ಚಿಕ್ಕಮಗಳೂರು SP ಅಣ್ಣಮಲೈ ಪ್ರವಾಸಿಗರ ಕಾರ್ ಕೆಟ್ಟಾಗ ಸ್ವತಃ ಅವರೇ ಸ್ಪಾಯ್ನರ್ ಹಿಡಿದು ಸಹಾಯ ಮಾಡೋದ್ರ ಬಗ್ಗೆ ಓದಿ, ಎಲ್ಲ ಸರ್ಕಾರಿ ಅಧಿಕಾರಿಗಳು ಇವರಂತೆಯೇ ಇರಬೇಕು ಅಂತ ಅನ್ನಿಸುತ್ತೆ.

0
472

ಆಪತ್ಕಾಲದಲ್ಲಿ ನಮ್ಮವರೇ ನಮ್ಮ ಸಹಾಯಕ್ಕೆ ಬರುವುದಿಲ್ಲ, ಅದರಲ್ಲಿ ಹೆಚ್ಚಾಗಿ ಆಕ್ಸಿಡೆಂಟ್ ಮತ್ತು ರಾತ್ರಿ ವೇಳೆ ಗಾಡಿ ಕೆಟ್ಟರೆ ಅಥವಾ ಪೆಟ್ರೋಲ್ ಮುಗಿದು ಹೋದರಂತು ಅವರನ್ನು ದೇವರೆ ಕಾಯಬೇಕು. ಇಂತಹುದೇ ಒಂದು ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಅವರಿಗೆ ಆಪತ್ಭಾಂದವನಂತೆ ಬಂದು ನೆರವಾಗಿದ್ದಾರೆ ಈ ವ್ಯಕ್ತಿ, ಯಾರವರು ನೀವೇ ನೋಡಿ.

ಬೆಂಗಳೂರಿನಿಂದ ಪ್ರವಾಸಿಗರು ಕಾರಿನಲ್ಲಿ ಭಾನುವಾರ ರಾತ್ರಿ ಚಿಕ್ಕಮಗಳೂರು-ಶೃಂಗೇರಿ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದರು, ಆದರೆ ಮತ್ತಾವರ ಗ್ರಾಮದ ಬಳಿ ಕಾರು ಪಂಚರ್ ಆಗಿ ನಿಂತಿತ್ತು. ರಸ್ತೆಯ ಎರಡು ಬದಿ ಎಲ್ಲಿ ನೋಡಿದರು ಮರಗಳು ಇದರಿಂದ ಭಯದ ವಾತಾವರಣದಲ್ಲಿದ್ದ ಇವರಿಗೆ ಕೊಪ್ಪದಿಂದ ಚಿಕ್ಕಮಗಳೂರಿಗೆ ಆಗಮಿಸುತ್ತಿದ್ದ ಎಸ್‍ಪಿ ಅಣ್ಣಾಮಲೈ ಆಪತ್ಭಾಂದವನಂತೆ ಬಂದು ನೆರವಾಗಿದ್ದಾರೆ.

ಎಸ್‍ಪಿ ಅಣ್ಣಾಮಲೈ ಸ್ವತಃ ಸ್ಪ್ಯಾನರ್ ಹಿಡಿದು ಪಂಚರ್ ಆದ ಕಾರಿನ ಗಾಲಿಯನ್ನು ತೆಗೆಯಲು ಮುಂದಾಗಿ, ತೆಗೆಯುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ಅದು ಜಾಮ್ ಆದ ಕಾರಣ ಬಿಚ್ಚಲು ಸಾಧ್ಯವಾಗಲಿಲ್ಲ ಆಗ ಮೆಕಾನಿಕ್‍ಗೆ ಫೋನ್ ಮಾಡಿ ಬರುವಂತೆ ತಿಳಿಸಿ, ತಮ್ಮ ವಾಹನದಲ್ಲಿಯೇ ಆ ಪ್ರವಾಸಿಗರನ್ನು ನಗರದ ತನಕ ಡ್ರಾಪ್ ನೀಡಿದ್ದಾರೆ.

ಒಬ್ಬ ದೊಡ್ಡ ಮಟ್ಟದ ಅಧಿಕಾರಿ ಸ್ವತಃ ಕಾರಿನ ಗಾಲಿ ಬಿಚ್ಚಲು ನೆರವಾಗಿದ್ದನ್ನು ಕಂಡು ಕಾರಿನ ಮಾಲೀಕರು ಅಚ್ಚರಿ ಹಾಗು ಎಲ್ಲಿಲ್ಲದ ಸಂತೋಷವಾಗಿದೆ. ಎಸ್‍ಪಿ ಅಣ್ಣಾಮಲೈ ಅವರಿಗೆ ಜನರ ಮೇಲಿರುವ ಕಾಳಜಿ, ಸಮಯ ಪ್ರಜ್ಞೆ ಹಾಗು ಕರ್ತವ್ಯ ನಿಷ್ಠೆಗೆ ಅವರು ತುಂಬು ಹೃದಯದ ಧನ್ಯವಾದಗಳನ್ನು ಹೇಳಿದ್ದಾರೆ.