ಸರ್ ಚಾರ್ಲ್ಸ್ ವುಡ್ ವರದಿಯನ್ನು ಭಾರತ ಶಿಕ್ಷಣದ ‘ಮ್ಯಾಗ್ನಕಾರ್ಟ್’

0
1351

ಚಾರ್ಲ್ಸ್’ವುಡ್ ವರದಿ

ಸರ್ ಚಾರ್ಲ್ಸ್ ವುಡ್ ವರದಿಯನ್ನು ಭಾರತ ಶಿಕ್ಷಣದ ‘ಮ್ಯಾಗ್ನಕಾರ್ಟ್’ ಅಥವಾ ಬಿಡುಗಡೆಯ ಶಾಸನ ಎಂದು ಕರೆಯಲಾಗುತ್ತದೆ.

ಈ ವರದಿಯು ಆಧುನಿಕ ಭಾರತದ ಶಿಕ್ಷಣ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಬೋರ್ಡ್ ಅಫ್ ಕಂಟ್ರೋಲಿನ ಅಧ್ಯಕ್ಷನಾಗಿದ್ದ ಸರ್ ಚಾರ್ಲ್ಸ್’ವುಡ್ ಇಂಗ್ಲೀಷ್ ಶಿಕ್ಷಣದ ಬಗ್ಗೆ 1854ರಲ್ಲಿ ಈ ವರದಿಯನ್ನು ತಯಾರಿಸಿದ. ಈ ವರದಿಯನ್ನು ಭಾರತೀಯ ಶಿಕ್ಷಣದ ‘ಮ್ಯಾಗ್ನಕಾರ್ಟ್’ (The Great Charter of The Liberties ) ಎಂದು ಕರೆಯುತ್ತಾರೆ. ಇದು ಶಿಕ್ಷಣದ ಬಗ್ಗೆ ಆರಂಭದಲ್ಲಿದ್ದ ವಿವಾದಗಳಿಗೆ ತೆರೆ ಎಳೆಯಿತು. ಭಾರತದಲ್ಲಿ ಆಧುನಿಕ ಮಾದರಿಯ ಶಿಕ್ಷಣ ಪದ್ಧತಿಗೆ ಅಡಿಪಾಯ ಹಾಕಿದತು.

ಗವರ್ನರ್ ಜನರಲ್ ಲಾರ್ಡ್ ಡಾಲ್ ಹೌಸಿಯು ಈ ವರಿಯನ್ನು ಜಾರಿಗೆ ತರುವ ಮೂಲಕ 1855ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ಸಂಘಟಿಸಿದನು. ಈ ಕಾಯ್ದೆಯನ್ವಯ ಕೋಲ್ಕೊತಾದಲ್ಲಿ ಕೃಷಿ ಸಂಸ್ಥೆ ಮತ್ತು ಉತ್ತರಪ್ರದೇಶದ ರೂರ್ಕಿಯಲ್ಲಿ ಎಂಜಿನಿಯರಿಂಗ್ ಸಂಸ್ಥೆಗಳನ್ನು ಸ್ಥಾಪಿಸಲಾಯಿತು. ಭಾರತದ ಮೊತ್ತಮೊದಲ ವಿವಿ ಕೋಲ್ಕೊತಾದಲ್ಲಿ 1857ರಲ್ಲಿ ಆರಂಭವಾಯಿತು. 1857 ಮತ್ತು 1887ರ ಅವಧಿಯಲ್ಲಿ ಮುಂಬಯಿ, ಮದ್ರಾಸ್, ಲಾಹೋರ್ ಮತ್ತು ಅಹಮದಾಬಾದ್ ಗಳಲ್ಲಿ ವಿವಿಗಳು ಸ್ಥಾಪನೆಯಾದವು.

ವರದಿಯ ಮುಖ್ಯಾಂಶಗಳು:

*ಕಾಲೇಜು ವಿದ್ಯಾಭ್ಯಾಸವನ್ನು ಇಂಗ್ಲಿಷ್ ಭಾಷೆಯ ಮೂಲಕ ನೀಡುವುದು. ಪ್ರಾಥಮಿಕ ಶಿಕ್ಷಣವನ್ನು ಭಾರತೀಯ ಭಾಷೆಯಲ್ಲಿಯೇ ನೀಡುವುದು.

*ಪ್ರಾಥಮಿಕ ಶಾಲೆಗಳಲ್ಲಿ ಹಳ್ಳಿಗಳಲ್ಲಿ, ಪ್ರೌಢಶಾಲೆ ಮತ್ತು ಕಾಲೇಜುಗಳನ್ನು ಜಿಲ್ಲಾಮಟ್ಟದಲ್ಲಿ ತೆರೆಯುವುದು.

*ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಸರ್ಕಾರ ಸಂಘ ಸಂಸ್ಥೆಗಳನ್ನು ಪ್ರೋತ್ಸಾಹಿಸಿ ಅವುಗಳಿಗೆ ಧನಸಹಾಯ ಮಾಡಬೇಕು.

*ಪ್ರತಿಯೊಂದು ಪ್ರಾಂತ್ಯದಲ್ಲಿಯೂ ಶಿಕ್ಷಣ ಇಲಾಖೆಯನ್ನು ತೆರೆದು ಮೇಲ್ವಿಚಾರಕರನ್ನು ನೇಮಿಸಿ ಶಿಕ್ಷಣ ಮಟ್ಟವನ್ನು ಸುಧಾರಿಸಬೇಕು

*ಲಂಡನ್ನಿನ ವಿವಿಯ ಮಾದರಿಯಲ್ಲಿಯೇ ಮದ್ರಾಸ್, ಬಾಂಬೆ ಮತ್ತು ಕೋಲ್ಕೊತ್ತಾಗಳಲ್ಲಿ ವಿವಿಗಳನ್ನು ಸ್ಥಾಪಿಸುವುದು.

*ತಾಂತ್ರಿಕ ಶಿಕ್ಷಣ ನೀಡುವ ಸಲುವಾಗಿ ಕಾಲೇಜು ತೆರೆಯುವುದು ಮತ್ತು ಮಹಿಳಾ ಶಿಕ್ಷಣ, ದೇಶೀ ಭಾಷೆಯ ಸುಧಾರಣೆ ಮತ್ತು ಅಧ್ಯಾಪಕರ ತರಬೇತಿ ಸೇರಿದಂತೆ ವಿವಿಧ ವಿಷಯಗಳನ್ನು ಒಳಗೊಂಡಿತು.