ಚೆನ್ನೈ ಹೊತ್ತಿ ಉರಿಯಲು ಪೊಲೀಸರೇ ಕಾರಣ? ಸಿಸಿಟಿವಿ ದೃಶ್ಯ ನೋಡಿ ಬೆಚ್ಚಿಬಿದ್ದ ದೇಶ

0
698

ಜಲ್ಲಿಕಟ್ಟು ವಿವಾದಕ್ಕೆ ಶಾಶ್ವತ ಪರಿಹಾರ ಕೋರಿ ನಡೆಯುತ್ತಿದ್ದ ಪ್ರತಿಭಟನೆ ಸೋಮವಾರ ಏಕಾಏಕಿ ವಿಕೋಪಕ್ಕೆ ತಿರುಗಿ ಚೆನ್ನೈ ಎಂಬ ಮಹಾನಗರಿ ಹೊತ್ತಿ ಉರಿಯಲು ಪೊಲೀಸರೇ ಕಾರಣ ಎಂದು ಸಾಬೀತುಪಡಿಸುವ ಕೆಲವೊಂದು ವೀಡಿಯೋ ತುಣುಕುಗಳು ಮಾಧ್ಯಮಗಳಲ್ಲಿ ಬಿಡುಗಡೆಯಾಗಿದ್ದು, ಈ ಸುದ್ದಿ ಕೇಳಿ ಇಡೀ ದೇಶವೇ ಬೆಚ್ಚಿಬಿದ್ದಿದೆ.

ಪ್ರತಿಭಟನಾನಿರತರು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದೂ ಅಲ್ಲದೇ ಹಲ್ಲೆ ನಡಸಿದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು ಎಂದು ಸೋಮವಾರ ಇಡೀ ದಿನ ಪ್ರಸಾರವಾಗಿತ್ತು. ಇದೀಗ ಘಟನಾ ಸ್ಥಳದಲ್ಲಿದ್ದ ಕೆಲವೊಂದು ಸಿಸಿಟಿವಿ ಕ್ಯಾಮರಾಗಳಲ್ಲಿ ದಾಖಲಾದ ದೃಶ್ಯಗಳು ಮಾಧ್ಯಮಗಳಿಗೆ ಲಭಿಸಿದ್ದು, ಇವುಗಳು ಬೇರೆಯದ್ದೇ ಆದ ಸತ್ಯವನ್ನು ಹೇಳುತ್ತಿವೆ.

ಈ ದೃಶ್ಯಗಳು ಏಕಾಏಕಿ ಪೊಲೀಸರು ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ್ದು, ನಿಂತಿದ್ದ ಆಟೋಗೆ ಬೆಂಕಿ ಹಚ್ಚಿದ್ದು, ಸುಖಾಸುಮ್ಮನೆ ಅಶ್ರುವಾಯು ಸಿಡಿಸಿದ್ದು, ದಿಢೀರನೆ ಓಡಿ ಹೋಗಿ ಪೊಲೀಸರೇ ಹಲ್ಲೆ ನಡೆಸಿದ್ದು, ಇಂತಹ ಹಲವಾದು ದೃಶ್ಯಗಳು ಪತ್ತೆಯಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರೇ ಈ ಹೀನಕೃತ್ಯಗಳಿಗೆ ಪ್ರಚೋದನೆ ನೀಡಿದ್ದಾರೆ ಎಂಬುದು ಸಾರಿ ಹೇಳುತ್ತಿವೆ.

ಜಲ್ಲಿಕಟ್ಟು ನಿಷೇಧ ತೆರವುಗೊಂಡು ತಮಿಳುನಾಡಿನ ಹಲವೆಡೆ ಕ್ರೀಡೆ ಸೋಮವಾರ ಯಶಸ್ವಿಯಾಗಿ ನಡೆಯಿತು. ನಿಷೇಧ ತೆರವಿನ ನಂತರವೂ ಯುವ ಸಮುದಾಯ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಚೆನ್ನೈನ ಮರೀನಾ ಬೀಚ್ನಲ್ಲಿ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದ್ದರು. ಆದರ ಸೋಮವಾರ ಬೆಳಗ್ಗೆ ಏಕಾಏಕಿ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ತಿಕ್ಕಾಟಕ್ಕೆ ಕಾರಣವಾಗಿತ್ತು. ಪೊಲೀಸರು ಮನಸೋ ಇಚ್ಛೆ ಲಾಠಿ ಪ್ರಹಾರ ನಡೆಸಿದ್ದರಿಂದ ಹಲವಾರು ಮಂದಿ ಗಾಯಗೊಂಡಿದ್ದರು. ಇದರ ಬೆನ್ನಲ್ಲೇ ಪ್ರತಿಭಟನಕಾರರು 8ರಿಂದ 10 ವಾಹನಗಳಿಗೆ ಬೆಂಕಿ ಹಚ್ಚಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು.

ನಟ ಅರವಿಂದ್ ಸ್ವಾಮಿ ಮತ್ತಷ್ಟು ವೀಡೀಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ಸ್ವತಃ ಪೊಲೀಸರೇ ವಾಹನಗಳಿಗೆ ಬೆಂಕಿ ಹಚ್ಚಿ ಮುಗ್ಧ ವಿದ್ಯಾಥರ್ಿಗಳ ಮೇಲೆ ಆರೋಪ ಹೊರಿಸಿ ಅವರನ್ನು ಬಲಿಪಶು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ನಟ ಕಮಲ್ಹಾಸನ್ ಕೂಡ ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಈ ಎಲ್ಲಾ ಕೃತ್ಯಗಳನ್ನು ಯಾವುದೊ ನಟರು ಮಾಡಿರಬೇಕು ಎಂದು ಆಶಿಸೋಣ ಎಂದು ಪ್ರತಿಕ್ರಿಯಿಸಿದ್ದಾರೆ.

ಆರಂಭದಲ್ಲಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಈ ಆರೋಪವನ್ನು ತಳ್ಳಿ ಹಾಕಿದರೂ ನಂತರ ವೀಡಿಯೋ ದೃಶ್ಯಾವಳಿಗಳನ್ನು ತನಿಖೆ ನಡೆಸಲಾಗುವುದು ಎಂದು ಹೇಳಿತು.

ಆರಂಭದಲ್ಲಿ ಇದೊಂದು ಕೃತಕ ವೀಡಿಯೊ ಎಂದು ಆರೋಪಗಳನ್ನು ತಳ್ಳಿಹಾಕಿದ್ದ ನಗರ ಪೊಲೀಸ್ ಆಯುಕ್ತ ಜಾಜರ್್ ನಂತರ ಪತ್ರಿಕಗೋಷ್ಠಿ ನಡೆಸಿ, ಗುಪ್ತಚರ ಇಲಾಖೆಗಳು ಕೂಡ ಪೊಲೀಸರೇ ಕಿಡಿಗೇಡಿ ಕೃತ್ಯ ಮಾಡಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ಇದು ನಿಜವೇ ಆಗಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ವೀಡೀಯೊ ದೃಶ್ಯಗಳ ಪರಿಶೀಲನೆ ನಡೆಸಲಾಗುವುದು ಎಂದು ತೇಪೆ ಹಚ್ಚುವ ಕೆಲಸ ಮಾಡಿದರು.