ಅನಾರೋಗ್ಯದಿಂದ ಹಾಸಿಗೆ ಹಿಡಿದ ಹೆಂಡತಿ ಕಷ್ಟಕ್ಕೆ ರಿಮೋಟ್‌ ಕಂಟ್ರೋಲ್‌ ಟಾಯ್ಲೆಟ್‌ ಬೆಡ್‌; ಕಾರ್ಮಿಕನ ಆವಿಷ್ಕಾರಕ್ಕೆ ರಾಷ್ಟ್ರೀಯ ಅನ್ವೇಷಣಾ ಪ್ರಶಸ್ತಿ..

0
775

ವ್ಯಕ್ತಿ ಸಾಧನೆ ಮಾಡುವುದು ಒಂದಿದ್ದರೆ ಯಾವುದು ಅಸಾಧ್ಯವಲ್ಲ, ಸಾಧನೆಯ ನಡುವೆ ಬರುವ ಕಷ್ಟಗಳನ್ನು ಕೂಡ ಮೆಟ್ಟಿಲಾಗಿ ಸಾಧನೆಗೆ ಬಳಕೆ ಮಾಡಿಕೊಂಡ ಅದೆಷ್ಟೋ ಜನರು ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ. ಅದಕ್ಕೆ ಸಂಬಂಧಪಟ್ಟ ಪದವಿ ಅಥವಾ ಡಿಪ್ಲೋಮಾ ಬೇಕಿಲ್ಲ, ಇನ್ನೂ ಕೆಲವರು ತಮಗೆ ಬಂದಿರುವ ಕಷ್ಟಗಳನ್ನು ಸರಳ ಗೊಳಿಸಲು ಹೋಗಿ ತಮಗೆ ಗೊತ್ತಿಲ್ಲದೇ ತಾವೇ ದೊಡ್ಡ ಸಾಧನೆಗೆ, ಅವಿಸ್ಕಾರಕ್ಕೆ ಇಳಿಯುತ್ತಾರೆ. ಅದನ್ನು ಸಾಧಿಸಿ ದೇಶವೇ ತಮ್ಮತ ತಿರುಗಿ ನಿಲ್ಲುವ ಹಾಗೆ ಮಾಡಿಕೊಳ್ಳುತ್ತಾರೆ. ಇದಕ್ಕೆ ಸೂಕ್ತವಾದ ಸಾಕ್ಷಿ ಎಂದರೆ ಅನಾರೋಗ್ಯದಿಂದ ಹಾಸಿಗೆ ಹಿಡಿದ ಪತ್ನಿಗಾಗಿ ಕಾರ್ಮಿಕರೊಬ್ಬರು ರಿಮೋಟ್ ಸಹಾಯದಿಂದ ಕಾರ್ಯ ನಿರ್ವಹಿಸುವ ಟಾಯ್ಲೆಟ್ ಬೆಡ್ ತಯಾರಿಸಿದ್ದು.

@publictv.in

Also read: ಬೇಸಿಗೆಯ ಬಿಸಿಲಿನ ದಾಹಕ್ಕೆ ನೀರು ಆಹಾರವಿಲ್ಲದೆ ನರಳಾಡುತ್ತಿರುವ ಮೂಕ ಪ್ರಾಣಿಗಳ ವೇದನೆಗೆ; ಗುಡಿಬಂಡೆ ಜನತೆ ಮಾಡುವ ಕೆಲಸ ದೇಶಕ್ಕೆ ಮಾದರಿಯಾಗಿದೆ.

