ಚಿಕನ್ ಪ್ರಿಯರಿಗೆ ಭಾನುವಾರದ ವಿಶೇಷವಾದ “ಚಿಕನ್ ಸ್ಪೆಷಲ್” ಮಾಡುವ ವಿಧಾನ..

0
739

ಚಿಕನ್ ಪ್ರಿಯರಿಗೆ ಭಾನುವಾರ ಬಂದೆ ಬಿಡ್ತು ಈ ವಾರದ ಹೊಸ ರುಚಿಯಲ್ಲಿ ಯಾವ ತರಹದ ಚಿಕನ್ ತಯಾರಿಸುವುದು ಎಂಬ ಯೋಚನೆ ಇರುವುದು ಸಾಮಾನ್ಯ ಏಕೆಂದರೆ ಪ್ರತಿ ಸಾರಿ ಒಂದೇ ತರಹದ ರುಚಿ ನೋಡಿ ಬೇಜಾರು ಹಾಗಂತ ಚಿಕನ್ ತಿನ್ನುವುದು ಬಿಡೋಕೆ ಆಗೋದಿಲ್ಲ ಅದರಲ್ಲೇ ಸ್ವಲ್ಪ ರುಚಿ ಇರುವ ಚಿಕನ್ ಮಾಡಬೇಕು ಅಂದ್ರು ಮಾಡುವ ವಿಧಾನದ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಇಂತಹ ಯೋಚನೆಯಲ್ಲಿರುವವರಿಗೆ ಇಲ್ಲಿದೆ ನೋಡಿ ಖಾರವಾಗಿ ವಿಶೇಷವಾದ “ಚಿಕನ್ ಸ್ಪೆಷಲ್” ಮಾಡುವ ವಿಧಾನ ಇಲ್ಲಿದೆ.

Also read: ಹೆಚ್ಚು ರುಚಿಯಾಗಿರುವ ಚಿಕನ್ ಪ್ರೈ ಮಾಡುವ ಸುಲಭ ವಿಧಾನ ನಿಮಗಾಗಿ..

ಬೇಕಾಗುವ ಸಾಮಾಗ್ರಿಗಳು

 • 1 ಕೆಜಿ ಚಿಕನ್.
 • 2 ಈರುಳ್ಳಿ (ದೊಡ್ಡದು).
 • 1 ಬಟ್ಟಲು ಕೊತ್ತಂಬರಿ, ಪುದೀನಾ.
 • 4-5 ಹಸಿಮೆಣಸಿಕಾಯಿ – ರುಚಿಗೆ ತಕ್ಕಷ್ಟು.
 • 1 ಚಕ್ಕೆ – ಚಿಕ್ಕದು, ಪಲಾವ್ ಎಲೆ .
 • 1-2 ಏಲಕ್ಕಿ.
 • ಒಂದೂವರೆ ಚಮಚೆ ಶುಂಠಿ, ಬೆಳ್ಳುಳ್ಳಿ – ಪೇಸ್ಟ್.
 • 1 ಕಪ್ ಮೊಸರು.
 • 1 ಚಮಚ ಗರಂ ಮಸಾಲ.
 • 1 ಚಮಚ ಕೆಂಪು ಮೆಣಸಿನಕಾಯಿ ಪುಡಿ.
 • 13. ಜೀರಿಗೆ ಪುಡಿ – 1 ಚಮಚ.
 • 14. ದನಿಯಾಪುಡಿ – 1 ಚಮಚ.
 • 15. ಉಪ್ಪು – ರುಚಿಗೆ ತಕ್ಕಷ್ಟು.
 • 16. ತುಪ್ಪ – 4-5 ಚಮಚ.

ಮಾಡುವ ವಿಧಾನ

 1. ಮೊದಲಿಗೆ ತೊಳೆದ ಕೊತ್ತಂಬರಿ, ಪುದೀನಾ, ಹಸಿಮೆಣಸಿಕಾಯಿಯನ್ನು ಮಿಕ್ಸಿ ಜಾರ್ ಗೆ ಹಾಕಿ ಪೇಸ್ಟ್ ಮಾಡಿಟ್ಟಿಕೊಳ್ಳಿ.
 2. ಫ್ರೈ ಮಾಡುವ ಪ್ಯಾನ್‍ ಗೆ ತುಪ್ಪ ಹಾಕಿ, ಬಿಸಿಯಾದ ಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿ.
 3. ಈಗ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಚಕ್ಕೆ, ಏಲಕ್ಕಿ, ಪಲಾವ್ ಎಲೆಯನ್ನು ಹಾಕಿ ಹಸಿ ವಾಸನೆ ಹೋಗೋ ತನಕ ಫ್ರೈ ಮಾಡಿ.
 4. ಮಿಶ್ರಣಕ್ಕೆ ಚೆನ್ನಾಗಿ ತೊಳೆದ ಚಿಕನ್, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬೇಯುವ ತನಕ ಮುಚ್ಚಲ ಮುಚ್ಚಿ ಬೇಯಿಸಿ. (ನೀರು ಹಾಕಬೇಡಿ)
 5. ಈಗ ಅದಕ್ಕೆ ಗಟ್ಟಿ ಮೊಸರು, ಕಸೂರಿ ಮೇತಿ, ರುಬ್ಬಿದ ಕೊತ್ತಂಬರಿ, ಪುದೀನಾ, ಮೆಣಸಿನಕಾಯಿ ಮಿಶ್ರಣ ಸೇರಿಸಿ, ನೀರು ಸೇರಿಸಿ ಬೇಯಿಸಿ.
 6. 2 ನಿಮಿಷ ಬೆಂದ ನಂತರ ಗರಂ ಮಸಾಲ, ಜೀರಾ ಪುಡಿ, ಚಿಲ್ಲಿ ಪೌಡರ್, ದನಿಯಾಪುಡಿ ಸೇರಿಸಿ ನೀರು ಬೇಕಿದ್ದಲ್ಲಿ ಸೇರಿಸಿ ಮುಚ್ಚಲ ಮುಚ್ಚಿ ಬೇಯಿಸಿ. (ರುಚಿ ಕಡಿಮೆ ಇದ್ದರೆ ಟೇಸ್ಟ್ ನೋಡಿ ಸ್ವಲ್ಪ ಹಾಕಿಕೊಳ್ಳಿ)
 7. ಪ್ಯಾನ್ ಬದಿಯಲ್ಲಿ ಎಣ್ಣೆ ಬಿಟ್ಟುಕೊಂಡ ನಂತ್ರ ಒಮ್ಮೆ ತಿರುಗಿಸಿ ಕೆಳಗಿಳಿಸಿ.
 8. ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಮೇಲೆ ಉದುರಿಸಿ ಸರ್ವ್ ಮಾಡಿ.