ಬೇಸಿಗೆಯ ಬಿಸಿಲಿನ ದಾಹಕ್ಕೆ ನೀರು ಆಹಾರವಿಲ್ಲದೆ ನರಳಾಡುತ್ತಿರುವ ಮೂಕ ಪ್ರಾಣಿಗಳ ವೇದನೆಗೆ; ಗುಡಿಬಂಡೆ ಜನತೆ ಮಾಡುವ ಕೆಲಸ ದೇಶಕ್ಕೆ ಮಾದರಿಯಾಗಿದೆ.

0
702

ಬೇಸಿಗೆ ಕಾಲದಲ್ಲಿ ಕಾಡುಪ್ರಾಣಿಗಳ ವೇದನೆ ಮುಗಿಲು ಮುಟ್ಟಿರುತ್ತದೆ. ಏಕೆಂದರೆ ನಾಡಿನಲ್ಲೇ ಸರಿಯಾಗಿ ಕುಡಿಯಲು ನೀರಿಲ್ಲದ ಪರಿಸ್ಥಿತಿ ಇರುವ ಕಾರಣ ಕಾಡುಪ್ರಾಣಿಗಳ ಗತಿ ಹೇಳಲು ಅಸಾದ್ಯವಾಗಿರುತ್ತದೆ. ಇದರಲ್ಲಿ ಕೆಲವೊಂದು ಗಡಿ ನಾಡುಗಳಲ್ಲಿ ಅಂತು ಭೀಕರ ಪರಿಸ್ಥಿತಿ ಇರುತ್ತೆ. ಅಂತಹ ಕೆಲವು ಪ್ರದೇಶಗಳಲ್ಲಿ ಕರ್ನಾಟಕದ ಕೆಲವು ಪ್ರದೇಶಗಳಿವೆ ಅಲ್ಲಿ ಪ್ರತಿ ಬೇಸಿಗೆಯಲ್ಲಿ ಅಪಾರ ಪ್ರಮಾಣದ ಪ್ರಾಣಿಗಳು ಮೃತ ಪಡುತ್ತಿವೆ. ಅಂತಹ ಪ್ರದೇಶಗಳಲ್ಲಿ ಚಿಕ್ಕಬಳ್ಳಾಪುರದ ಸುತ್ತ ಮುತ್ತಲು ಹೆಚ್ಚಿನ ಪ್ರದೇಶ ಬರಿದಾಗಿರುವುದು ಗೊತ್ತೇ ಇದೆ.

@publictv.in

Also read: ಲಕ್ಷಾಂತರ ಹಣ ಕರ್ಚು ಮಾಡಿ ಮದುವೆ ಮಾಡೋ ಕಾಲದಲ್ಲಿ ಬಿಜೆಪಿ ಶಾಸಕರೊಬ್ಬರು ಸಾಮೂಹಿಕ ಲಗ್ನದಲ್ಲಿ ಮಗನ ಮದುವೆ ಮಾಡಿ ಮಾದರಿಯಾದರ??

ಈ ಸ್ಥಳದಲ್ಲಿ ತೀವ್ರ ಬರ ಬಂದು ನಾಡಿನಲ್ಲಿರುವ ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಕಾಡಿನಲ್ಲಿರುವ ಪ್ರಾಣಿಗಳಿಗೆ ಎಲ್ಲಿ ನೀರು ಸಿಗುವುದೇ ಇಲ್ಲ. ಇನ್ನೂ ನೀರೇ ಇಲ್ಲದ ಮೇಲೆ ಆಹಾರ ಸಿಗುವುದಂತೂ ಕಷ್ಟಸಾಧ್ಯ. ಈ ಪರಿಸ್ಥಿತಿಗೆ ಯಾರು ಹೇಗೆ ಸಹಾಯಕ್ಕೆ ಬರುವುದು ಆಗುವುದಿಲ್ಲ ಎನ್ನುವುದು ಎಲ್ಲರಿಗೂ ಅರಿವಿಗೆ ಇರುತ್ತದೆ. ಆದರೆ ಇಲ್ಲಿನ ಜನ ಮಾತ್ರ ಕೈ ಕಟ್ಟಿ ಕೂರದೆ ನಿತ್ಯವೂ ಕಾಡು ಪ್ರಾಣಿಗಳ ನರಳಾಟಕ್ಕೆ ಸಹಾಯ ಮಾಡುತ್ತಿದ್ದಾರೆ. ಅದೆಷ್ಟೋ ಜನರು ಇಲ್ಲಿನ ಕಾಡಿನಲ್ಲಿರುವ ಪ್ರಾಣಿಗಳ ಪರದಾಟ ಕಂಡು ಮರುಗಿ ಪಟ್ಟಣದ ಪ್ರಾಣಿಪ್ರಿಯರು ನಾಡಿನಿಂದ ದವಸ ದಾನ್ಯ, ಹಣ್ಣು ತರಕಾರಿ, ನೀರನ್ನು ತೆಗೆದುಕೊಂಡು ಹೋಗಿ ಕಾಡಿನಲ್ಲಿರುವ ಪ್ರಾಣಿ-ಪಕ್ಷಿಗಳಿಗೆ ಉಣಬಡಿಸುವುದರ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.