ಹೌದು ಚೆನ್ನೈ ಮೂಲದ ಎಸ್. ಸರವಣ ಎನ್ನುವ ಕಾರ್ಮಿಕನೊಬ್ಬ ಉಹೆಗೂ ನಿಲುಕದ ಸಾಧನೆ ಮಾಡಿದ ಶರವಣ ತಯಾರಿಸಿರುವ ಈ ಬೆಡ್‌ಗೆ ರಾಷ್ಟ್ರೀಯ ಅನ್ವೇಷಣಾ ಪ್ರಶಸ್ತಿ
ದೊರೆತಿದೆ. ದೆಹಲಿಯಲ್ಲಿ ಮಾ.15ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಂದ ಅತ್ಯುತ್ತಮ ಅನ್ವೇಷಣಾ ವಿಭಾಗದಲ್ಲಿ ಎರಡನೇ ಸ್ಥಾನದಲ್ಲಿ ಈ ರಿಮೋಟ್‌ ಕಂಟ್ರೋಲ್‌ ಬೆಡ್‌ಗೆ ಪ್ರಶಸ್ತಿ ಲಭಿಸಿದೆ. ತಮಿಳುನಾಡಿನ ತಲಾವೈಪುರಂನ ವೆಲ್ಡಿಂಗ್‌ ಮಾಡುವ ಕಾರ್ಮಿಕ ಶರವಣ ಮುತ್ತುವಿನ ಪತ್ನಿ 2014ರಲ್ಲಿ ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾಗಿ ಹಾಸಿಗೆ ಹಿಡಿದಳು. ಆದ್ದರಿಂದ ಆಕೆಗೆ ಅನುಕೂಲ ಮಾಡಿಕೊಡಬೇಕು ಎನ್ನುವ ಉದ್ದೇಶದಿಂದ, ಶರವಣ ರಿಮೋಟ್‌ ಕಂಟ್ರೋಲ್‌ ಟಾಯ್ಲೆಟ್‌ ಬೆಡ್‌ ಒಂದನ್ನು ಸಿದ್ಧಪಡಿಸಿದ್ದಾನೆ.

ಈ ಬೆಡ್ ಗೆ ಫ್ಲಶ್ ಟ್ಯಾಂಕ್, ಕ್ಲೋಸೆಟ್ ಹಾಗೂ ಸೆಪ್ಟಿಕ್ ಟ್ಯಾಂಕ್‍ಗಳನ್ನು ಅಳವಡಿಸಲಾಗಿದೆ. ಹಾಗೆಯೇ ಬೆಡ್ ಮಧ್ಯದಲ್ಲಿ ಸ್ವಲ್ಪ ಜಾಗವನ್ನು ಬಿಡಲಾಗಿದೆ. ಅಲ್ಲದೆ ಈ ಬೆಡ್‍ಗೆ ಮೂರು ಬಟನ್‍ಗಳಿರುವ ರಿಮೋಟ್ ಇದ್ದು, ಮೊದಲ ಬಟನ್ ಒತ್ತಿದರೆ ಬೆಡ್‍ನ ಬೇಸ್ ತೆರೆದುಕೊಳ್ಳುತ್ತದೆ. ಎರಡನೇ ಬಟನ್ ಒತ್ತಿದರೆ ಕ್ಲೋಸೆಟ್ ತೆರೆದುಕೊಳ್ಳುತ್ತದೆ. ಬಳಿಕ ಮೂರನೇ ಬಟನ್ ಒತ್ತಿದರೆ ಅದರಷ್ಟಕ್ಕೆ ಟಾಯ್ಲೆಟ್ ಫ್ಲಶ್ ಆಗುತ್ತದೆ.

@publictv.in

Also read: ಸಂಶೋಧನೆ ವೇಳೆ ಅವಘಡ ಸಂಭವಿಸಿ ದೃಷ್ಟಿದೋಷಕ್ಕೀಡಾದ ಶಿಕ್ಷಕಿಯೊಬ್ಬರು ನೂರಾರು ಬುದ್ಧಿಮಾಂದ್ಯ ಮಕ್ಕಳಿಗೆ ದಾರಿದೀಪವಾದ ಕತೆ ಹೇಗೆ ಇದೆ ನೋಡಿ..

ಅಬ್ದುಲ್‌ ಕಲಾಂ ಮಾಹಿತಿಯತೆ ಅವಿಸ್ಕಾರ?

