ಲಿವರ್ ಡ್ಯಾಮೇಜ್ ಆಗಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ತಂದೆಗೆ ಲಿವರ್ ನೀಡಿ ಬದುಕಿಸಿದ ಮಗಳು.!

0
320

ಪಾಲಕರಿಗೆ ಕೊನೆಯ ಕಾಲದಲ್ಲಿ ಹೆಣ್ಣು ಮಕ್ಕಳೇ ಸಹಾಯಕ್ಕೆ ಬರುವುದು ಎನ್ನುವ ವಿಚಾರ ಎಲ್ಲರಿಗೂ ತಿಳಿದಿದೆ. ಏಕೆಂದರೆ ಗಂಡು ಮಕ್ಕಳು ತಂದೆ-ತಾಯಿಗಳನ್ನು ಹೇಗೆ ನೋಡಿಕೊಳ್ಳುತ್ತಿದ್ದಾರೆ. ಎನ್ನುವುದನ್ನು ಮನವರಿಕೆ ಮಾಡಿಕೊಂಡರೆ ಹೆಣ್ಣು ಮಕ್ಕಳೇ ಸಾಕು ಅನಿಸುತ್ತೆ ಎನ್ನುವುದು ಹಲವರ ವಿಚಾರವಾದರೆ ಅದಕ್ಕೆ ಸಾಕ್ಷಿ ಎನ್ನುವಂತೆ ಲಿವರ್ ತೊಂದರೆಯಿಂದ ಸಾವು ಬದುಕಿನ ಮಧ್ಯ ಹೋರಾಟ ಮಾಡುತ್ತಿದ್ದ ತಂದೆಗೆ ಯುವತಿ ತನ್ನ ಲಿವರ್ ನೀಡಿ ಬದುಕಿಸಿದ್ದಾಳೆ.

Also read: ವ್ಯೆದ್ಯಕೀಯ ಲೋಕದಲ್ಲಿ ಮತ್ತೊಂದು ಸಾಧನೆ; 6 ತಿಂಗಳ ಮಗುವನ್ನು ಗರ್ಭದಿಂದ ಹೊರತೆಗೆದು ಶಸ್ತ್ರಚಿಕಿತ್ಸೆ ಮಾಡಿ ಮತ್ತೆ ಗರ್ಭದೊಳಗೆ ಸೇರಿಸಿದರು..

ತಂದೆ ಲಿವರ್ ನೀಡಿದ ಮಗಳು?

ಹೌದು ಲಿವರ್ ಡ್ಯಾಮೇಜ್ ಆಗಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ತಂದೆಗೆ ಮಗಳ ಲಿವರ್ ನ ಒಂದು ಭಾಗವನ್ನು ದಾನ ಮಾಡಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಐಸಿಯುನಲ್ಲಿ ಹೋರಾಡುತ್ತಿದ್ದ ತನ್ನ ತಂದೆಗಾಗಿ ಲಿವರ್ ದಾನ ಮಾಡಿದ್ದಾಳೆ, ಲಿವರ್ ನ ಒಂದು ಭಾಗವನ್ನು ಕಸಿ ಮಾಡುವಲ್ಲಿ ಚೆನ್ನೈನ ಜಿಇಎಂ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯಲ್ಲಿ ಕೇವಲ ಪಿತ್ತಜನಕಾಂಗದ ಒಂದು ಭಾಗವನ್ನು ಮಾತ್ರ ಕಸಿ ಮಾಡಲಾಗಿದೆ.

Also read: ಸತ್ತ ಮೇಲೂ ಗರ್ಭಕೋಶ ಕಸಿಯಿಂದ ತಾಯಿಯಾದ ಈ ಮಹಿಳೆಯ ಸ್ಟೋರಿ ಓದಿ, ನಿಮ ಕಣ್ಣಲ್ಲಿ ನೀರು ಬರುತ್ತೆ…

