ಎನರ್ಜಿಯುತವಾದ ಚಿಕ್ಕು ಮಿಲ್ಕ ಶೇಕ್ ನಿಮ್ಮ ಆರೋಗ್ಯದಲ್ಲಿ ಪವಾಡವನ್ನೇ ಸೃಷ್ಟಿಸುವ ಸಾಮಥ್ರ್ಯ ಹೊಂದಿದೆ ಎಂದರೆ ನೀವು ನಂಬಲೇ ಬೇಕು..!!

0
1480

Kannada News | Recipe tips in Kannada

ವಿಶೇಷ ರುಚಿ ಮತ್ತು ಆರೋಗ್ಯಕ್ಕೆ ಸಾಕಷ್ಟು ಲಾಭ ತಂದು ಕೊಡುವ ಈ ಹಣ್ಣನ್ನು ಬೇರೆ ಬೇರೆ ಕಾರಣಗಳಿಗಾಗಿ ತಿನ್ನಲೇ ಬೇಕು. ತಾಜಾ ಹಣ್ಣು ಇಲ್ಲವೇ ಜ್ಯೂಸ್, ಮಿಲ್ಕ್ ಶೇಕ್ ರೂಪದಲ್ಲಿ ಇದನ್ನು ಸೇವಿಸಬಹುದು. ಅದರಲ್ಲೂ ಚಿಕ್ಕು ಮಿಲ್ಕ ಶೇಕ್ ಕಬ್ಬಿಣ ಸತ್ವ, ಕಾಲ್ಸಿಯಂ ಇತ್ಯಾದಿಗಳಿಂದ ಸಮೃದ್ಧವಾಗಿರುವುದರಿಂದ ಗರ್ಭಿಣಿ ಮತ್ತು ಬಾಣಂತಿಯರಿಗೆ ಉತ್ತಮ ಆಹಾರ.

ಚಿಕ್ಕು ಮಿಲ್ಕ ಶೇಕ್ ಮಾಡಲು ಬೇಕಾಗುವ ಸಾಮಗ್ರಿ :

  • ಚಿಕ್ಕುಹಣ್ಣು(ಸಪೋಟಾ)-2,
  • ಹಾಲು-2 ಕಪ್,
  • ಸಕ್ಕರೆ-1/2 ಕಪ್,
  • ಏಲಕ್ಕಿ ಪುಡಿ-1/2 ಟೀ ಚಮಚ,
  • ಲವಂಗದ ಪುಡಿ-1/2 ಟೀ ಚಮಚ.

ಮಾಡುವ ವಿಧಾನ:

ಚಿಕ್ಕುಹಣ್ಣಿನ ಸಿಪ್ಪೆ ಮತ್ತು ಬೀಜ ತೆಗೆದು, ಲವಂಗದ ಪುಡಿ, ಏಲಕ್ಕಿ ಪುಡಿ, ಸಕ್ಕರೆ ಸೇರಿಸಿ ನುಣ್ಣಗೆ ಅರೆದಿರಿಸಿ.ಅರೆದ ಮಿಶ್ರಣಕ್ಕೆ, ಹಾಲು ಬೆರೆಸಿ ಕಲಕಿದರೆ, ಚಿಕ್ಕುಹಣ್ಣಿನ ಸ್ವಾದಿಷ್ಟಭರಿತ ಮಿಲ್ಕ್ ಶೇಕ್ ಸವಿಯಲು ಸಿದ್ಧ.

Also Read: ಹೆಚ್ಚು ಖಾರವನ್ನು ತಿನ್ನಲು ಬಯಸುವವರು ಇಂದೇ ಟ್ರೈ ಮಾಡಿ ಬಟರ್ ಚಿಕನ್ ಮಸಾಲ….