@publictv.in

Also read: ಸಂಶೋಧನೆ ವೇಳೆ ಅವಘಡ ಸಂಭವಿಸಿ ದೃಷ್ಟಿದೋಷಕ್ಕೀಡಾದ ಶಿಕ್ಷಕಿಯೊಬ್ಬರು ನೂರಾರು ಬುದ್ಧಿಮಾಂದ್ಯ ಮಕ್ಕಳಿಗೆ ದಾರಿದೀಪವಾದ ಕತೆ ಹೇಗೆ ಇದೆ ನೋಡಿ..

ಈ ಸ್ಥಳವು ಆಂಧ್ರ-ಕರ್ನಾಟಕ ಗಡಿನಾಡು ಗುಡಿಬಂಡೆ ಪಟ್ಟಣ, ಈ ಕಡೆ ಬಂದರೆ ಕರ್ನಾಟಕ, ಆ ಕಡೆ ಹೋದರೆ ಆಂಧ್ರ. ಎರಡೂ ರಾಜ್ಯಗಳ ಗಡಿಯಲ್ಲಿರುವ ಕಾಡಿನಲ್ಲಿ ಈ ಬಾರಿ ತೀವ್ರ ಬರ ಬಂದಿದೆ. ಎತ್ತ ಕಣ್ಣು ಹಾಯಿಸಿದ್ರೂ ಹಸಿರು ಮಾಯವಾಗಿದೆ. ಕಾಡಿನಲ್ಲಿರುವ ನವಿಲು, ಜಿಂಕೆ, ಕರಡಿ, ಮೊಲ, ಸಾರಂಗ ಸೇರಿದಂತೆ ಸರಿಸೃಪಗಳಿಗೆ ಕುಡಿಯಲು ನೀರೇ ಇಲ್ಲ. ನೀರಿಲ್ಲದೆ ಕಾಡು ಪ್ರಾಣಿಗಳು ನಾಡಿನತ್ತ ಹೆಜ್ಜೆ ಹಾಕುತ್ತಿವೆ. ಇದರಿಂದ ಎಚ್ಚೆತ್ತ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದ ಪ್ರಾಣಿಪ್ರಿಯರು ಪ್ರಾಣಿಗಳ ದಾಹಕ್ಕೆ ಮರುಗಿದ್ದು ಕೈಲಾದಷ್ಟು ಸಹಾಯ ಮಾಡಲು ಮುಂದಾಗಿದ್ದಾರೆ.

@publictv.in

Also read: ಜೀವನದಲ್ಲಿ ಪ್ರತಿಯೊಬ್ಬರೂ ಯಶಸ್ವಿಯಾಗಬೇಕೆಂಬ ಆಶಯ ಇದ್ದೇ ಇರುತ್ತೆ, ಇಲ್ಲಿ ಹೇಳಿರೋ ಚಾಣಕ್ಯ ನೀತಿ ಓದಿ ಪಾಲನೆ ಮಾಡಿ ಯಶಸ್ಸು ಸಿಕ್ಕೇ ಸಿಗುತ್ತೆ!!