ಹಲವು ದಿನಗಳಿಂದ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ವ್ಯಕ್ತಿಗೆ ಲಿವರ್ ಸಿಗುತ್ತಾ ಅಂತ ಆಸ್ಪತ್ರೆ ಮತ್ತು ಕುಟುಂಬದವರು ಕಾಯುತ್ತಿದ್ದರು,ಲಿವರ್ ಸಿಗಲೇ ಇಲ್ಲ. ಲಿವರ್ ಸಿಗದೇ ಇದ್ದರೆ ತಂದೆ ಮೃತ್ಯು ಕಟ್ಟಿಟ್ಟ ಬುತ್ತಿ ಎಂದು ತಿಳಿದ ಮಗಳು ಈಗ ಕೊನೆಗೆ ತನ್ನ ಪಿತ್ತಜನಕಾಂಗವನ್ನೇ ನೀಡುವ ಮೂಲಕ ಜನ್ಮ ನೀಡಿದ ತಂದೆಗೆ ಮರುಜನ್ಮ ನೀಡಿದ್ದಾಳೆ. ಈ ವಿಚಾರಕ್ಕೆ ಕುಟುಂಬದ ಸದಸ್ಯರು ಒಪ್ಪಲಿಲ್ಲ. ಆಕೆ ಇನ್ನೂ ಮದುವೆಯಾಗಿಲ್ಲ. ಶಸ್ತ್ರಚಿಕಿತ್ಸೆ ಮಾಡಿದರೆ ಹೊಟ್ಟೆ ಭಾಗದಲ್ಲಿ ಮಾರ್ಕ್ ಆಗುತ್ತದೆ. ಈ ರೀತಿ ಆದರೆ ಮುಂದೆ ಈಕೆಯನ್ನು ಯಾರು ವಿವಾಹ ಆಗುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು. ಆದರೆ ನಾವು ಆಕೆ ಕುಟುಂಬದವರಿಗೆ ಶಸ್ತ್ರಚಿಕಿತ್ಸೆಯ ವಿಧಾನವನ್ನು ವಿವರಿಸಿದ್ದೇವೆ. ಮತ್ತು ಆದರ ಕಾರ್ಯ ವಿಧಾನದ ಬಗ್ಗೆಯೂ ಅರ್ಥವಾಗುವಂತೆ ವಿವರಿಸಿ ಹೇಳಿದಾಗ ಅವರು ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದರು ಎಂದು ವೈದ್ಯರು ಹೇಳಿದ್ದಾರೆ.

Also read: ತಾಮ್ರದ ಬಾಟೆಲ್‍ನಲ್ಲಿ ನೀರು, ಹಾಲು ಕುಡಿಯುವ ಮುನ್ನ ಎಚ್ಚರ; ಕಾಪರ್ ಅತಿಯಾದ್ರೆ ಬರುತ್ತೆ ಲಿವರ್ ಕಾಯಿಲೆ, ಹೇಗೆ ಅಂತ ಈ ಮಾಹಿತಿ ನೋಡಿ.!

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಇಎಂ ಆಸ್ಪತ್ರೆಯ ವೈದ್ಯರು, ರೋಗಿಗೆ ಲಿವರ್ ನ ಒಂದು ಭಾಗ ಮಾತ್ರ ಡ್ಯಾಮೇಜ್ ಆಗಿ ಕೊನೆಯ ಹಂತ ತಲುಪಿದ್ದರು. ಅವರಿಗೆ ಶಸ್ತ್ರಚಿಕಿತ್ಸೆ ಮಾಡಲು ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಲಿವರ್ ಸಿಗುತ್ತಾ ಅಂತ ದಾನಿಗಳಿಗೆ ಕಾಯುತ್ತಿದ್ದೆವು. ಆದರೆ ದಾನಿಗಳು ಸಿಗದ ಕಾರಣ ಮಗಳು ಹತಾಶೆಗೊಂಡು ತಂದೆಯ ಸ್ಥಿತಿಯನ್ನು ನೋಡಿ ನಾನೇ ನನ್ನ ಅಂಗವನ್ನು ದಾನ ಮಾಡುತ್ತೇನೆ ಎಂದು ಮಗಳು ಮುಂದೆ ಬಂದಳು ಅದರಂತೆ ಇದೇ ಮೊದಲ ಬಾರಿಗೆ ಭಾರತದಲ್ಲಿ ಡಾ. ಸಿ ಪಳನಿವೆಲು ಮತ್ತು ಅವರ ತಂಡವು ಲ್ಯಾಪರೊಸ್ಕೋಪಿಕ್ ಪಿತ್ತಜನಕಾಂಗದ ಕಸಿ ಮಾಡಿದೆ. ಲಿವರಿನ ಬಲ ಅರ್ಧವನ್ನು ಮೂರೂವರೆ ಗಂಟೆಗಳಲ್ಲಿ ಯಶಸ್ವಿಯಾಗಿ ಬೇರ್ಪಡಿಸಿ ನಂತರ ತಂದೆಗೆ ಮಗಳ ಪಿತ್ತಜನಕಾಂಗದ ಅರ್ಧ ಭಾಗವನ್ನು ಜೋಡಣೆ ಮಾಡಲಾಗಿದೆ ಎಂದು ವೈದ್ಯರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಭೇಟಿಯಾಗಿ ಈ ಕೆಲಸದ ಬಗ್ಗೆ ವಿವರಿಸಿದ್ದಾರೆ. ಇದಕ್ಕೆ ಮಂತ್ರಿಗಳು ತಂದೆಗೆ ಲಿವರ್ ದಾನ ಮಾಡಿದ ಮಗಳನ್ನು ಅಭಿನಂದನೆ ಸಲ್ಲಿಸಿದ್ದಾರೆ.