ಚಳ್ಳಕೆರೆಯಲ್ಲಿ ಮಹತ್ವಾಕಾಂಕ್ಷಿ ಚಂದ್ರಯಾನ-2 ಯೋಜನೆ ಆರಂಭ: ಇಸ್ರೊ

0
692

ಬೆಂಗಳೂರು: ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-2 ಮಿಶನ್ ಯಶಸ್ವಿಗೆ ಇಸ್ರೊ ಈಗಾಗಲೇ ಪ್ರಯೋಗಾರ್ಥ ಪರೀಕ್ಷೆ ಕರ್ನಾಟಕದ ಚಳ್ಳಕೆರೆಯಲ್ಲಿ ಆರಂಭಿಸಿದೆ.

“ ಚಂದ್ರಯಾನ – 2 ಯೋಜನೆಯ ಮೇಲೆ ಭಾರಿ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದು, ಅದರಲ್ಲಿ ಯಶಸ್ವಿಯಾಗುವ ವಿಶ್ವಾಸ ನಮಗಿದೆ. ಚಳ್ಳಕೆರೆಯ ಕೇಂದ್ರದಲ್ಲಿ ಕೈತಕ ಚಂದ್ರನ ಅಂಗಳ ಸೃಷ್ಟಿಸಿ ಅದರಲ್ಲಿ ಆರ್ಬಿಟರ್, ಲ್ಯಾಂಡರ್ ಹಾಗೂ ರೋವರ್ ಎಂಜಿನ್ ಗಳ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ಚಂದ್ರನ ಮೇಲ್ಮೈಯ ಮೇಲೆ ಇಳಿಯುವ ಭಾರತದ ಚಂದ್ರಯಾನ-2 ಮಿಶನ್ ಯಶಸ್ವಿಗೊಳಿಸುವುದಕ್ಕಾಗಿ, ಚಳ್ಳಕೆರೆಯಲ್ಲಿ ನಿರ್ಮಿಸಲಾಗಿರುವ ಕೃತಕ ಚಂದ್ರನ ಕುಳಿಯಲ್ಲಿ ಈ ಪ್ರಯೋಗ ನಡೆಯುತ್ತಿದೆ ಎಂದು ಇಸ್ರೊ ಅಧ್ಯಕ್ಷ ಎಎಸ್ ಕಿರಣ್ ಕುಮಾರ್ ಹೇಳಿದ್ದಾರೆ.

ಚಂದ್ರಯಾನ-2ರಲ್ಲಿ ಇಳಿಸಲಾಗುವ ಉಪಕರಣಗಳು, ಸೆನ್ಸಾರ್‌ಗಳನ್ನು ಚಂದ್ರನ ಮೇಲಿನ ಕುಳಿಗಳ ರೂಪದಲ್ಲಿ ರಚಿಸಲಾದ ಭೂ ಪ್ರದೇಶದಲ್ಲಿ ಪ್ರಯೋಗ ಮಾಡಲಾಗುತ್ತದೆ. ಹಾಗೆಯೇ ಉಡಾವಣೆಗೆ ಬಳಸುವ ರಾಕೆಟ್ ಎಂಜಿನ್ ಗಳ ಪರೀಕ್ಷಾರ್ಥ ಪ್ರಯೋಗವೂ ನಡೆಯುತ್ತಿದೆ,

‘ಚಂದ್ರಯಾನ-2 ಮಿಶನ್‌ಗೆ ಸಂಬಂಧಿಸಿ ನಾವು ಕೆಲವು ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ. ಅದಕ್ಕಾಗಿ ಚಳ್ಳಕೆರೆಯಲ್ಲಿರುವ ನಮ್ಮ ಪ್ರದೇಶದಲ್ಲಿ ಕೆಲವು ಉಪಕರಣಗಳನ್ನು ವಿಮಾನದಲ್ಲಿ ಇಳಿಸಲಾಗುತ್ತದೆ’ ಎಂದು ಕುಮಾರ್ ಹೇಳಿದ್ದಾರೆ.

ವಸುಂಧರೆಯನ್ನು ಪ್ರದಕಷಿಣೆ ಹಾಕುವ ಚಂದ್ರ ಕುತೂಹಲದ ಕಣಜ. ಭೂಮಿಯ ಉಪಗ್ರಹವಾದ ಚಂದ್ರನ ಅಂಗಳವನ್ನು ಅಧ್ಯಯನ ಕೈಗೊಳ್ಳುವ ಉದ್ದೇಶದೊಂದಿಗೆ ಇಸ್ರೊ ಚಂದ್ರಯಾನ-2 ಯೋಜನೆ ಆರಂಭಿಸಿದ್ದು, ಎಲ್ಲಾವೂ ಅಂದುಕೊಂಡಂತೆ ನಡೆದರೆ 2017 ಇಲ್ಲವೇ 2018ರಲ್ಲಿ ಅತ್ಯಾಧುವನಿಕ ಚಂದ್ರನ ಅಂಗಳದಲ್ಲಿ ಇಳಿದು ಅಧ್ಯಯನ ಕೈಗೊಳ್ಳಲಿದೆ.