೯೦ ಕೊಟಿ ನಗದು, ೧೦೦ ಕೋಟಿ ಚಿನ್ನ ಪತ್ತೆ: ಚೆನ್ನೈನಲ್ಲಿ ಐಟಿ ದಾಳಿಗೆ ಬಿದ್ದ ‘ಕಪ್ಪು’ ತಿಮಿಂಗಿಲ

0
561

ಚೆನ್ನೈನಲ್ಲಿ ತೆರಿಗೆ ಅಧಿಕಾರಿಗಳು ಸುಮಾರು ೮ ಕಡೆ ನಡೆಸಿದ ದಾಳಿಯಲ್ಲಿ ೯೦ ಕೋಟಿ ರೂ. ನಗದು, ೧೦೦ ಕೆಜಿ ಚಿನ್ನ ಹಾಗೂ ಅಪಾರ ಮೌಲ್ಯದ ಭೂ ಖರೀದಿ ಸೇರಿದಂತೆ ಹಲವಾರು ದಾಖಲೆಪತ್ರಗಳನ್ನು ವಶಪಡಿಸಿ ಕೊಂಡಿದೆ. ಇದು ಇತ್ತೀಚಿನ ದಿನಗಳಲ್ಲಿ ಪತ್ತೆಯಾದ ಅತೀ ದೊಡ್ಡ ತೆರಿಗೆ ವಂಚನೆ ಪ್ರಕರಣ ಎಂದು ಹೇಳಲಾಗಿದೆ.

ಗುತ್ತಿಗೆ ಕಂಟ್ರಾಕ್ಟರ್, ಗಣಿಗಾರಿಕೆ, ಭೂ ವ್ಯವಹಾರಸ್ಥ ರನ್ನು ಕೇಂದ್ರೀಕರಿಸಿ ಗುರುವಾರ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದರು.

ಇದರಲ್ಲಿ ಶ್ರೀನಿವಾಸ ರೆಡ್ಡಿ ಅವರ ಮನೆಯೂ ಸೇರಿದೆ. ಶ್ರೀನಿವಾಸ ರೆಡ್ಡಿ ಪ್ರಖ್ಯಾತ ತಿರುಪತಿ ದೇವಾಲಯ ಟ್ರಸ್ಟ್ ಸದಸ್ಯರೂ ಆಗಿದ್ದು, ಹೈದರಾಬಾದ್ ನಲ್ಲಿ ಗಣಿಗಾರಿಕೆ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದಾರೆ.
ದಾಳಿಯಲ್ಲಿ ಸಿಕ್ಕ ನಗದಿನಲ್ಲಿ ೮ ಕೋಟಿ ರೂ. ಹೊಸ ೨೦೦೦ ನೋಟುಗಳಾಗಿವೆ. ೬೫ ಕೋಟಿ ಹಳೆಯ ೫೦೦ ಮತ್ತು ೧೦೦೦ ಮುಖಬೆಲೆಯ ನೋಟುಗಳಾಗಿವೆ. ೧೦ ಕೋಟಿ ರೂ.ನಲ್ಲಿ ಹಳೆಯ ಮತ್ತು ಹೊಸ ನೋಟುಗಳ ಮಿಶ್ರಣವಾಗಿದ್ದು, ಅವುಗಳ ಎಣಿಕೆ ಕಾರ್ಯ ನಡೆದಿದೆ. ಇದೇ ವೇಳೆ ೧೦೦ ಕೆಜಿ ಬಿಸ್ಕತ್ ರೂಪದಲ್ಲಿ ಇದ್ದ ಚಿನ್ನದ ಮೌಲ್ಯ ೨೮ ಕೋಟಿ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಕೇಂದ್ರ ಸರಕಾರ ೫೦೦ ಮತ್ತು ೧೦೦೦ ನೋಟುಗಳನ್ನು ರದ್ದುಪಡಿಸಿದ ನಂತರ ಡಿ.೬ರವರೆಗೆ ನಡೆದ ಐಟಿ ದಾಳಿ ಯಲ್ಲಿ ಲೆಕ್ಕಕ್ಕೆ ಸಿಗದ ೨೦೦೦ ಕೋಟಿ ಹಾಗೂ ೧೩೦ ಕೋಟಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಸುಮಾರು ೪೦೦ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ೩೦ ಪ್ರಕರಣಗಳನ್ನು ಜಾರಿ ನಿರ್ದೇಶನಾಲಯ ಕೈಗೆತ್ತಿಕೊಂಡಿದೆ.