ಕೊಡಗಿನ ವಿರಾಜಪೇಟೆ ಆದಿವಾಸಿಗಳ ಮನೆಗಳ ಮೇಲೆ ಜೆಸಿಬಿ ಆರ್ಭಟ

0
857

ಕೊಡಗಿನ ವಿರಾಜಪೇಟೆ ತಾಲ್ಲೂಕಿನ ಬಿಡ್ಡಳ್ಳಿ ಮತ್ತು ತಟ್ಟಳ್ಳಿ ಹಳ್ಳಿಗಳಲ್ಲಿ ಡಿಸೆಂಬರ್ 7 ತಾರೀಖು ಬೆಳ್ಳಂಬೆಳಗ್ಗೆ 3000 ಆದಿವಾಸಿಗಳ ಮನೆಗಳ ಮೇಲೆ ಜೆಸಿಬಿ ಯ ಆರ್ಭಟ ನಡೆಯುತ್ತದೆ .ಮಹಿಳೆಯರು ಮಕ್ಕಳು ಎನ್ನದೆ ಎಲ್ಲರ ಮನೆಗಳನ್ನು ದ್ವoಸ ಮಾಡಿ ಎಲ್ಲರನ್ನು ಬೀದಿ ಪಾಲು ಮಾಡಲಾಗುತ್ತದೆ

9                8

ಜೇನುಕುರುಬ , ಬೆಟ್ಟಕುರುಬ , ಶೋಲಿಯ, ಎರವ ಮತ್ತು ಪನಿಯ ಪಂಗಡಗಳಿಗೆ ಸೇರಿದ ಆದಿವಾಸಿಗಳ 578 ಕುಟುಂಬಗಳು ಜೂನ್ 2016 ರಿಂದ ಈ ಹಳ್ಳಿಗಳ ಕಾಫಿ ತೋಟಗಳ ಬಳಿ 2.5 ಎಕರೆ ಜಾಗದಲ್ಲಿ ಗುಡಿಸಲುಗಳಲ್ಲಿ ವಾಸಿಸುತ್ತಿದ್ದರು.

ಪರಿಶಿಷ್ಟ ಪಂಗಡಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯ ನಿವಾಸಿಗಳು ಕಾಯಿದೆ ಅಥವಾ ಅರಣ್ಯ ಹಕ್ಕುಗಳ ಕಾಯಿದೆ ಪ್ರಕಾರ. ಡಿಸೆಂಬರ್ 2006 ರಲ್ಲಿ ಜಾರಿಗೆ ಬಂದ ಶಾಸನ ಇದು ಜನವರಿ 1, 2008 ರಂದು ಕಾರ್ಯ ರೂಪಕ್ಕೆ ಬಂದಿತು ಇದರ ಪ್ರಕಾರ ಆದಿವಾಸಿಗಳ ಜೀವನೋಪಾಯಕ್ಕೆ ಸರ್ಕಾರವು 2.5 ಎಕರೆ ಭೂಮಿ ನೀಡಬೇಕು ಆದರೆ ಸರ್ಕಾರ ಈ ತನಕ ಒಂದು ಇಂಚು ಭೂಮಿ ಸಹ ನೀಡಲಾಗಿಲ್ಲ.

7 6 5

ಇದೆ ವಿಷಯವಾಗಿ ನಟ ಚೇತನ್ ರವರು ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು ಓದಿ : CLICK HERE

ಯಾವುದೇ ಮುನ್ಸೂಚನೆ ಹಾಗು ಪುನರ್ವಸತಿ ಕಲ್ಪಿಸದೆ ಅರಣ್ಯ ಇಲಾಖೆಯ ಸಿಬ್ಬಂದಿಯು ಈ ಗಿರಿಜನರ ಒಕ್ಕಲೆಬ್ಬಿಸುವ ಕಾರ್ಯ ಖಂಡನೀಯ ಈ ಭೂಮಿಯ ಮೇಲೆ ಎಲ್ಲರಿಗು ಬದುಕುವ ಹಕ್ಕಿದೆ , ಸರ್ವರಿಗೂ ಸಮ ಬಾಳು ಅದೇ ಸಂವಿಧಾನದ ಆಶಯ ಕೂಡ ಎಂಬುದು ಚಿತ್ರ ನಟ ಚೇತನ್ ರವರ ಅಭಿಪ್ರಾಯವಾಗಿದೆ .

3 2 1

ಸೂರು ಕಳೆದುಕೊಂಡು ಬೀದಿಪಾಲಾಗಿರುವ ಕೊಡಗಿನ ಆದಿವಾಸಿಗಳ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಪುನರ್ವಸತಿಗಾಗಿ ಒತ್ತಾಯಿಸಿ ಅದಿವಾಸಿಗಳೊಡನೆ ವಾಸ್ತವ್ಯ ಹೂಡಿದ್ದಾರೆ. ಅಹಿಂದ ಸಂಘಟನೆಗಳೊಂದಿಗೆ ಒಡಗೂಡಿ “ಭಾನುವಾರ ನಮ್ಮಳ್ಳಿ ದಿಡ್ಡಳ್ಳಿಗೆ ಬನ್ನಿ ” ಎಂಬ ಪ್ರತಿಭಟನಾ ವಾಕ್ಯದೊಂದಿಗೆ .

ಬಡವರ ಒಕ್ಕಲ್ಲೆಬ್ಬಿಸಿದ ಸರ್ಕಾರಕ್ಕೆ ಧಿಕ್ಕಾರ ಹೇಳುತ್ತಾ , ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಾರೆ ನಟ ಚೇತನ್
ತೆರೆ ಮೇಲೆ ಹೀರೋಗಳಿಗೆ ಕೊರತೆ ಇಲ್ಲ ತೆರೆಯ ಹಿಂದಿನ ಎಲೆಮರೆಯ ಕಾಯಿಯಂತೆ ನೊಂದ ಜನರ ಪರ ಮಾನವ ಹಕ್ಕು ಗಳಿಗಾಗಿ ಹೋರಾಡುತ್ತಿರುವುದು ನಿಜಕ್ಕೂ ಹೆಮ್ಮೆ ತರುವಂತದ್ದು.