ಚಿಕ್ಕಮಗಳೂರು ಎಸ್.ಪಿ. ಅಣ್ಣಾ ಮಲೈ ಅವರ ತಂಡದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆ ಅಂತ ನೋಡಿ, ಅದಕ್ಕೆ ಅವರನ್ನು ಕಂಡರೆ ಎಲ್ಲರಿಗೂ ಪ್ರೀತಿ..

0
606

ಏಕಕಾಲದಲ್ಲಿ ಸಾವಿರಾರು ಮಂದಿ ನುಗ್ಗಿದ್ರೆ ಹತ್ತಾರು ಪೊಲೀಸರು ಏನು ಮಾಡಬೇಕು. ನಮ್ಮ ಪೊಲೀಸರಿಗೆ ಏನಾದರು ಆದರೆ ಅವರ ಮನೆಯವರಿಗೆ ಯಾರು ಉತ್ತರ ಕೊಡೋದು, ನನಗೆ ನನ್ನ ಪೊಲೀಸರೇ ಮೊದಲ ಆಧ್ಯತೆ ಎನ್ನುತ್ತಾ, ನನ್ನ ಪ್ರಕಾರ ಈ ಪೊಲೀಸ್‌ ಬಂದೋಬಸ್ತ್ 99 ರಷ್ಟು ಸರಿಯಾಗಿತ್ತು ಎನ್ನುವ ಮೂಲಕ ಸಭೆಯಲ್ಲಿದ್ದವರನ್ನು ನಿಬ್ಬೆರಗಾಗುವಂತೆ ಮಾಡಿ ಅವರ ಬಾಯಿ ಮುಚ್ಚಿಸಿದರು, ಖಡಕ್ ಎಸ್ ಪಿ ಅಂತಾನೆ ಖ್ಯಾತಿ ಪಡೆದಿರೋ ಅಣ್ಣಾಮಲೈ ಅವರು.

ದತ್ತಜಯಂತಿ ಆಚರಣೆ ಬಳಿಕ ಕರೆದಿದ್ದ ಸಭೆಯಲ್ಲಿ ಎಸ್ಪಿ ಅಣ್ಣಾಮಲೈ ಗೋರಿಗಳ ಧ್ವಂಸಕ್ಕೆ ಪೊಲೀಸರ ವೈಫಲ್ಯವೇ ಕಾರಣ, ಇಲಾಖೆಯೇ ಇದಕ್ಕೆ ಹೊಣೆ ಎಂಬ ಆರೋಪಕ್ಕೆ ಈ ರೀತಿ ಉತ್ತರಿಸಿದ್ದಾರೆ.

ಗೋರಿಗಳ ಧ್ವಂಸಕ್ಕೆ ಪೊಲೀಸರ ವೈಫಲ್ಯವೇ ಕಾರಣ ಎಂಬ ಆರೋಪಕ್ಕೆ ಅಣ್ಣಾಮಲೈ, ಗೋರಿಗಳು ಎಷ್ಟು ಮುಖ್ಯವೋ ನನಗೆ ನನ್ನ ಪೊಲೀಸರು ಅಷ್ಟೆ ಮುಖ್ಯ. ನನ್ನ ಪೊಲೀಸರಿಗೆ ಏನಾದರೂ ಆದರೆ ಯಾರು ಜವಾಬ್ದಾರಿ. ಅವರ ಮನೆಯವರಿಗೆ ಏನೆಂದು ಉತ್ತರ ಹೇಳುವುದು. ನನ್ನ ಪ್ರಕಾರ ಪೊಲೀಸ್ ಬಂದೋಬಸ್ತ್ ಶೇಕಡ 99 ರಷ್ಟು ಸರಿಯಾಗಿಯೇ ಇತ್ತು, ಇನ್ನು ತಪ್ಪು ಯಾರಿಂದ ಆಗಲ್ಲ ಹೇಳಿ ನಿಮ್ಮ ಮನೆಯಲ್ಲಿ ನೀವು 100 ಕ್ಕೆ 100 ರಷ್ಟು ಸರಿಯಾಗಿ ಕೆಲಸ ಮಾಡ್ತೀರಾ ಅಂತ ಅವರನ್ನೇ ಪ್ರಶ್ನಿಸಿದರು.

ಯಾವಾಗ ಎಸ್ ಪಿ ಅವರು ಸಿಬ್ಬಂದಿಯ ಕುರಿತು ಇಷ್ಟು ಕಾಳಜಿಯ ಮಾತನಾಡಿದರೋ, ಪೊಲೀಸರು ಕೂಡ ಇವರ ಮಾತಿಗೆ ತುಂಬಾ ಖುಷಿಯಾಗಿ ಇಂತಹ ಎಸ್ ಪಿ ಸಿಗೋದು ತೀರಾ ವಿರಳ, ಇವರನ್ನು ನಾವು ಎಂದು ಮರೆಯುವುದಿಲ್ಲ ಎಂದರು.