ಚಪಾತಿ ಮಿಕ್ಕಿದ್ರೆ ಏನ್ ಮಾಡೋದು ಅಂತೀರಾ ಇಲ್ಲಿ ನೋಡಿ…!

0
2909

ಪ್ರತಿಯೊಬ್ಬರ ಮನೆನಲ್ಲಿ ಇದು ಕಾಮನ್ ಊಟಕ್ಕೆ ಚಪಾತಿ ಮಾಡಿದಾಗ ಎಲ್ಲಾ ತಿಂದು ಮಿಕ್ಕಿದಮೇಲೆ ಏನ್ ಮಾಡೋದು ಅಂತ ಯೋಚನೆ ಮಾಡಬೇಡಿ ಇಲ್ಲಿ ನೋಡಿ. ಇದರಿಂದ ನೀವು ನೂಡಲ್ಸ್ ಮಾಡಬಹುದು ಹೇಗೆ ಅಂತೀರಾ ನಾವು ಹೇಳ್ತಿವಿ ನೋಡಿ.

Image result for chapati

ಇದಕ್ಕೆ ಬೇಕಾಗುವ ಸಾಮಗ್ರಿಗಳು

ಚಪಾತಿ, ಈರುಳ್ಳಿ, ಹಸಿಮೆಣಸಿನ ಕಾಯಿ, ಬಟಾಣಿ, ಕ್ಯಾರೆಟ್, ಸೋಯಾ ಸಾಸ್, ಕಾಳು ಮೆಣಸು, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಎಣ್ಣೆ, ಉಪ್ಪು.

Image result for chapati noodles

ಮಾಡುವ ವಿಧಾನ

ಚಪಾತಿಯನ್ನು ಕತ್ತರಿಸಿ. ಒಂದು ಬಾಣಲೆಗೆ ಎಣ್ಣೆ ಹಾಕಿಕೊಂಡು, ಈರುಳ್ಳಿ, ಬೆಳ್ಳುಳ್ಳಿ, ಕ್ಯಾರೆಟ್, ಬೇಯಿಸಿದ ಬಟಾಣಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ಇದು ಬೆಂದ ನಂತರ ಸ್ವಲ್ಪ ಹಸಿಮೆಣಸಿನಕಾಯಿ ಹಾಕಿ ಇನ್ನಷ್ಟು ಫ್ರೈ ಮಾಡಿ.
Image result for chapati noodles
ನಂತರ ಈ ಮಿಶ್ರಣಕ್ಕೆ ಸಾಯಾ ಸಾಸ್, ಕಾಳುಮೆಣಸಿನ ಪುಡಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣ ಮಾಡಿಕೊಳ್ಳಿ. ಇದಕ್ಕೆ ಕತ್ತರಿಸಿಟ್ಟುಕೊಂಡ ಚಪಾತಿ ತುಂಡುಗಳನ್ನು ಹಾಕಿ ತಿರುವಿ. ನಂತರ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಚಪಾತಿ ನೂಡಲ್ಸ್ ಸೇವಿಸಲು ಸಿದ್ದವಾಗಿರುತ್ತದೆ.