15 ನಿಮಿಷದಲ್ಲಿ ಗರಿ ಗರಿಯಾದ ಕರಿದ ಚಿಕನ್ ಖಾದ್ಯ ರೆಡಿ ಆಗುತ್ತೆ…!!

0
2282

ನಮಗೆಲ್ಲಾ ಕರಿದ ಚಿಕನ್ ಎಂದರೆ ತುಂಬಾ ಇಷ್ಟ. ಆದರೆ ಈ ಕರಿದ ಚಿಕನ್ ಅನ್ನು 15 ನಿಮಿಷದಲ್ಲಿ ನೀವು ತಯಾರಿಸಿದ್ದೀರಾ? ನಾವು ಇಲ್ಲಿ ನೀಡಿರುವ ಕರಿದ ಚಿಕನ್ ವೀಡಿಯೋ, ನಿಮಗೆ ಕೆಲವೇ ನಿಮಿಷದಲ್ಲಿ ಸಿದ್ಧಪಡಿಸಬಹುದಾದ ಕರಿದ ಚಿಕನ್ ಅನ್ನು ತಯಾರು ಮಾಡಲು ಸಹಾಯ ಮಾಡುವುದು ಖಂಡಿತ. ಹಾಗಾಗಿ ನಿಮಗೆ ಇದನ್ನು ತಯಾರಿಸಲು ಬೇಕಾಗಿರುವುದು ಸರಿಯಾದ ಸಾಮಾಗ್ರಿಗಳು ಮತ್ತು ವೇಳೆಯಾಗಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ರುಚಿ ರುಚಿಯಾದ ನೂಡಲ್ಸ್ ಕಟ್ಲೇಟ್ ಖಾದ್ಯ

ಕೆಲವೊಮ್ಮೆ ದಿಢೀರ್ ಎಂದು ಪ್ರತ್ಯಕ್ಷವಾಗುವ ಅತಿಥಿಗಳನ್ನು ಉಪಚರಿಸಲು ಈ ಕರಿದ ಚಿಕನ್ ನಿಮಗೆ ಸಹಾಯ ಮಾಡುತ್ತದೆ. ಸರಳ ಮತ್ತು ರುಚಿಕರವಾದ ಸಾಮಾಗ್ರಿಗಳಿಂದ ತಯಾರಿಸಬಹುದಾದ ಈ ಚಿಕನ್ ಅನ್ನು ಹದವಾಗಿ ಹುರಿದು (ಕರಿದು) ಮಸಾಲೆಗಳನ್ನು ಸೇರಿಸಿ ಇನ್ನಷ್ಟು ರುಚಿಕರವನ್ನಾಗಿ ತಯಾರಿಸಬಹುದಾಗಿದೆ. ನಿಮ್ಮ ಮಕ್ಕಳಂತೂ ಈ ಗರಿ ಗರಿ ಹುರಿದ ಚಿಕನ್ ಅನ್ನು ತಿನ್ನಲು ನಿಮ್ಮನ್ನು ಪೀಡಿಸುವುದು ಖಂಡಿತ. ಹಾಗಿದ್ದರೆ ಮತ್ತೇಕೆ ತಡ ಈ ರುಚಿಯಾದ ಚಿಕನ್ ಅನ್ನು ತಯಾರಿಸುವ ವಿಧಾನವನ್ನು ಬರೆದುಕೊಳ್ಳಿ ಮತ್ತು ಸಿದ್ಧಪಡಿಸಲು ತಯಾರಾಗಿ.

