ಮಕ್ಕಳಲ್ಲಿ ಕಾಡುವ ಖಿನ್ನತೆ ಎಂಬ ಮಹಾ ಮಾರಿಯ ಬಗ್ಗೆ ನಿಮಗೆಷ್ಟು ಗೊತ್ತು

0
3297

Kannada News | kannada Useful Information

ಇತ್ತೀಚಿನ ದಿನಗಳಲ್ಲಿ ಮಕ್ಕಳು ಖಿನ್ನತೆಗೆ ಹೋಗುವುದು ಹೆಚ್ಚಾಗಿದೆ..‌ ಕೆಲವು ಪೋಷಕರಿಗೆ ಇದು ತಿಳಿಯುತ್ತದೆ.. ಇನ್ನೂ ಕೆಲ ಪೋಷಕರಿಗೆ ತಿಳಿಯುವುದೇ ಇಲ್ಲಾ.. ಮಕ್ಕಳು ಹಾಗೇ ಖಿನ್ನತೆಯಲ್ಲೇ  ಬೆಳೆಯುತ್ತಾರೆ..

ನಮ್ಮ ಕಾಲದಲ್ಲೊ ಚೆನ್ನಾಗಿ ಆಟ.. ಊಟ.. ಅಪ್ಪನ ಹೊಡೆತಗಳು ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ಆದರೇ ಈಗಿನ ಮಕ್ಕಳು ಬಹಳ ಸೂಕ್ಷ್ಮ ಆಟದ ಕಥೆ ಬಿಡಿ.. ಊಟ ಕೂಡ ಅವರಿಷ್ಟದಂತೇ ಆಗಬೇಕು ಸ್ವಲ್ಪ ಹೆಚ್ಚು ಕಡಿಮೆಯಾದರೂ ನನಗೆ ಬೇಡ ಎಂದು ಮುನಿಸಿಕೊಂಡು ಬಿಡುತ್ತಾರೆ.. ಕೇವಲ ಊಟದ ವಿಷಯಕ್ಕೇ ಮನಸ್ಸಿಗೆ ನೋವು ಮಾಡಿಕೊಳ್ಳುವ ಇಂಥಹ ಮಕ್ಕಳಿಗೆ ಅಪ್ಪ ಅಮ್ಮ ಬೇಕೆಂದೆನಿಸಿದಾಗ ಸಿಗದಿದ್ದರೇ ಅವರ ಮನಸ್ಸಿನ ಮೇಲೆ ಬೀರುವ ಪರಿಣಾಮವನ್ನು ಒಮ್ಮೆ ಚಿಂತಿಸಿ ನೋಡಿ..

ಅಪ್ಪ ಅಮ್ಮ ಇಬ್ಬರೂ ದುಡಿಯುವ ಕಾಲವಿದು ಮಕ್ಕಳು ಸಂಜೆ ಶಾಲೆಯಿಂದ ಬಂದರೇ ಮನೆ ಬೀಗ ಹಾಕಿರುತ್ತದೆ.. ಅಮ್ಮ ಬರುವುದು 5 ಘಂಟೆ ಅಪ್ಪ ಬರುವುದು 6 ಘಂಟೆ.. ಕೆಲಸ ಮುಗಿಸಿ ಸುಸ್ತಾಗಿ ಬಂದ ಅಮ್ಮ ಅಡುಗೆ ಮಾಡಿ ಮಲಗಿದರೇ ಸಾಕು ಎನ್ನುವ ಮನಸ್ಥಿತಿಯಲ್ಲಿರುತ್ತಾರೆ.. ಕೆಲ ಕಾಲ ಫ್ರೆಂಡ್ಸ್ ಜೊತೆ ಕಳೆಯಬೇಕು ಎಂದು ಅಪ್ಪ ಚಿಂತಿಸುತ್ತಿರುತ್ತಾರೆ.. ಇದರ ಮಧ್ಯ ಬಡವಾಗುವುದು ಆ ಮಗು.. ಕ್ರಮೇಣ ಮಗುವಿನ ಮನಸ್ಸು ಹಾಳಾಗುತ್ತಾ ಬರುವುದು.. ಒಂಟಿತನ ಕಾಡುವುದು.. ಇನ್ನೂ ಕೆಲವು ಮಕ್ಕಳು ಕೆಟ್ಟ ಚಟುವಟಿಕೆಗಳಲ್ಲಿ ತೊಡಗುವುದೂ ಇದೆ.. ಆದರೆ ಬ್ಯುಸಿಯಾಗಿರುವ ಅಪ್ಪ ಅಮ್ಮನಿಗೆ ಇದು ತಿಳಿಯುವುದಿಲ್ಲ..

