ಚಿಕನ್ ರೋಸ್ಟ್ ಮಾಡುವ ವಿಧಾನ

0
2018
Woman brown eye with extremely long eyelashes

ಭಾರತೀಯರು ಎಲ್ಲಾ ಋತುಮಾನಗಳಲ್ಲೂ ಖಾರ ತಿಂಡಿಗಳನ್ನು ಇಷ್ಟಪಡುತ್ತಾರೆ. ಅದು ಸಸ್ಯಾಹಾರವಾಗಿರಲಿ ಮಾಂಸಾಹಾರವಾಗಿರಲಿ ಸ್ಪೈಸಿ ಆಗಿರುವ ಫುಡ್ ಅಂದರೆ ಅವರಿಗೆ ಪಂಚಪ್ರಾಣ. ಮಾಂಸಹಾರದಲ್ಲಿ ಸಸ್ಯಾಹಾರಕ್ಕಿಂತಲೂ ಸ್ಪೈಸಿ ಕಾಂಬಿನೇಶನ್ ಸ್ವಲ್ಪ ಜಾಸ್ತಿ ಎಂದೇ ಹೇಳಬಹುದು. ಚಿಕನ್ ಬಳಸಿ ಮಾಡುವ ಪ್ರತಿಯೊಂದು ಮಾಂಸಾಹಾರಿ ಡಿಶ್ ಕೂಡ ಅತ್ಯವಶ್ಯಕ ಖಾರವನ್ನು ಬೆರೆತುಕೊಂಡಿರುತ್ತದೆ.

ಕ್ರಿಸ್ಪಿ ಮತ್ತು ಒಳಗೆ ಮೆದು ಮಾಂಸವನ್ನು ಒಳಗೊಂಡಿರುವ ಈ ಫ್ರೈ ಮಾಡಿದ ಚಿಕನ್ ರೆಸಿಪಿ ನಿಮ್ಮ ಬಾಯಲ್ಲಿ ಇದರ ರುಚಿಯನ್ನು ಹಸಿಯಾಗಿರಿಸುತ್ತದೆ. ಹಾಗಿದ್ದರೆ ಈ ರುಚಿಯನ್ನು ನಿಮ್ಮದಾಗಿಸಿಕೊಳ್ಳಲು ತಯಾರಾಗಿ.

download

ಬೇಕಾಗುವ ಸಾಮಗ್ರಿಗಳು:

1)1ಕೆ.ಜಿ ಚಿಕನ್ ಚರ್ಮ ತೆಗೆದು ಇಡಿಯಾಗಿ ಇರಿಸಿದ್ದು,

2)1. ಈರುಳ್ಳಿ

3)1)ಬೆಳ್ಳುಳಿ

4)1.ಟೀ ಚಮಚ ಮೆಣಸು.

5)1 ದಾಲ್ಚಿನ್ನಿ.

6)2 ಏಲಕ್ಕಿ

7)1 ಟೀ ಚಮಚ ಸೋಯಾಸಾಸ್

8)2 ಟೀ ಚಮಚ ಉಪ್ಪು

9)2 ಟೇಬಲ್ ಸ್ಪೂನ್ ಎಣ್ಣೆ ( ಎಲ್ಲ ಮಸಾಲೆಗಳನ್ನು ಒಟ್ಟಾಗಿ ಅರೆದು ಚಿಕನ್ ಗೆ ಹಚ್ಚಿ)

ಮಾಡುವ ವಿಧಾನ;

ಪೋರ್ಕ್ ಸ್ಫೂನ್ ನಿಂದ ಚಿಕನ್ ಅನ್ನು ಎಲ್ಲಕಡೆ ಚುಚ್ಚಿ ತೆಗೆಯಿರಿ. ಚಿಕನ್ ಗೆ ಅರೆದ ಮಸಾಲೆಯನ್ನು, ಉಪ್ಪು ಮತ್ತು ಸೋಯಸಾಸ್ ಗಳನ್ನು ಹಚ್ಚಿರಿ ನಂತರ ಅರ್ಧಗಂಟೆ ಮಸಾಲೆ ಹಿಡಿಯಲುಬಿಡಿ. ನಂತರ ಮಸಾಲೆ ಹಿಡಿದ ಚಿಕನ್ ಅನ್ನು ಕಾಲು ಬಟ್ಟಲು ನೀರಿನೊಂದಿಗೆ ಒತ್ತಡದಲ್ಲಿ 5 ನಿಮೀಷಗಳ ಕಾಲ ಬೇಯಿಸಿ. ಚಿಕನ್ ಅಗಲವಾದ ಬಾಯಿಯಿರುವ ಪಾತ್ರೆಯಲ್ಲಿ 2 ಟೇಬಲ್ ಚಮಚ ಎಣ್ಣೆ ಕಾಕಿ ಚಿಕನ್ ಅನ್ನು ಮೇಲೆ ಕೆಳಗೆ ಹುರಿಯಿರಿ. ನಂತರ  ಅದನ್ನು ನಿಮಗೆ ಬೇಕಾದ ರೀತಿಯಲ್ಲಿ ಅಲಂಕರಿಸಿ ಸವಿಯಬಹುದು.