ಚಿಕನ್ ಬ್ರೆಡ್ ರೋಲ್ ಮಾಡುವ ರೆಸಿಪೆ ನಿಮಗಾಗಿ..

0
1066

ಚಿಕನ್ ಪ್ರಿಯರಿಗೆ ವಾರದ ರಜೆ ಬಂದೆ ಬಿಡ್ತು ಅದಕ್ಕಾಗಿ ಹೊಸ ಶೈಲಿಯಲ್ಲಿ ಸುಲಭವಾದ ಚಿಕನ್ ಖಾದ್ಯವನ್ನು ನೀವು ಮಾಡಬಹುದು ಮತ್ತೆ ಈ ಖಾದ್ಯವನ್ನು ದೊಡ್ಡವರು ಅಷ್ಟೇಅಲ್ಲ ಮಕ್ಕಳು ಕೂಡ ಇಷ್ಟ ಪಡುತ್ತಾರೆ. ಚಿಕನ್ ನಲ್ಲಿರುವ ಕಬಾಬ್. ಚಿಕನ್ ಮಸಾಲ. ಚಿಕನ್ ಗ್ರೇವಿ, ಹೇಗೆ ಹಲವಾರು ತರಹದ ಖಾದ್ಯಗಳ ರುಚಿಯನ್ನು ನೋಡಿದ್ದಿರ ಇವೆಲ್ಲವುಗಳಿಗಿಂತ ರುಚಿಯಾದ ಚಿಕನ್ ಖಾದ್ಯ ಅಂದ್ರೆ ಬ್ರೆಡ್ ಚಿಕನ್ ರೋಲ್ ಇದನ್ನು ಅತಿಕಡಿಮೆ ಸಮಯದಲ್ಲಿ ಮಾಡುವ ರೆಸಿಪೆ ಇಲ್ಲಿದೆ ನೋಡಿ.

Also read: ಪೋಷಕಾ೦ಶ, ಕ್ಯಾಲರಿಅ೦ಶವುಳ್ಳ ಚಿಕನ್ ಗೀ ಮಸಾಲಾ ಮಾಡುವ ವಿಧಾನ..!!

ಬೇಕಾಗುವ ಪದಾರ್ಥಗಳು:

 • 1. ಬೋನ್ ಲೆಸ್ ಚಿಕನ್ – 300 ಗ್ರಾಂ
 • 2. ಮೊಸರು – ಅರ್ಧ ಕಪ್
 • 3. ಬೆಳ್ಳುಳ್ಳಿ ಪೇಸ್ಟ್ – 1 ಚಮಚ
 • 4. ಕೆಂಪು ಮೆಣಸಿನಕಾಯಿ ತರಿ – 1 ಚಮಚ
 • 5. ತಂದೂರಿ ಮಸಾಲ ಪುಡಿ – 1 ಚಮಚ

Also read: ಚಿಕನ್ 65’ನ್ನು ನಿಮ್ಮ ಮನೆಯಲ್ಲಿಯೇ ನಿಮ್ಮ ಕೈಯಿಂದಾನೆ ಮಾಡಿ ಸವಿಯಬಹುದು..!!

 • 6. ಹಾಲಿನ ಗಟ್ಟಿ ಕೆನೆ
 • 7. ಎಣ್ಣೆ – ಕರಿಯಲು
 • 8. ಉಪ್ಪು – ರುಚಿಗೆ ತಕ್ಕಷ್ಟು
 • 9. ಬ್ರೆಡ್ ಸ್ಲೈಸ್ – ಬೇಕಾದಷ್ಟು
 • 10. ಮೊಟ್ಟೆ – 2
 • 11. ಬ್ರೆಡ್ ಕ್ರಮ್ಸ್ – ಅರ್ಧ ಕಪ್

ಮಾಡುವ ವಿಧಾನ:

Also read: ಹೈದರಾಬಾದ್ ಚಿಕನ್ ಬಿರಿಯಾನಿ ಅಂದ್ರೆ ಬಾಯಲ್ಲಿ ನೀರು ಬರುತ್ತೆ ಅಲ್ವ…? ಮತ್ತೆ ಯಾಕೆ ತಡ ಸುಲಭವಾಗಿ ನಿಮ್ಮ ಮನೆಯಲ್ಲಿಯೇ ಮಾಡಿಕೊಳ್ಳಿ..!!

 • ಸಣ್ಣಗೆ ಕತ್ತರಿಸಿದ ಅಥವಾ ಕ್ಯೂಬ್ ಆಕಾರದಲ್ಲಿ ಕತ್ತರಿಸಿದ ಬೋನ್‍ಲೆಸ್ ಚಿಕನ್, ಮೊಸರು, ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಕೆಂಪು ಮೆಣಸಿನಕಾಯಿ ತರಿ, ತಂದೂರಿ ಮಸಾಲಾ ಪುಡಿ ಎಲ್ಲವನ್ನು ಸೇರಿಸಿ ಕಲಸಿರಿ.
 • ಕಲಸಿದ ಚಿಕನ್ ಮಸಾಲಾವನ್ನು 30 ನಿಮಿಷಗಳ ಕಾಲ ಮ್ಯಾರಿನೇಟ್ ಮಾಡಲು ಫೀಸರ್‍ನಲ್ಲಿಡಿ.
 • ನಂತರ 1 ಪ್ಯಾನ್ ಗೆ 2 ಚಮಚ ಎಣ್ಣೆ ಹಾಕಿ ಮ್ಯಾರಿನೇಟ್ ಆದ ಚಿಕನ್ ಹಾಕಿ ಫ್ರೈ ಮಾಡಿ.
 • ಬಳಿಕ ಬ್ರೆಡ್ ಸ್ಲೈಸ್ ನ ಅಂಚು ಕತ್ತರಿಸಿ ಸ್ವಲ್ಪ ಗಟ್ಟಿ ಕೆನೆಯನ್ನು ಸವರಿ ಫ್ರೈ ಮಾಡಿದ ಚಿಕನ್ ಫಿಲ್ ಮಾಡಿ ರೋಲ್ ಮಾಡಿ.
 • 2 ಮೊಟ್ಟೆ ಒಡೆದು ಬೀಟ್ ಮಾಡಿ ಅದರಲ್ಲಿ ರೋಲ್ ಡಿಪ್ ಮಾಡಿ.
 • ಬ್ರೆಡ್ ಕ್ರಮ್ಸ್ ನಲ್ಲಿ ಹೊರಳಿಸಿ ಕಾದ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ.
 • ಸಾಸ್ ಅಥವಾ ಗ್ರೀನ್ ಚಟ್ನಿಯೊಂದಿಗೆ ಬ್ರೆಡ್ ಚಿಕನ್ ರೋಲ್ ಸವಿಯಿರಿ.