ದಕ್ಷಿಣ ಉತ್ತರಕ್ಕೆ ಸುಂದರವಾದ ಐತಿಹಾಸಿಕ ಮಹತ್ವದ ಬೆಟ್ಟ ಸುರಸದ್ಮಗಿರಿ. ಇಲ್ಲಿ ನೀರನ್ನು ಸಂಗ್ರಹಮಾಡಲು 19 ಕೊಳಗಳನ್ನು ನಿರ್ಮಿಸಿದ್ದಾರೆ. ಇಲ್ಲಿ ಕೋಟೆ-ಕೊತ್ತಲಗಳ ಜೊತೆಗೆ,ಸಿಪಾಯಿಗಳ ವಾಸದ ತಾಣಗಳು, ಶ್ರೀರಾಮ ದೋಣಿ, ಸೀತಾದೋಣಿ, ಲಕ್ಷ್ಮಣ ದೋಣಿ, ಉಪದೋಣಿ, ಆಂಜನೇಯನ ದೋಣಿ, ಉಪದೋಣಿ, ಸಿಹಿನೀರಿನ ದೋಣಿ, ಉಪ್ಪಿನ ದೋಣಿಗಳಿವೆ. ಬೆಟ್ಟ ಹತ್ತಲು ಸುಲಭ. ರಾಮದೋಣಿಯ ನೀರು ಪವಿತ್ರ ತೀರ್ಥ. ಇಲ್ಲಿ ಸ್ನಾನಮಾಡಿದರೆ ಯಾವುದೇ ರೋಗರುಜಿನಗಳಿಲ್ಲ. ನಿವಾರಣೆ ಯಾಗುತ್ತದೆಂಬ ನಂಬಿಕೆಯಿದೆ. ಆಷಾಢಮಾಸದಲ್ಲಿ ವಿಶೇಷವಾಗಿ ಕುಂಬಾಭಿಷೇಕ ನಡೆಯುತ್ತದೆ. ಆದರೂ ಬೇಸಿಗೆಯಲ್ಲಿ ಈ ಪ್ರದೇಶದಲ್ಲಿ ನೀರಿನ ಅಭಾವ ಹೆಚ್ಚಿರುತ್ತದೆ.
ಇದೆಲ್ಲ ತಿಳಿದ ಸುತ್ತಮುತ್ತಲಿನ ಜನರು ಮತ್ತು ಗುಡಿಬಂಡೆಯ ಕೆಲವು ಯುವಕರು ಸ್ವಯಂಸೇವಾ ಸಂಘಗಳ ಸಹಾಯದೊಂದಿಗೆ ಅರಣ್ಯದ ಜೀವ ಸಂಕುಲದ ರಕ್ಷಣೆಗೆ ಮುಂದಾಗಿದ್ದಾರೆ. ಜೋಳ, ಅಕ್ಕಿ, ನವಣೆ, ರಾಗಿ, ಸಜ್ಜೆ, ಸೇರಿದಂತೆ ದವಸ ಧಾನ್ಯಗಳನ್ನು ಮಿಕ್ಸ್ ಮಾಡಿ, ಹಣ್ಣು ತರಕಾರಿಗಳನ್ನು ತೆಗೆದುಕೊಂಡು ಹೋಗಿ ಕಾಡಿನ ಆಯಕಟ್ಟಿನ ಜಾಗಗಳಲ್ಲಿ ಇಡುತ್ತಿದ್ದಾರೆ. ದಾನಿಗಳಿಂದ ಸಿಮೆಂಟ್ ತೊಟ್ಟಿಗಳನ್ನು ಸಂಗ್ರಹಿಸಿ ಅದರಲ್ಲಿ ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ. ಈ ಅಳಿಲು ಸೇವೆಗೆ ಅದೆಷ್ಟೋ ಪ್ರಾಣಿಗಳು ತಮ್ಮ ಜೀವವನ್ನು ಉಳಿಸಿಕೊಳ್ಳುತ್ತಿವೆ. ಈ ಪುಣ್ಯದ ಕೆಲಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.