ನಾನ್ ವೆಜ್ ಪ್ರಿಯರಿಗೆ ಸಿಹಿಸುದ್ದಿ; ರಾಜ್ಯ ಸರ್ಕಾರದಿಂದ ಚಿಕನ್, ಮಟನ್ ಭಾಗ್ಯ!!

0
769

ಇಷ್ಟು ದಿನ ರಾಜ್ಯ ಸರ್ಕಾರ ಏನೆಲ್ಲ ಭಾಗ್ಯ ನೀಡಿದೆ ಎಂಬುವುದು ಗೊತ್ತಿದೆ. ಅದೇರೀತಿ ಸರ್ಕಾರ ಮತ್ತೊಂದು ಹೊಸ ಯೋಜನೆಗೆ ಸಜ್ಜಾಗಿದ್ದು ಮನೆ – ಮನೆಗೂ ಸರಕಾರದ ವತಿಯಿಂದಲೇ ಚಿಕನ್, ಮಟನ್ ತಲುಪಿಸುವ ವ್ಯವಸ್ಥೆಯ ಯೋಜನೆ ಇದಾಗಿದ್ದು. ಇನ್ಮುಂದೆ ನಾವು ದೈನಂದಿನ ತರಕಾರಿ, ಸೊಪ್ಪು ಖರೀದಿಸುವ ಹಾಗೇ ಮನೆಯ ಮುಂದೆಯೇ ಮಾಂಸಾಹಾರವನ್ನು ಖರೀದಿಸಬಹುದು.

ಏನಿದು ಚಿಕನ್ ಮಟನ್ ಭಾಗ್ಯ?

Also read: ಚಿಕನ್ ಸೇವನೆ ಮಾಡಿದ್ರು ಡೇಂಜರ್ ಮಾಡಿಲ್ಲ ಅಂದ್ರು ಡೇಂಜರ್ ಹೇಗೆ ಅನ್ನೋ ಶಾಕಿಂಗ್ ನ್ಯೂಸ್ ಇಲ್ಲಿದೆ ನೋಡಿ..!

ಹೌದು ಅದರಲ್ಲಿ ಶಾದಿಭಾಗ್ಯ, ಸಾಲಮನ್ನಾ ಭಾಗ್ಯ, ಕೃಷಿ ಭಾಗ್ಯ, ಕ್ಷೇರ ಭಾಗ್ಯ, ಸೈಕಲ್ ಭಾಗ್ಯ ಸೇರಿದಂತೆ ವಿಬ್ಬಿನ್ನವಾದ ಹಲವಾರು ಭಾಗ್ಯಗಳನ್ನು ನೀಡಿದ ಸರ್ಕಾರ ಮತ್ತೊಂದು ಹೊಸ ಯೋಜನೆಗೆ ಸಜ್ಜಾಗಿದೆ. ಅದೇ ಮನೆ – ಮನೆಗೂ ಸರಕಾರದ ವತಿಯಿಂದಲೇ ಚಿಕನ್, ಮಟನ್ ತಲುಪಿಸುವ ಯೋಜನೆಯಾಗಿದ್ದು. ಈ ಯೋಜನೆಯಲ್ಲಿ ಕೇವಲ ಮಾಂಸ ಮಾತ್ರವಲ್ಲದೇ ಮಾಂಸದಿಂದ ತಯಾರಿಸಿದ ಖಾದ್ಯಗಳ ಮಾರಾಟಕ್ಕೆ ಸಂಚಾರಿ ಘಟಕ ತೆರೆಯಲು ಸಹಾಯಧನ ನೀಡಲಾಗುತ್ತಿದೆ. ಹೀಗಾಗಿ, ಮಟನ್ ಸಿಗುವ ಬೀದಿ ಅಂಗಡಿಗಳನ್ನುಹುಡುಕಿ ಹೋಗಬೇಕಾದ ಕಷ್ಟ ತಪ್ಪಲಿದೆ.

ಉದ್ದೇಶವೇನು ಏನು?

ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಈ ಯೋಜನೆಯು ಇನ್ನೇನು ಕೆಲವೇ ದಿನಗಳಲ್ಲಿ ಜಾರಿಗೆ ಬರಲಿದ್ದು. ಇದರಿಂದ ಕುರಿ ಸಾಕುವರ ಮತ್ತು ಉಣ್ಣೆ ಉದ್ಯೆಮಗಳ ಅಭಿವೃದ್ಧಿಯ ಉದ್ದೇಶವನ್ನು ಇಟ್ಟುಕೊಂಡು ಇಂತಹ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಹಾಗೆಯೇ ಜನರಿಗೆ ತಮ್ಮ ಮನೆಯ ಹತ್ತಿರದಲ್ಲೇ ಮಾಂಸ ಮತ್ತು ಮಾಂಸದ ಖಾದ್ಯಗಳ ಸಿಗುವುದರಿಂದ ಅವುಗಳನ್ನು ಸೇವಿಸುವ ಜನರು ಆರೋಗ್ಯಯುತವಾಗಿರುತ್ತಾರೆ. ಹಾಗೆಯೇ ರಾಜ್ಯದ ಅಭಿವೃಧಿ ಆಗುತ್ತದೆ ಎಂಬುವುದು ಮುಖ್ಯ ಉದ್ದೇಶವಾಗಿದೆ.

ಯೋಜನೆಯ ಮೊತ್ತ ವೇಷ್ಟು?

ಈ ಯೋಜನೆಯಿಂದ ತಾಜಾ ಮಾಂಸಹಾರವನ್ನು ಮಾರಾಟ ಮಾಡಲು ಪಿಕ್ ಅಪ್‌ವ್ಯಾನ್‌ ರೀತಿಯ ವಾಹನಕ್ಕೆ 6 ಲಕ್ಷ, ಸ್ಟೀಲ್ ಫ್ಯಾಬ್ರಿಕೇಷನ್ ಗೆ 3.1 ಲಕ್ಷ, ಎಲೆಕ್ಟ್ರಿಕಲ್ ಜನರೇಟರ್ ಸೆಟ್‌ ಗಾಗಿ 60 ಸಾವಿರ, ಇನ್ನಿತರೇ ಯುನಿಟ್‌ ಗಾಗಿ 80 ಸಾವಿರ, ಗ್ಯಾಸ್‌ ಸ್ಟವ್ ಗಾಗಿ 20 ಸಾವಿರ, ಅಡುಗೆ ಪಾತ್ರೆಗಳಿಗೆ 30 ಸಾವಿರ ಒಟ್ಟು 11 ಲಕ್ಷ ರೂ.ವೆಚ್ಚದ ಯೋಜನೆ ಇದಾಗಿದ್ದು ಹೆಚ್ಚಿನ ಹಣವನ್ನು ವ್ಯಾಪಾರಗಾರರೆ ಬರಿಸಬೇಕಾಗುತ್ತೆ.

ಈ ಯೋಜನೆಗೆ ಸಹಾಯಧನ ಸಿಗಲಿದೆಯೇ?

ಹೌದು ಸರ್ಕಾರದ ಈ ಹೊಸ ಯೋಜನೆಯಿಂದ ಶೇ.75ರಷ್ಟು ಸಹಾಯಧನ ನೀಡುತ್ತೆ, ಇದರಲ್ಲಿ ಪರಿಶಿಷ್ಟ ಜಾತಿ,ಪಂಗಡದವರಿಗೆ ಶೇ.75ರಷ್ಟು ಅಂದರೆ 8, 250, 000 ರೂ. ಸಹಾಯಧನ ಸಿಗಲಿದೆ. ಬಾಕಿ 2,75.000 ರೂ.ಗಳನ್ನು ಬ್ಯಾಂಕ್‌ನಿಂದ ಸಾಲದರೂಪದಲ್ಲಿ ಈ ಯೋಜನೆಯಲ್ಲಿ ಪಡೆದುಕೊಳ್ಳಬಹುದಾಗಿದೆ. ಹಾಗೆಯೆ ಮಹಿಳೆಯರಿಗೆ ಶೇ.33 ರಷ್ಟು ಅದರಲ್ಲೂಮಹಿಳೆಯರಿಗೆ ಶೇ.33, ವಿಕಲಚೇತನರಿಗೆ ಶೇ.3ರಷ್ಟು ಮೀಸಲಾತಿ ಇದೆ. ಮತ್ತು ಎಸ್‌ಸಿ ಫಲಾನುಭವಿಗಳಿಗೆ ಈಗಾಗಲೇ ಮಾಂಸ ಮಾರಾಟ ಹಾಗೂ ಮಾಂಸದಿಂದ ತಯಾರಿಸಿದ ಖಾದ್ಯ ವಸ್ತುಗಳ ಮಾರಾಟದಲ್ಲಿ ಹೆಚ್ಚು ತೊಡಗಿಸಿಕೊಂಡವರಿಗೆ ಮೊದಲ ಆದ್ಯತೆಯಾಗಿ ಹಣವನ್ನು ಸರ್ಕಾರ ನೀಡಲು ಮುಂದಾಗಿದೆ.

