆರ್ಬಿಟರ್ (ಮಾನವ ನಿರ್ಮಿತ ಉಪಗ್ರಹ), ಲ್ಯಾಂಡರ್ ಮತ್ತು ರೋವರ್ ಅನ್ನು ಹೊಂದಿರಲಿದೆ.

ಭಾರತ-ರಷ್ಯಾ ಜಂಟಿ ಅಭಿಯಾನ

ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್(ISಖಔ) ಹಾಗೂ ರಷ್ಯನ್ ಫೆಡರಲ್ ಸ್ಪೇಸ್ ಏಜೆನ್ಸಿ(ಖಏಂ) ಜಂಟಿಯಾಗಿ ಉದ್ದೇಶಿಸಿರುವ ಚಂದ್ರ ಪರಿಶೋಧನಾ ಅಭಿಯಾನವಾಗಿದೆ. ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮೂಲಕ 2017-2018ರಲ್ಲಿ ಈ ಅಭಿಯಾನವನ್ನು ಉಡಾವಣೆ ಮುಖಾಂತರ ಯಶಸ್ಸು ಮಾಡಲು ಉದ್ದೇಶಿಸಲಾಗಿದೆ. ಇದಕ್ಕೆ ತಗಲುವ ವೆಚ್ಚ ಸುಮಾರು 603 ಕೋಟಿ ರೂ.(91 ಮಿಲಿಯನ್)ರಷ್ಟೆಂದು ಅಂದಾಜಿಸಲಾಗಿದೆ. (ಜಿಎಸ್‍ಎಲ್‍ವಿ) ಉಡಾವಣಾ ವಾಹನವು ಭಾರತದಲ್ಲಿ ನಿರ್ಮಾಣಗೊಂಡ ಒಂದು ಚಂದ್ರ ಕಕ್ಷೆಗಾಮಿ ಹಾಗೂ ರೋವರ್ ರಷ್ಯಾ ನಿರ್ಮಿಸಿದ ಒಂದು ಗಗನನೌಕೆಯನ್ನು ಒಳಗೊಂಡಿದೆ. ಇಸ್ರೋ ಪ್ರಕಾರ, ಈ ಅಭಿಯಾನವು ವಿವಿಧ ಹೊಸ ತಂತ್ರಜ್ಞಾನಗಳನ್ನು ಪರೀಕ್ಷಿಸಿ ಬಳಕೆ ಮಾಡುವುದರ ಜೊತೆಗೆ ಹೊಸ ಪ್ರಯೋಗಗಳನ್ನು ನಡೆಸುತ್ತದೆ. ಗಾಲಿಯಲ್ಲಿರುವ ರೋವರ್ ಚಂದ್ರನ ಮೇಲ್ಮೈ ತಲುಪಿ, ಆ ಸ್ಥಳದ ರಾಸಾಯನಿಕ ವಿಶ್ಲೇಷಣೆ ನಡೆಸಲು ಮಣ್ಣು ಅಥವಾ ಶಿಲೆಯ ಮಾದರಿಯನ್ನು ಸಂಗ್ರಹಿಸುತ್ತದೆ. ಅಲ್ಲಿನ ಅಗತ್ಯ ಅಂಕಿಅಂಶದ ದತ್ತಾಂಶವನ್ನು ಭೂಮಿಗೆ ಚಂದ್ರಯಾನ-2 ಕಕ್ಷೆಗಾಮಿಯ ಮೂಲಕ ತಲುಪಿಸಲಾಗುತ್ತದೆ. ಚಂದ್ರಯಾನ-1 ಅಭಿಯಾನದ ಯಶಸ್ಸಿಗೆ ಕಾರಣರಾದ ಮೈಲ್ಸ್ವಾಮಿ ಅಣ್ಣಾದೊರೈ ನೇತೃತ್ವದ ತಂಡವು ಚಂದ್ರಯಾನ-2 ಅಭಿಯಾನದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಬಾಹ್ಯಾಕಾಶ ನೌಕೆ

ಈ ಜಂಟಿ ಅಭಿಯಾನವು ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಎಮ್‍ಕೆ-2(ಜಿಎಸ್‍ಎಲ್‍ವಿ) ಮೂಲಕ ಉಡಾವಣೆ ಮಾಡಲು ಉದ್ದೇಶಿಸಲಾಗಿದೆ. ಜೊತೆಗೆ ಶ್ರೀಹರಿಕೋಟ ದ್ವೀಪದ ಮೇಲಿರುವ ಸತೀಶ್ ಧವನ್ ಸ್ಪೇಸ್ ಸೆಂಟರ್‍ನಿಂದ ಉಡಾವಣೆ ಮಾಡಲು ಉದ್ದೇಶಿಸಲಾಗಿರುವ ಇದರ ಸರಾಸರಿ ಉಡಾವಣೆ ತೂಕ 3,250 ಕೆಜಿ.