ಈ ರಿಮೋಟ್‌ ಕಂಟ್ರೋಲ್‌ ಬೆಡ್‌ ಮಾಡಲು ಆರಂಭದಲ್ಲಿ ಹಣವಿರಲಿಲ್ಲ. ಆದ್ದರಿಂದ ಇರುವ ಆಸ್ತಿಯನ್ನು ಮಾರಿ 2014ರಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಬಳಿ ಸಂಶೋಧನೆ ಬಗ್ಗೆ ಹೇಳಿದೆ. ಅಲ್ಲದೆ ಈ ಬಗ್ಗೆ ಹೆಚ್ಚಿನ ಜ್ಞಾನ ಪಡೆದೆ ಅದಕ್ಕೆ ಅವರು ಅಗತ್ಯ ಸಹಾಯ ಮಾಡಿದರು. ಈ ವಿಚಾರವನ್ನು ತಿಳಿದ ಕಲಾಂ ಅವರು ಈ ಹೊಸ ಕಲ್ಪನೆ ಬಗ್ಗೆ ಮಾಹಿತಿಯನ್ನು ರಾಷ್ಟ್ರೀಯ ಆವಿಷ್ಕಾರ ಸಂಸ್ಥೆ ನಡೆಸುವ ಸ್ಪರ್ಧೆಗೆ ಕಳುಹಿಸುವಂತೆ ಸೂಚಿಸಿದ್ದರು. ಅದರಂತೆ ಒಟ್ಟು ಮೂರು ಬಟನ್‌ ಇರುವ ಈ ರಿಮೋಟ್‌ ತಯಾರಿಸಿದೆ ಎಂದು ಸರವಣ ಹೇಳಿದ್ದಾರೆ.

@publictv.in

Also read: ಆಂಬುಲೆನ್ಸ್ ಅಲ್ಲ, ಅಂಬಾಸಿಡರ್ ಕಾರೇ ಅಂಬುಲೆನ್ಸ್ ಮಾಡಿಕೊಂಡು 45 ವರ್ಷಗಳಿಂದ ಉಚಿತವಾಗಿ, ಸಾವಿರಾರು ಜನರ ಪ್ರಾಣ ಉಳಿಸಿದ ವ್ಯಕ್ತಿಗೆ ಏನ್ ಅಂತ ಕರೆಯಬೇಕು??

ಪ್ರಶಸ್ತಿ ಪಡೆದು ಮಾತನಾಡಿದ ಸರವಣ ವಯಸ್ಸಾಗಿರುವ ಮತ್ತು ಕಾಯಿಲೆಗಳಿಗೆ ತುತ್ತಾಗಿ ಹಾಸಿಗೆ ಹಿಡಿದವರು ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಲ್ಲವೂ ಇನ್ನೊಬ್ಬರ ಬಳಿಯೇ ಮಾಡಿಸಿಕೊಳ್ಳಬೇಕು ಎನ್ನುವ ಬೇಸರವಿರುತ್ತದೆ. ಅದನ್ನು ಹೋಗಲಾಡಿಸಲು ಈ ಸಂಶೋಧನೆಗೆ ಕೈ ಹಾಕಿದೆ ಒಂದನ್ನು ಒತ್ತಿದರೆ ಬೆಡ್‌ನ ಮಧ್ಯಭಾಗ ತೆರೆದುಕೊಳ್ಳಲಿದೆ. ಇನ್ನೊಂದು ಒತ್ತಿದರೆ ಫ್ಲಶ್ ಆಗುತ್ತದೆ. ಮತ್ತೊಂದು ಬಟನ್ ಮಧ್ಯಭಾಗವನ್ನು ಮತ್ತೆ ಮುಚ್ಚುತ್ತದೆ. ಈ ಬೆಡ್‌ಗೆ ನೀರಿನ ಹಾಗೂ ಶೌಚ ಹೊರಹಾಕಲು ಪೈಪ್‌ಲೈನ್‌ ವ್ಯವಸ್ಥೆಯಿರುತ್ತದೆ ಎಂದು ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಸರವಣ ಮಾಡಿರುವ ಆವಿಸ್ಕಾರಕ್ಕೆ ದೇಶದೆಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ.