ಅತಿ ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ಆರೋಗ್ಯಕರ ಡಯಟ್ – ಚಿಕನ್ ಸೂಪ್ ಮಾಡಿ ಸವಿದು ನೋಡಿ..!!

0
565

ಸುಲಭವಾಗಿ ಮಾಡಿ ಸವಿಯಿರಿ ಚಿಕನ್ ಸೂಪ್

ಚಿಕನ್ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ ಕೇವಲ NONVEG ತಿನ್ನುವರು ಅಷ್ಟೇ ಅಲ್ಲ PUREVEG ತಿನ್ನುವರು ಕೂಡ ಚಿಕನ್ ರುಚಿಯನ್ನು ನೋಡಿತ್ತಿದ್ದಾರೆ ಇದರಿಂದಲೇ ಅಲ್ವ 50 ರೂ ಇರುವ ಚಿಕನ್ 300 ರೂ ಆಗಿದೆ, ದಿನೇ ದಿನೇ ಇದರ ಬೇಡಿಕೆ ಹೆಚ್ಚಾಗಿದೆ. ಕೆಲವೊಬರಂತೂ ಚಿಕನ್ ಇಲ್ಲದೆ ಊಟವನ್ನೇ ಮಾಡೋದಿಲ್ಲ ಹೀಗೆ ಫ್ರೀ ಇರುವ ಸಮಯದಲ್ಲಿ ಮೊದಲು ಯೋಚನೆ ಮಾಡೋದೇ ಚಿಕನ್ ತಿನ್ನೋದು. ಅದರಲ್ಲಿ ನಾಟಿಕೋಳಿ ಇದ್ರೆ ಅಂತು ಮುಗಿತು ಅದರ ರುಚಿ ತಿನ್ನುವರಿಗೆ ಗೊತ್ತು. ಈಗಾಗಲೇ ಇಂತಹ ನೂರಾರು ವಿಧದ ಚಿಕನ್ ಖಾದ್ಯದ ರುಚಿ ನೋಡಿದಿರಾ. ಅದು ಅಷ್ಟೇ ಅಲ್ಲದೆ ಚಿಕನ್ ನಲ್ಲಿ ಪ್ರೊಟೀನ್ ಅಂಶ ಅಧಿಕವಿರುವುದರಿಂದ ಚಿಕನ್ ಸೂಪ್ ಮಾಡಿ ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸಮತೂಕದ ಮೈಕಟ್ಟನ್ನು ಪಡೆಯಲು ತುಂಬಾ ಜನ ಚಿಕನ್ ಸೂಪ್ ಡಯಟ್ ಮಾಡುತ್ತಾರೆ. ಇಂತಹ ಚಿಕನ್ ಸೂಪ್ ಅನ್ನು ಸುಲಭವಾಗಿ ಮಾಡಬಹುದು ಅದು ಹೇಗೆ ಅಂದ್ರೆ ಇಲ್ಲಿದೆ ನೋಡಿ.

Also read: ಹೆಚ್ಚು ಖಾರವನ್ನು ತಿನ್ನಲು ಬಯಸುವವರು ಇಂದೇ ಟ್ರೈ ಮಾಡಿ ಬಟರ್ ಚಿಕನ್ ಮಸಾಲ….

ಬೇಕಾಗಿರುವ ಪದಾರ್ಥಗಳು:

* ಅರ್ಧ ಕೆಜಿ ಚಿಕನ್

* 2 ಆಲೂಗೆಡ್ಡೆ

* 1/2 ಸ್ಪೂನ ಜೀರಿಗೆ

* 2 ಕ್ಯಾರೆಟ್

* 3 ಕಡ್ಡಿ ಸಿಲೆರಿ

* 2 ಈರುಳ್ಳಿ

* 10 ಕಪ್ ನೀರು

* 2 ಪಲಾವ್ ಎಲೆ

* ಒಂದು ಚಮಚ ಕರಿಮೆಣಸಿನ ಪುಡಿ

* ಅರ್ಧ ಕಪ್ ಜೋಳದ ಪುಡಿ

* 2 ಚಮಚ ಉಪ್ಪು

* ನಿಂಬೆ ಹಣ್ಣಿನ ರಸ

* ಕೊತ್ತಂಬರಿ ಸೊಪ್ಪು

Also read: 10 ನಿಮಿಷದಲ್ಲಿ ಮಾಡಿ ಚಿಕನ್ ಪೆಪ್ಪರ್ ಫ್ರೈ

ತಯಾರಿಸುವ ವಿಧಾನ:

1. 10 ಲೋಟ ನೀರಿಗೆ ಸ್ವಲ್ಪ ದೊಡ್ಡ ತುಂಡುಗಳಾಗಿ ಮಾಡಿದ ಚಿಕನ್, ಮತ್ತು ಸಿಪ್ಪೆ ಸುಲಿದು ಕತ್ತರಿಸಿದ ಆಲೂಗೆಡ್ಡೆ, ಕತ್ತರಿಸಿ ತಯಾರಿ ಮಾಡಿಕೊಂಡ ಕ್ಯಾರೆಟ್, ಈರುಳ್ಳಿ, ನೀರು, ಕೊತ್ತಂಬರಿ ಸೊಪ್ಪು, ಈರುಳ್ಳಿ, ಪಲಾವ್ ಎಲೆ ಮತ್ತು ಕರಿಮೆಣಸಿನ ಪುಡಿ, ಉಪ್ಪು ಹಾಕಿ ಚೆನ್ನಾಗಿ ಬೇಯಿಸಬೇಕು.

2. ನಂತರ ರಸ ಮತ್ತು ತರಕಾರಿಗಳನ್ನು ಬೇರೆ ಬೇರೆಯಾಗಿ ಮಾಡಬೇಕು. ಹಾಗೆಯೇ ಬೆಂದಿರುವ ಆಲೂಗೆಡ್ಡೆಯನ್ನು ಚೆನ್ನಾಗಿ ಹಿಸುಕಿ ಸೂಪಿನ ರಸಕ್ಕೆ ಅರ್ಧ ಕಪ್ ಜೋಳದ ಹಿಟ್ಟು ಹಾಕಿ, ಚಿಕನ್ ಅನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಮಾಡಿ, ಸಂಪೂರ್ಣವಾಗಿ ಮೂಳೆಯನ್ನು ತೆಗೆದು ಚೆನ್ನಾಗಿ ತಿರುಗಿಸಿ ಪುನಃ ಕುದಿಸಬೇಕು.

3. ಉಪ್ಪು ಮತ್ತು ಖಾರ ಸರಿಯಾಗಿದೆಯೇ ಎಂದು ನೋಡಿ. ತಿನ್ನುವ ಮುನ್ನ ನಿಂಬೆ ಹಣ್ಣಿನ ರಸ ಹಿಂಡಬೇಕು. ಈಗ ಕಡಿಮೆ ಸಮಯದಲ್ಲಿ ಕಡಿಮೆ ಪದಾರ್ಥಗಳಲ್ಲಿ ರುಚಿಕರವಾದ 5 ಗ್ಲಾಸ್ ಚಿಕನ್ ಸೂಪ್ ರೆಡಿ. ಹೀಗೆ ಟೈಮ್ ಸಿಕ್ಕಾಗೆಲ್ಲ ಇದೆ ರೀತಿಯಲ್ಲಿ ಚಿಕನ್ ಸೂಪ್ ಮಾಡಿ ಕುಡಿಯರಿ ಇದು ಕೇವಲ ರುಚ್ಚಿ ಅಷ್ಟೇ ಅಲ್ಲ ಆರೋಗ್ಯೇಕು ಒಳ್ಳೆಯದು.