ಪೋಷಕರು ಕೆಲಸಕ್ಕೆ ಹೋಗಬಾರದು ಅಂದೇನಿಲ್ಲ.. ಆದರೆ ದಿನದ ಸ್ವಲ್ಪ ಸಮಯವನ್ನಾದರೂ ಮಕ್ಕಳಿಗೆ ಮೀಸಲಿಟ್ಟರೇ ಮಕ್ಕಳ ಮನಸ್ಸು ಹಾಳಾಗುವುದು ಕಡಿಮೆ..  ನೀವು ಅವರೊಂದಿಗಿದ್ದೀರಿ ಎಂಬ ಸಣ್ಣ ಬಲವೇ ಮಕ್ಕಳು ದೊಡ್ಡ ಸಾಧನೆ ಮಾಡಲೂ ಸಾಧ್ಯ.. ಸಂಜೆ ಮನೆಗೆ ಬಂದಾಗ ಶಾಲೆಯಲ್ಲಿ ಏನಾಯಿತು.. ನಿನ್ನ ಸ್ನೇಹಿತರು ಏನು ಮಾಡಿದರು.. ಇಷ್ಟು ಕೇಳಿದರೇ ಸಾಕು ಮಕ್ಕಳು ಖುಷಿ ಪಟ್ಟುಕೊಳ್ಳುತ್ತಾರೆ.. ನಮಗೆ ಇದು ಸಣ್ಣ ಸಿಲ್ಲಿ ವಿಷಯ ಎನಿಸಿದರು ಮಕ್ಕಳಿಗೇ ಇದು ತುಂಬಾ ಅಮೂಲ್ಯವಾದದ್ದು.. ಅವರೊಂದಿಗೆ ಕಳೆಯುವ ಸ್ವಲ್ಪ ಕಾಲ ಖುಷಿ ಖುಷಿಯಿಂದ ಇರಿ..ಇನ್ನೂ ಮುಖ್ಯವಾದ ಕಾರಣ  ಏನೆಂದರೇ.. ದಯಮಾಡಿ ಪೋಷಕರು ಮಕ್ಕಳ ಮುಂದೆ ಜಗಳವಾಡದಿರಿ.. ನಿಮ್ಮ ಜಗಳ ಮಕ್ಕಳ ಮನಸ್ಸಿನ ಮೇಲೆ ತುಂಬಾ ದೊಡ್ಡ ಪರಿಣಾಮ ‌ಬೀರುತ್ತದೆ.. ನಿಮ್ಮಲ್ಲಿ ಮನಸ್ಥಾಪಗಳಿದ್ದರೂ ಕೂಡ ಮಕ್ಕಳ ಮುಂದೆ ಸಂತೋಷದಿಂದಿರಿ.. ಇದು ಅವರ ಸಾಧನೆಗೆ ಅಡಿಗಲ್ಲಾಗಿರುತ್ತದೆ..

ಶುಭವಾಗಲಿ.. ಶೇರ್ ಮಾಡಿ ಇತರರಿಗೂ ಉಪಯೋಗವಾದರೂ ವಾದೀತು..

Also read: ನೀವು ಧಾರವಾಹಿ ನೋಡ್ತೀರಾ?? ನಿಮ್ಮ ಮನೆಯಲ್ಲೂ ನೋಡ್ತಾರಾ?? ಇದನ್ನು ಓದಿ ಶಾಕ್ ಆಗಬೇಡಿ..!!