ಅರ್ಹತೆಗಳೇನು?

Also read: ನೀವು ಮಾಂಸಾಹಾರಿಗಳಾಗಿದ್ದಲ್ಲಿ ಎಚ್ಚರ; ಅಧಿಕ ಉಷ್ಣಾಂಶದಲ್ಲಿ ಬೇಯಿಸಿದ ಮಾಂಸ ಸೇವನೆ ಹೃದಯಕ್ಕೆ ಮಾರಕ..

ಈ ಯೋಜನೆಯ ಫಲಾನುಭವಿಗಳು ಲಘು ಸಾರಿಗೆ ವಾಹನದ ಚಾಲನಾ ಪ್ರಮಾಣಪತ್ರ ಹೊಂದಿರಬೇಕು. ಗುಣಮಟ್ಟದ ಆಹಾರ ಒದಗಿಸಬೇಕು. ಕಡಿಮೆ ಗುಣಮಟ್ಟದ ಆಹಾರದಿಂದ ಸಾರ್ವಜನಿಕರ ಆರೋಗ್ಯಕ್ಕೆ ಅಪಾಯವಾದರೆ ಮಾರಟಗಾರರೆ ಹೊಣೆಯಾಗಿರುತ್ತಾನೆ. ಮತ್ತು ವಾಹನಪರಿಕರಗಳನ್ನು ಕನಿಷ್ಠ 5 ವರ್ಷದವರೆಗೆ ಯಾರಿಗೂ ಬಾಡಿಗೆ ನೀಡುವಂತಿಲ್ಲ . ಇವಕ್ಕೆಲ್ಲ ಒಪ್ಪಿದರೆ ಮಾತ್ರಸಹಾಯಧನ ಸಿಗಲಿದ್ದು , ಸದ್ಯ ಈ ಯೋಜನೆಗೆ ಬೆಂಗಳೂರು ನಗರ 3, ಗ್ರಾಮಾಂತರ 2, ಹಾವೇರಿ 3,ಉತ್ತರ ಕನ್ನಡ 1, ವಿಜಯಪುರ 4, ಕಲಬುರ್ಗಿ 7, ಬಳ್ಳಾರಿ 6,ಬೀದರ್‌ 5, ಕೊಪ್ಪಳ 4, ರಾಯಚೂರು 13, ಯಾದಗಿರಿಯಲ್ಲಿ 8, ಗ್ರಾಮಾಂತರ 3, ಮೈಸೂರು 6, ಚಾಮರಾಜನಗರ 4, ಚಿಕ್ಕಮಗಳೂರು 3, ದಕ್ಷಿಣಕನ್ನಡ 2, ಹಾಸನ 5, ಕೊಡಗು 1, ಮಂಡ್ಯ 5, ಉಡುಪಿ 1,ಬೆಳಗಾವಿ 5, ಬಾಗಲಕೋಟೆ 3, ಚಿತ್ರದುರ್ಗ 3, ಚಿಕ್ಕಬಳ್ಳಾಪುರ 2, ದಾವಣಗೆರೆ 5, ಕೋಲಾರ 3, ರಾಮನಗರ 5, ಶಿವಮೊಗ್ಗ 3, ತುಮಕೂರು 5,ಧಾರವಾಡ 1, ಗದಗ 3 ಫಲಾನುಭವಿಗಳಿಗೆ ಅವಕಾಶ ಸಿಗಲಿದೆ. ಈ ಯೋಜನೆ ಯಾವ ರೀತಿಯ ಯಶಸ್ವಿ ಕಾಣುತ್ತೆ ಅಂತ ಕಾದು ನೋಡಬೇ