ಕಕ್ಷೆಗಾಮಿ

ಕಕ್ಷೆಗಾಮಿಯನ್ನು ಇಸ್ರೋ ವಿನ್ಯಾಸಗೊಳಿಸುತ್ತದೆ. ಇದು 200 ಕಿಮೀ ಎತ್ತರದಲ್ಲಿ ಚಂದ್ರನನ್ನು ಪರಿಭ್ರಮಿಸುತ್ತದೆ. ಅಭಿಯಾನವು ಕಕ್ಷೆಗಾಮಿಗೆ ಐದು ಉಪಕರಣಗಳನ್ನು ಕೊಂಡೊಯ್ಯಬೇಕೆಂದು ನಿರ್ಧರಿಸಲಾಗಿದೆ. ಇದರಲ್ಲಿ ಮೂರು ಉಪಕರಣಗಳು ಹೊಸತಾಗಿದ್ದು, ಮತ್ತೆರಡು ಉಪಕರಣಗಳು ಚಂದ್ರಯಾನ-1ರಲ್ಲಿ ಕಕ್ಷೆಗಾಮಿಗೆ ಹೊತ್ತೊಯ್ಯಲಾದ ಸುಧಾರಿತ ರೂಪಾಂತರಗಳಾಗಿದೆ. ಸರಾಸರಿ ಉಡಾವಣಾ ಮಾಸ್ (ದ್ರವ್ಯರಾಶಿ-ತೂಕ) 1,400 ಕೆಜಿಯಷ್ಟಿರುತ್ತದೆ.

ಗಗನನೌಕೆ

ಚಂದ್ರನ ಮೇಲ್ಮೈನ ಮೇಲೆ ಪರಿಣಾಮ ಬೀರಿದ ಚಂದ್ರಯಾನ-1ರ ಚಾಂದ್ರ ಶೋಧಕಕ್ಕಿಂತ ಭಿನ್ನವಾಗಿ, ಗಗನನೌಕೆಯು ಹಗುರವಾಗಿ ನಿಲುಗಡೆ ಮಾಡುತ್ತದೆ. ರಷ್ಯನ್ ಫೆಡರಲ್ ಸ್ಪೇಸ್ ಏಜೆನ್ಸಿ ಗಗನನೌಕೆಯನ್ನು ಒದಗಿಸುತ್ತದೆ. ಗಗನನೌಕೆ ಹಾಗೂ ರೋವರ್‍ನ ಸರಾಸರಿ ತೂಕ 1,250 ಕೆಜಿ.

ರೋವರ್

ರೋವರ್ 30-100 ಕೆಜಿ ತೂಕ ಹೊಂದಿದ್ದು ಸೌರಶಕ್ತಿಯ ಮೇಲೆ ಕಾರ್ಯನಿರ್ವಹಿಸುತ್ತದೆ. ರೋವರ್ ಗಾಲಿಗಳ ಮೇಲೆ ಚಂದ್ರನ ಮೇಲ್ಮೈಯನ್ನು ತಲುಪಿ, ಮಣ್ಣು ಅಥವಾ ಶಿಲೆಯ ಮಾದರಿಯನ್ನು ಸಂಗ್ರಹಿಸಿ, ರಾಸಾಯನಿಕ ವಿಶ್ಲೇಷಣೆಯನ್ನು ನಡೆಸುತ್ತದೆ, ಹಾಗು ಮೇಲಿರುವ ಕಕ್ಷೆಗಾಮಿಗೆ ಶೋಧಿತ,ದೊರೆತ ದತ್ತಾಂಶವನ್ನು ಕಳುಹಿಸುತ್ತದೆ. ಇದು ಭೂಮಿಯ ಸ್ಟೇಶನ್‍ಗೆ ತನ್ನ ಪರಿಧಿ ಕೇಂದ್ರದ ಮುಖಾಂತರ ಮಾಹಿತಿ ಪ್ರಸಾರ ಮಾಡುತ್ತದೆ.

