10 ನಿಮಿಷದಲ್ಲಿ ಮಾಡಿ ಚಿಕನ್ ಪೆಪ್ಪರ್ ಫ್ರೈ

0
1885

 ಚಿಕನ್ ಪೆಪ್ಪರ್ ಫ್ರೈ ಬೇಕಾಗುವ ಪದಾರ್ಥಗಳು

*ಕೋಳಿ ಮಾಂಸ – 1 ಕೆಜಿ

*ಈರುಳ್ಳಿ – 3

*ಕಾಳು ಮೆಣಸಿನ ಪುಡಿ – 2 ಚಮಚ

*ಶುಂಠಿ – ಸ್ವಲ್ಪ

*ಬೆಳ್ಳುಳ್ಳಿ- ಸ್ವಲ್ಪ

*ಹಸಿಮೆಣಸಿನಕಾಯಿ – 6

*ಚಕ್ಕೆ- ಸ್ವಲ್ಪ

*ಲವಂಗ – 3

*ಅರಿಶಿನ – ಅರ್ಧ ಚಮಚ

*ಕೊತ್ತಂಬರಿ ಸೊಪ್ಪು – ಸ್ವಲ್ಪ

*ತುಪ್ಪ – 50 ಗ್ರಾಂ

*ಎಣ್ಣೆ – 50 ಗ್ರಾಂ

*ಉಪ್ಪು – ರುಚಿಗೆ ತಕ್ಕಷ್ಟು

 

ಮಾಡುವ ವಿಧಾನ…

 

ಈರುಳ್ಳಿ ಒಂದನ್ನು ಬಿಟ್ಟು ಉಳಿದೆಲ್ಲ ಮಸಾಲೆಗಳನ್ನು ನುಣ್ಣಗೆ ರುಬ್ಬಿ ಎರಡು ಚಮಚ ತುಪ್ಪದಲ್ಲಿ ಈರುಳ್ಳಿ ಬಾಡಿಸಿ.ತೊಳೆದಿಟ್ಟ ಕೋಳಿ ತುಂಡುಗಳನ್ನು ಕೊಂಚ ಎಣ್ಣೆಯನ್ನು ಸೇರಿಸಿ 10 ನಿಮಿಷ ಹುರಿಯಿರಿ. ಇದಕ್ಕೆ ಉಪ್ಪು, ರುಬ್ಬಿದ ಮಸಾಲೆ ಸೇರಿಸಿ 10 ನಿಮಿಷ ಹುರಿಯಿರಿ. ನಂತರ ಸಾಕಷ್ಟು ನೀರು ಸೇರಿಸಿ ಮೆತ್ತಗಾಗುವವರೆಗೆ ಬೇಯಿಸಿ ಜಿಡ್ಡು ಬಿಟ್ಟುಕೊಳ್ಳುವವರೆಗೆ ಮಾಂಸ ಚೆನ್ನಾಗಿ ಬೇಯಿಸಿ.

ಮತ್ತೊಂದು ರಿತಿಯಾಲ್ಲಿ ತಯಾರಿಸುವ ವಿಧಾನ:

* ಚಿಕನ್ ಅನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿ, ಚೆನ್ನಾಗಿ ತೊಳೆದು ಅದಕ್ಕೆ ವಿನಿಗರ್, ಈರುಳ್ಳಿ ಪೇಸ್ಟ್ (ಈರುಳ್ಳಿ ಪೇಸ್ಟ್ ಸ್ವಲ್ಪ ನೀರು ರೀತಿಯಲ್ಲಿರಲಿ), ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಗೂ ಸ್ವಲ್ಪ ಉಪ್ಪು 1 ಚಮಚ ಕರಿ ಮೆಣಸಿನ ಪುಡಿ ಹಾಕಿ ಮಿಶ್ರಣ ಮಾಡಿ ಅರ್ಧ ಗಂಟೆ ಇಡಬೇಕು.

* ಈಗ ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಬೇಕು. ಎಣ್ಣೆ ಬಿಸಿಯಾದಾಗ ಕರಿ ಬೇವಿನ ಎಲೆ, ಹಸಿ ಮೆಣಸು, ಒಣ ಮೆಣಸನ್ನು ಕತ್ತರಿಸಿ ಹಾಕಿ2 ನಿಮಿಷ ಸೌಟ್ ನಿಂದ ಆಡಿಸಬೇಕು.

* ನಂತರ ಮಿಶ್ರಣ ಮಾಡಿಟ್ಟ ಚಿಕನ್ ಹಾಕಿ 1 ಚಮಚ ಕರಿ ಮೆಣಸಿನ ಪುಡಿ ಮತ್ತು ರುಚಿಗೆ ತಕ್ಕ ಉಪ್ಪು, ನೀರು ಹಾಕದೆ ಸೌಟ್ ನಿಂದ ತಿರುಗಿಸುತ್ತಾ ಬೇಯಿಸಿ. ಇದು ಡ್ರೈ ರೀತಿಯಲ್ಲಿರಲಿ.ಇಷ್ಟು ಮಾಡಿದರೆ ಚಿಕನ್ ಪೆಪ್ಪರ್ ಫ್ರೈ ರೆಡಿ.