ಚಿಕನ್ ಪ್ರಿಯರಿಗೆ ಇಷ್ಟವಾದ ಚಿಕನ್ ಸ್ಟಿಕ್ ಮಾಡುವ ವಿಧಾನ..

0
837

ಚಿಕನ್ ಖಾದ್ಯವು ಎಷ್ಟು ತಿಂದರು ಬೇಡವಾಗದ ರುಚಿಯಾಗಿದೆ ಆದರಿಂದಲೇ ಇದರಲ್ಲಿ ಪ್ರತಿದಿನವೂ ಹೊಸ ಹೊಸ ಖಾದ್ಯಗಳು ಹುಟ್ಟುತ್ತಿವೆ ಹಾಗೆಯೇ ಚಿಕನ್ ಪ್ರಿಯರ ಸಂಖ್ಯೆಯು ಹೆಚ್ಚುತ್ತಿದೆ. ಚಿಕನ್ ಅಡುಗೆಯಲ್ಲಿ ಒಂದು ವಿಶೇಷ ಅಂದ್ರೆ ಪ್ರತಿಯೊಂದು ಊರುಗಳಲ್ಲಿ ಒಂದಂದು ಹೆಸರಿನಲ್ಲಿ ಪ್ರತಿತಿಯನ್ನು ಪಡೆದಿದೇ ಆದರಿಂದಲೇ ಚಿಕನ್ ಪ್ರಿಯರು ಬೇರೊಂದು ಸ್ಥಳಕ್ಕೆ ಹೋದಾಗ ಮೊದಲು ನೆನಪು ಮಾಡುವುದು ಅಲ್ಲಿನ ಚಿಕನ್ ರುಚಿಯನ್ನು. ಹಾಗೆಯೇ ಈ ಖಾದ್ಯದಲ್ಲಿ ಹೆಚ್ಚು ಹೆಚ್ಚು ರುಚಿಯನ್ನು ಹೊಂದಿರುವ ಮತ್ತು ಸರಳವಾದ ಖಾದ್ಯಗಳಲ್ಲಿ ಚಿಕನ್ ಚಿಕನ್ ಸ್ಟಿಕ್ ಕೂಡ ಒಂದಾಗಿದೆ ಇದು ಸರಳ ಸುಲಭವಾದ ಚಿಕನ್ ಪದಾರ್ಥವಾಗಿದೆ ಹಾಗಾದ್ರೆ ಈ ಚಿಕನ್ ಸ್ಟಿಕ್ ತಯಾರಿಸುವ ಸರಳ ವಿಧಾನ ಇಲ್ಲಿದೆ ನೋಡಿ.


Also read: ರುಚಿ ರುಚಿಯಾದ ಪನ್ನೀರ್- ಚಿಕನ್ ಗ್ರೇವಿ ಮಾಡುವ ವಿಧಾನ..!!

ಬೇಕಾಗುವ ಪದಾರ್ಥಗಳು:

 • ಅರ್ಧ ಕೇಜಿ ಮೂಳೆ ತೆಗೆದ ಚಿಕನ್ (ಉದ್ದಕ್ಕೆ ಸೀಳಿದ್ದು)
 • ಒಂದು ಚಮಚ ಗರಂ ಮಸಾಲೆ ಪುಡಿ
 • ಒಂದು ಕಪ್ ತಾಜಾ ಕ್ರೀಂ
 • 5 ರಿಂದ 6 ಹಸಿಮೆಣಸಿನ ಕಾಯಿ
 • 1/2 ಬೆಳ್ಳುಳ್ಳಿಯ ಪೇಸ್ಟ್
 • ಒಂದು ಕಪ್ ಜೋಳದಹಿಟ್ಟು


Also read: ಚಿಕನ್ ಲಾಲಿಪಪ್ ಮಂಚೂರಿಯನ್ ಮಾಡುವ ವಿಧಾನ..!!