ಕಕ್ಷೆಗಾಮಿ ಉಪಕರಣ

ಚಂದ್ರನ ಮೇಲ್ಮೈಯಲ್ಲಿರುವ ಪ್ರಮುಖ ಅಂಶಗಳನ್ನು ದ್ವಿ-ವಿಮಿತೀಯ ನಿರೂಪಣೆ ಮಾಡಲು ಬೆಂಗಳೂರಿನ ಇಸ್ರೋ ಸ್ಯಾಟಲೈಟ್ ಸೆಂಟರ್‍ನ ಲಾರ್ಜ್ ಏರಿಯ ಸಾಫ್ಟ್ ಎಕ್ಸ್-ರೆ ಸ್ಪೆಕ್ಟ್ರೋಮೀಟರ್ ಹಾಗೂ ಅಹಮದಾಬಾದಿನ ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿ(ಪಿಆರ್‍ಎಲ್)ಯ ಸೋಲಾರ್ ಎಕ್ಸ್-ರೇ ಮಾನಿಟರ್ ಉಪಕರಣಗಳು.
ಚಂದ್ರನ ಮೇಲ್ಮೈನಲ್ಲಿರುವ ಮೊದಲ ಹತ್ತು ಮೀಟರುಗಳಲ್ಲಿ ನೀರ್ಗಲ್ಲುಗಳನ್ನೊಳಗೊಂಡಂತೆ ದೊರೆಯುವ ವಿವಿಧ ರಚನೆಗಳ ಬಗ್ಗೆ ಶೋಧನೆಯನ್ನು ನಡೆಸಲಿದೆ. ಅಹಮದಾಬಾದಿನ ಸ್ಪೇಸ್ ಅಪ್ಲಿಕೇಶನ್ಸ್ ಸೆಂಟರ್(ಎಸ್‍ಎಸಿ)ನ (ಬಾಹ್ಯಾಕಾಶ ತತ್ವಗಳ ಅಳವಡಿಕೆ)ಕೇಂದ್ರ ಎಲ್ ಹಾಗೂ ಎಸ್ ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರಾಡಾರ್ ಚಂದ್ರನಿಂದ ಆವರಿಸಲ್ಪಟ್ಟಿರುವ ಪ್ರದೇಶಗಳಲ್ಲಿ ದೊರೆಯುವ (ಹಿಮ)ನೀರು ಕಲ್ಲುಗಳ ಬಗ್ಗೆ ದೃಢಪಡಿಸಲು ಎಸ್‍ಎಆರ್ ಮತ್ತಷ್ಟು ಸಾಕ್ಷ್ಯಗಳನ್ನು ಒದಗಿಸುತ್ತದೆಂದು ನಿರೀಕ್ಷಿಸಲಾಗಿದೆ.
ಚಂದ್ರನ ಮೇಲ್ಮೈನ ಉದ್ದಕ್ಕೂ ಒಂದು ವ್ಯಾಪಕವಾದ ತರಂಗಾಂತರದ ಶ್ರೇಣಿಯನ್ನು ದ್ವಿ-ವಿಮಿತೀಯ ನಿರೂಪಣೆ ಮಾಡುವ ಮೂಲಕ ಖನಿಜಗಳು, ನೀರಿನ ಕಣಗಳು ಹಾಗು ಹೈಡ್ರಾಕ್ಸಿಲ್‍ಗಳ ಉಪಸ್ಥಿತಿಯ ಬಗ್ಗೆ ಅಧ್ಯಯನ ನಡೆಸಲು ಅಹಮದಾಬಾದಿನ ಎಸ್‍ಎಸಿಯಿಂದ ಪಡೆದುಕೊಂಡ ಇಮೇಜಿಂಗ್ ಐಆರ್ ಸ್ಪೆಕ್ಟ್ರೋಮೀಟರ್ (ಐಐಆರ್‍ಎಸ್).
ಚಂದ್ರ ಬಾಹ್ಯಗೋಳದ ಬಗ್ಗೆ ಸವಿಸ್ತಾರದ ಅಧ್ಯಯನ ನಡೆಸಲು ತಿರುವನಂತಪುರದ ಸ್ಪೇಸ್ ಫಿಸಿಕ್ಸ್ ಲ್ಯಾಬೋರೇಟರಿ(ಎಸ್‍ಪಿಎಲ್)ನಿಂದ ಪಡೆದುಕೊಂಡ ನ್ಯೂಟ್ರಲ್ ಮಾಸ್ ಸ್ಪೆಕ್ಟ್ರೋಮೀಟರ್.
ಚಂದ್ರ ಖನಿಜಶಾಸ್ತ್ರ ಹಾಗೂ ಭೂವೈಜ್ಞಾನಿಕ ವಿವರಣೆಗಳ ಅಧ್ಯಯನಕ್ಕೆ ಅಗತ್ಯ ತ್ರಿವಿಮಿತೀಯ ನಕ್ಷೆಯ ತಯಾರಿಕೆಗೆ ಅಹಮದಾಬಾದಿನ ಎಸ್‍ಎಸಿ ಒದಗಿಸಿದ ಟೆರೈನ್ ಮ್ಯಾಪಿಂಗ್ ಕ್ಯಾಮೆರ-2(ಟಿಎಂಸಿ-2).

ರೋವರ್ ಉಪಕರಣ

ಬೆಂಗಳೂರಿನ ಲ್ಯಾಬೋರೇಟರಿ ಫಾರ್ ಎಲೆಕ್ಟ್ರೋ ಆಪ್ಟಿಕ್ ಸಿಸ್ಟಮ್ಸ್(ಎಲ್‍ಇಒಎಸ್)ನಿಂದ ಪಡೆದುಕೊಂಡ ಲೇಸರ್ ಇಂಡ್ಯೂಸ್ಡ್ ಬ್ರೇಕ್ ಡೌನ್ ಸ್ಪೆಕ್ಟ್ರೋಸ್ಕೋಪ್(ಎಲ್‍ಐಬಿಎಸ್).
ಪಿಆರ್‍ಎಲ್, ಅಹಮದಾಬಾದಿನಿಂದ ಪಡೆದುಕೊಳ್ಳಲಾದ ಅಲ್ಫಾ ಪಾರ್ಟಿಕಲ್ ಇಂಡ್ಯೂಸ್ಡ್ ಎಕ್ಸ್-ರೆ ಸ್ಪೆಕ್ಟ್ರೋಸ್ಕೋಪ್(ಎಪಿಐಎಕ್ಸ್‍ಎಸ್).