ಬ್ಯಾಂಕ್ ನಿಂದ ಮರಳಿದ ಆತನ ಬಳಿ ೧೫ ಕೆಜಿ ದುಡ್ಡಿತ್ತು, ಹೇಗೆ ಗೊತ್ತಾ?

0
647

ದೆಹಲಿಯ ಬ್ಯಾಂಕ್ ಮುಂದೆ ಸುಮಾರು ೪ ಗಂಟೆಗಳ ಕಾಲ ಕಾದು ನಿಂತಿದ್ದ ಈ ವ್ಯಕ್ತಿ ಹೊರಗೆ ಬಂದ ನಂತರ ಎಲ್ಲರೂ ಇವನತ್ತಲೇ ಕುತೂಹಲದಿಂದ ನೋಡತೊಡಗಿ ದರು. ಇದಕ್ಕೆ ಕಾರಣ ಆತನ ಬಳಿ ಸುಮಾರು ೧೫ ಕೆಜಿ ದುಡ್ಡು ಇದ್ದಿದ್ದು!

ಹೌದು, ೩೮ ವರ್ಷದ ಇಮ್ತಿಯಾಜ್ ಆಲಂ ಪರಿಸ್ಥಿತಿ ನಗಬೇಕೊ ಅಳಬೇಕೊ ಗೊತ್ತಾಗುತ್ತಿಲ್ಲ. ಸರಕಾರ ೫೦೦ ಮತ್ತು ೧೦೦೦ ನೋಟು ನಿಷೇಧಿಸಿದ್ದರಿಂದ ಬ್ಯಾಂಕ್ ಗೆ ಹೋಗಿ ೨೦ ಸಾವಿರ ರೂ. ಡ್ರಾ ಮಾಡಿದ ಆತನಿಗೆ ಸಿಕ್ಕಿದ್ದು ಬರೀ ೧೦ ರೂ. ನಾಣ್ಯಗಳು. ಇದನ್ನು ಲೆಕ್ಕ ಹಾಕೋಕೆ ಆತ ಸರತಿ ಸಾಲಿನಲ್ಲಿ ನಿಂತಿದ್ದಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದ.

ದೆಹಲಿಯ ಜಮಿಯಾ ಕೋ- ಆಪರೇಟಿವ್ ಮುಂದೆ ಶುಕ್ರವಾರ ಹಣ ಡ್ರಾ ಮಾಡಲು ಇಮ್ತಿಯಾಜ್ ೪ ಗಂಟೆ ನಿಂತಿದ್ದ! ಬ್ಯಾಂಕ್ ಒಳಗೆ ಹೋದಾಗ ಮ್ಯಾನೇಜರ್ ೨೦೦೦ ರೂ. ಮಾತ್ರ ನೀಡಬಹುದು. ಅದಕ್ಕಿಂತ ಹೆಚ್ಷಿನ ನೋಟುಗಳು ಇಲ್ಲ ಎಂದು ತಿಳಿಸಿದರು. ೨೦ ಸಾವಿರದ ತೀರಾ ಅಗತ್ಯತೆಯನ್ನು ಇಮ್ತಿಯಾಜ್ ಮ್ಯಾನೇಜರ್ ಗೆ ಮನವರಿಕೆ ಮಾಡಿಕೊಟ್ಟ. ಕೊನೆಗೆ ಇದ್ದ ೧೦ ರೂ. ನಾಣ್ಯಗಳನ್ನೇ ಕೊಟ್ಟರು.

coins759

ಇಮ್ತಿಯಾಜ್ ಬ್ಯಾಗ್ ತುಂಬಾ ನಾಣ್ಯಗಳು ಭರ್ತಿಯಾಗಿದ್ದವು. ಆದರೆ ಹಣ ಯಾವುದಾದೇನೂ ಅದಕ್ಕೆ ಮೌಲ್ಯ ಇದೆ ಅಲ್ವಾ? ೨೦ ಸಾವಿರ ಇದ್ದರೆ ಸಾಕು ಎಂದು ಆತ ಪ್ರತಿಕ್ರಿಯಿಸಿದ್ದಾನೆ. ಇಮ್ತಿಯಾಜ್, ಈ ಚಿಲ್ಲರೆಗಳಿಂದ ಹೋಟೆಲ್ ಬಿಲ್, ಪ್ರಯಾಣದ ವೆಚ್ಚ ಭರಿಸಿದ್ದಾನೆ.

cashcrunch759