ಸಾಮಾಗ್ರಿಗಳು

1. ಎಲುಬು (ಬೋನ್) ಇಲ್ಲದ ಚಿಕನ್ – 250 ಗ್ರಾಮ್‌ಗಳು
2. ಶುಂಠಿ ಪೇಸ್ಟ್ – 1 ಚಮಚ
3. ಬೆಳ್ಳುಳ್ಳಿ ಪೇಸ್ಟ್ – 1 ಚಮಚ
4. ಹಸಿಮೆಣಸಿನ ಪೇಸ್ಟ್ – 1/2 ಚಮಚ
5. ಅರಶಿನ ಹುಡಿ – 1/2 ಚಮಚ
6. ಜೀರಿಗೆ ಹುಡಿ – 1 ಚಮಚ
7. ಕೊತ್ತಂಬರಿ ಹುಡಿ – 1 ಚಮಚ
8. ಗರಮ್ ಮಸಾಲಾ – 1 ಚಮಚ
9. ಉಪ್ಪು – ರುಚಿಗೆ ತಕ್ಕಷ್ಟು
10. ವಿನೇಗರ್ – 1 ಚಮಚ
11. ಮೊಟ್ಟೆ – 1
12. ಮೈದಾ – 1 ಕಪ್
13.ಎಣ್ಣೆ – 2 ಕಪ್‌ಗಳು

ಮಾಡುವ ವಿಧಾನ:

  • ಶುಂಠಿ, ಬೆಳ್ಳುಳ್ಳಿ ಮತ್ತು ಹಸಿಮೆಣಸಿನ ಪೇಸ್ಟ್‌ನೊಂದಿಗೆ ಚಿಕನ್ ಅನ್ನು ಮುಳುಗಿಸಿ
  • ಹುಡಿಮಾಡಿದ ಸಾಂಬಾರು ಪದಾರ್ಥಗಳನ್ನು ಒಂದರ ಮೇಲೊಂದರಂತೆ ಜೀರಿಗೆ, ಅರಶಿನ, ಗರಮ್ ಮಸಾಲಾ ಮತ್ತು ಉಪ್ಪನ್ನು ಸೇರಿಸಿಕೊಳ್ಳಿ.
  • ಚಿಕನ್‌ಗೆ 1 ಚಮಚದಷ್ಟು ವಿನೇಗರ್ ಅನ್ನು ಹಾಕಿ. ನಿಮ್ಮ ಕೈಗಳಿಂದ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
  • ತದನಂತರ 2 ಗಂಟೆಗಳಷ್ಟು ಕಾಲ ಚಿಕನ್ ಅನ್ನು ಮುಳುಗಿಸಿಡಿ.
  • ಚಿಕನ್ ಸಂಪೂರ್ಣವಾಗಿ ನೆನೆದ ನಂತರ, ಇದಕ್ಕೆ ಒಂದು ಮೊಟ್ಟೆಯನ್ನು ಒಡೆದು ಹಾಕಿ. ಸ್ವಲ್ಪ ಮೈದಾವನ್ನು ಚಿಕನ್ ತುಂಡುಗಳ ಮೇಲೆ ಹಾಕಿ ಮತ್ತು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
  • ಈಗ ದಪ್ಪ ತಳದ ಪಾತ್ರೆಗೆ ಎಣ್ಣೆಯನ್ನು ಹಾಕಿ ಮತ್ತು ಇದು ಬಿಸಿಯಾಗಲು ಬಿಡಿ. ಒಂದರ ಹಿಂದೆ ಮತ್ತೊಂದರಂತೆ ಚಿಕನ್ ತುಂಡುಗಳನ್ನು ಎಣ್ಣೆಗೆ ಹಾಕಿ ಮತ್ತು ಚಿಕನ್ ತುಂಡುಗಳು ಚೆನ್ನಾಗಿ ಕಂದು ಬಣ್ಣಕ್ಕೆ ಬರುವವರೆಗೆ ಎರಡೂ ಬದಿಗಳನ್ನು ಹುರಿಯಿರಿ.
  • ಇನ್ನು ಕರಿದ ಚಿಕನ್ ಅನ್ನು ಟಿಶ್ಯೂವಿನಲ್ಲಿ ಹಾಕಿಡಿ.
  • ಟೊಮೇಟೊ ಕೆಚಪ್‌ನೊಂದಿಗೆ ಈ ಕರಿದ ಚಿಕನ್ ತುಂಡುಗಳನ್ನು ಸವಿಯಲು ನೀಡಿ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522