ಅತಿ ಮುಖ್ಯ, ಪ್ರಭಾವಶಾಲಿ ಹಾಗೂ ಶಕ್ತಿಶಾಲಿ ದೇವಾಲಯವೆಂದು ನಂಬಲಾದ ಚೆಂಗಣ್ಣೂರು ಮಹಾದೇವ ದೇವಾಲಯ: ಒಮ್ಮೆ ತಪ್ಪದೆ ಭೇಟಿ ಕೊಡಿ

0
1285

ಪ್ರವಾಸಿಗರ ಸ್ವರ್ಗವೆಂದೆ ಖ್ಯಾತಿ ಪಡೆದಿರುವ ಕೇರಳ ರಾಜ್ಯದಲ್ಲಿ ನೋಡಲು ಸಾಕಷ್ಟು ಆಯ್ಕೆಗಳಿವೆ. ವೈವಿಧ್ಯಮಯ ಸಂಸ್ಕೃತಿ-ಸಂಪ್ರದಾಯಗಳನ್ನು ಹೊಂದಿರುವ ಈ ರಾಜ್ಯದಲ್ಲಿ ವೈವಿಧ್ಯಮಯ ದೇವಾಲಯಗಳನ್ನು ಅವುಗಳನ್ನು ವಿಶಿಷ್ಟವಾಗಿ ನಿರ್ಮಿಸಲಾಗಿರುವುದನ್ನು ಕಾಣಬಹುದು.

ಚೆಂಗಣ್ಣೂರು ಮಹಾದೇವ ದೇವಾಲಯ

Image result for ಚೆಂಗಣ್ಣೂರು ಮಹಾದೇವ ದೇವಾಲಯ

ಭಗವತಿ ದೇವಾಲಯ ಎಂತಲೂ ಕರೆಯಲ್ಪಡುವ ಇದು ಕೇರಳದಲ್ಲಿ ಪರಿಗಣಿಸಲಾಗುವ ಪ್ರಮುಖ ಶಿವ ದೇವಾಲಯಗಳಲ್ಲೊಂದಾಗಿದೆ. ಕೇರಳದ ಅಲಪುಳ (ಅಲ್ಲೆಪ್ಪಿ) ಜಿಲ್ಲೆಯ ಚೆಂಗಣ್ಣೂರು ಎಂಬ ಪಟ್ಟಣದಲ್ಲಿ ಶಿವನ ಈ ಭವ್ಯ ದೇವಾಲಯವಿದೆ. ಈ ದೇವಾಲಯದ ವಿಶಿಷ್ಟತೆ ಏನೆಂದರೆ ಈ ದೇವಾಲಯದಲ್ಲಿ ಭಗವತಿ ದೇವಿಯ ಮುಟ್ಟನ್ನು ಮೂರು ದಿನಗಳ ಕಾಲ ಉತ್ಸವವಾಗಿ ಆಚರಿಸಲಾಗುತ್ತದೆ. ಇದನ್ನು ತ್ರಿಪ್ಪುತು ಎಂದು ಕರೆಯಲಾಗುತ್ತದೆ. ಈ ಸಂರ್ಭದಲ್ಲಿ ಮೂರು ದಿನಗಳ ಕಾಲ ದೇವಾಲಯ ಮುಚ್ಚಿರುತ್ತದೆ.

ಹಿಂದೂ ಪುರಾಣಗಳ ಪ್ರಕಾರ ಶಿವನೊಂದಿಗೆ ಪಾರ್ವತಿ ವಿವಾಹವಾದ ಬಳಿಕ ಹಿಮಾಲಯದಿಂದ ಮೊದಲ ಸಲ ಹೊಸ ದಂಪತಿಗಳು ಚೆಂಗನ್ನೂರನ್ನು ಸಂದರ್ಶಿಸಿದರು. ಈ ಸಮಯದಲ್ಲಿ ದೇವಿ ಋತುಸ್ರಾವ ಅವಧಿಯಲ್ಲಿ ಇರುವುದರಿಂದ ಶಿವನೌ 28 ದಿನಗಳ ಕಾಲ ಅಲ್ಲಿ ಇದನ್ನು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಇಲ್ಲಿನ ಆಲಯದಲ್ಲಿ ದೇವಿಗೆ ಹೊದಿಸುವ ಬಟ್ಟೆ ಕೂಡ ಆ ಅವಧಿಯಲ್ಲಿ ಕೆಂಪಾಗಿ ಬದಲಾಗುತ್ತದೆ.

ದೇವಸ್ಥಾನದ ಅನಿಯಮಿತ ಮುಟ್ಟಿನ ಸಮಯದಲ್ಲಿ ದೇವಿ ಋತುಸ್ರಾವ ಆಚರಿಸಿದ್ದಾರೆಂದು ತಿಳಿದು ಗುಡಿಯನ್ನು ಪ್ರತಿ ತಿಂಗಳೂ ಮೂರು ದಿನಗಳ ಕಾಲ ಮುಚ್ಚುತ್ತಾರೆ. ನಾಲ್ಕನೇ ದಿನ ಮಹಿಳೆಯರು ರಹಸ್ಯವಾಗಿ ವಿಗ್ರಹವನ್ನು ಪವಿತ್ರ ಜಲದೊಂದಿಗೆ ಸ್ವಚ್ಛಗೊಳಿಸುತ್ತಾರೆ. ಆ ಬಳಿಕ ಅರ್ಚಕರು ಅಭಿಷೇಕ ಮಾಡುತ್ತಾರೆ. ಪ್ರತಿ ತಿಂಗಳು ಮೂರು ದಿನಗಳ ಕಾಲ ಮಹಿಳೆಯರು ಮಾತ್ರ ಗುಡಿಯೊಳಗೆ ಪ್ರವೇಶಿಸಲು ಅರ್ಹರು. ಈ ಸಮಯದಲ್ಲಿ ಆಲಯವೆಲ್ಲಾ ಮಹಿಳೆಯರಿಂದ ತುಂಬಿರುತ್ತದೆ.

ಈ ಶಿವನ ದೇವಾಲಯವನ್ನು ಅತಿ ಮುಖ್ಯ, ಪ್ರಭಾವಶಾಲಿ ಹಾಗೂ ಶಕ್ತಿಶಾಲಿ ದೇವಾಲಯಗಳೆಂದು ನಂಬಲಾಗುತ್ತದೆ. ಕಾರಣ ಇವುಗಳ ಹಿಂದಿರುವ ಕಥೆ, ಹಿನ್ನಿಲೆ, ಭೇಟಿ ನೀಡುವ ಭಕ್ತರ ಪ್ರಮಾಣ, ಸ್ಥಳ ಮಹಿಮೆ ಮುಂತಾದವುಗಳಾಗಿವೆ. ನೀವು ಒಮ್ಮೆ ಭೇಟಿ ಕೊಡಿ.

Related image

Also read: ಕಾಂಬೋಡಿಯಾದ ಆಂಗ್ಕೋರ್ ವಾಟ್ ನಲ್ಲಿರುವ ವಿಶ್ವದ ಅತೀ ದೊಡ್ಡ ದೇವಾಲಯದ ಅಚ್ಚರಿ ಸಂಗತಿಗಳನ್ನು ಕೇಳಿದ್ರೆ ಹಿಂದೂ ಧರ್ಮದ ಬಗ್ಗೆ ಹೆಮ್ಮೆಯುಂಟಾಗುತ್ತದೆ..