 • ಸ್ವಲ್ಪ ಇಂಗು
 • 1/2 ಚಿಕ್ಕ ಚಮಚ ಜೀರಿಗೆ ಪುಡಿ
 • 1/2 ಚಿಕ್ಕ ಚಮಚ ಕೊತ್ತಂಬರಿ ಪುಡಿ
 • ಒಂದು ಚಮಚ ಕೆಂಪು ಮೆಣಸಿನ ಪುಡಿ
 • 1/2 ಚಿಕ್ಕ ಚಮಚ ಲಿಂಬೆರಸ
 • ಒಂದು ಕಪ್ ಬ್ರೆಡ್ ಪುಡಿ (bread crumbs)
 • ರುಚಿಗೆ ತಕ್ಕಷ್ಟು ಉಪ್ಪು
 • ಕರೆಯಲು ಬೇಕಾಗುವಷ್ಟು ಎಣ್ಣೆ

ತಯಾರಿಸುವ ವಿಧಾನ:


Also read: ಗೋಬಿ ಮಂಚೂರಿಕ್ಕಿಂತ ರುಚಿಯಾಗಿರೂ; ಚಿಕನ್ ಮಂಚೂರಿ ಮಾಡುವ ವಿಧಾನ..!!

 • ಒಂದು ಪಾತ್ರೆಯಲ್ಲಿ ಜೀರಿಗೆ ಪುಡಿ, ಧನಿಯ ಪುಡಿ, ಕೆಂಪು ಮೆಣಸಿನ ಪುಡಿ, ಬೆಳ್ಳುಳ್ಳಿ ಪೇಸ್ಟ್ ಮತ್ತು ಜೋಳದಹಿಟ್ಟನ್ನು ಸೇರಿಸಿ ಮಿಶ್ರಣ ಮಾಡಿ.
 • ಈ ಮಿಶ್ರಣಕ್ಕೆ ಕೋಳಿಮಾಂಸದ ತುಂಡುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
 • ನಂತರ ಈ ಮಿಶ್ರಣಕ್ಕೆ ಹಸಿಮೆಣಸು ಮತ್ತು ಲಿಂಬೆರಸ ಸೇರಿಸಿ ಬೆರೆಸಿ. ಬಳಿಕ ಕ್ರೀಂ ಅನ್ನು ಪ್ರತಿ ತುಂಡಿಗೂ ನಯವಾಗಿ ಸವರಿ.
 • ತದನಂತರ ಒಂದು ದಪ್ಪತಳದ ಬಾಣಲೆಯಲ್ಲಿ ಮಧ್ಯಮ ಉರಿಯಲ್ಲಿಟ್ಟು ಹುರಿಯಲು ಅಗತ್ಯವಿದ್ದಷ್ಟು ಎಣ್ಣೆ ಹಾಕಿ ಬಿಸಿಯಾದ ಬಳಿಕ ಕೋಳಿಯ ತುಂಡುಗಳನ್ನು ಒಂದು ತಟ್ಟೆಯಲ್ಲಿ ಹರಡಿರುವ ಬ್ರೆಡ್ ಪುಡಿಯ ಮೇಲೆ ಹೊರಳಾಡಿಸಿ. ಎಲ್ಲಾ ಕಡೆ ಸಮನಾಗಿ ಮತ್ತು ದಪ್ಪನಾಗಿ ಅಂಟಿಕೊಳ್ಳುವಂತೆ ಮಾಡಿ ಬಳಿಕ ಬಾಣಲೆಯಲ್ಲಿ ಹಾಕಿ ಕರಿಯರಿ.
 • ನಂತರ ಒಂದದಾಗಿ ಎಣ್ಣೆಯಲ್ಲಿ ಕರೆದು ಹೊರತೆಗೆದ ಬಳಿಕ ದಪ್ಪನೆಯ ಕಿಚನ್ ಟವೆಲ್ ಪೇಪರ್ ಮೇಲೆ ಹರಡಿ ಎಣ್ಣೆ ಹೀರಿಕೊಳ್ಳುವಂತೆ ಮಾಡಿ.
 • ಚಿಕನ್ ಸ್ಟಿಕ್ ಬಿಸಿಯಿದ್ದಂತೆಯೇ ಬಡಿಸಿ. ಗರಿಗರಿಯಾಗಿರುವ ಈ ಕಡ್ಡಿಗಳನ್ನು ಟೊಮಾಟೋ ಸಾಸ್ ಚಿಲ್ಲಿ ಸಾಸ್ ಜೊತೆಯೂ ಸೇವಿಸಿ ತುಂಬಾನೇ ರುಚಿ ಇರುತ್ತದೆ.