ಟೀ ಮಾರುವ ಹಳ್ಳಿ ಮಕ್ಕಳ ಭರ್ಜರಿ ಇಂಗ್ಲಿಷ್….! ಅದು ಹೇಗೆ ಸಾಧ್ಯ ಅಂತ ನೀವೇ ನೋಡಿ…

0
873

ಸೂರ್ಯಾಸ್ತ ನೋಡಲು ಅತ್ಯಂತ ಹೆಸುರುವಾಸಿ ಪ್ರವಾಸಿ ತಾಣಗಳು ಕರ್ನಾಟಕದಲ್ಲಿ ಕೆಲವೇ ಕೆಲವು , ಅದರಲ್ಲೂ ಪಶ್ಚಿಮ ಘಟ್ಟದ ಆಗುಂಬೆಯಂತೂ ತುಂಬಾನೆ ಫೇಮಸ್ ಆದರೆ ಆಗುಂಬೆಯಲ್ಲಿ ಮಳೆಗಾಲ ಮತ್ತು ಚಳಿಗಾಲದಲ್ಲಿ ಸೂರ್ಯಾಸ್ತ ಕಾಣಿಸೋದು ತೀರಾ ವಿರಳ , ಹಾಗಾದ್ರೆ ನಾವು ಈಗ ಯಾವ ಸ್ಥಳದ ಬಗ್ಗೆ ಹೇಳ್ತ ಇದೀವಿ ಅಂತಾನಾ.

ಆ ಸ್ಥಳ ಇರೋದು ಉತ್ತರ ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿ , ಹೌದು ಕೊಪ್ಪಳ ಜಿಲ್ಲೆಯ ವಿರುಪಾಪುರ ಗಡ್ಡೆಯಲ್ಲಿ ಸೂರ್ಯ ಮುಳುಗೋದನ್ನ ನೋಡೋದೇ ಒಂದು ರೀತಿ ಖುಷಿಯ ವಿಚಾರ , ಇಲ್ಲಿ ನೀವು ವರ್ಷವಿಡೀ ಸೂರ್ಯ ಮುಳುಗೋ ರೋಮಾಂಚಕ ದೃಶ್ಯವನ್ನ ಕಣ್ತುಂಬಿಕೊಳ್ಳಬಹುದು.

ಈ ವಿರುಪಾಪುರ ಗಡ್ಡೆಯಲ್ಲಿ ಸೂರ್ಯ ಮುಳುಗೋದನ್ನ ನೋಡೋಕೆ ಅಂತಾನೆ ದೇಶ-ವಿದೇಶಗಳಿಂದ , ಅದರಲ್ಲೂ ಹೆಚ್ಚಾಗಿ ಜರ್ಮನಿ, ಇಟಲಿ, ಫ್ರಾನ್ಸ್, ಸ್ಪೇನ್ ದೇಶಗಳಿಂದ ಪ್ರವಾಸಿಗರು ಬರುತ್ತಾರೆ.

ಬಂದ ಪ್ರವಾಸಿಗರಿಗೆ ಟೀ, ಲೆಮನ್ ಟೀ, ಜ್ಯೂಸ್ ಮತ್ತು ನೀರಿನ ಬಾಟಲಿ ಮಾರಿ ಸಂಪಾದನೆ ಶುರು ಮಾಡಿದ್ದಾರೆ ವಿರುಪಾಪುರ ಗಡ್ಡೆಯ ಸುತ್ತಮುತ್ತಲಿನ ಗ್ರಾಮದ ಮಕ್ಕಳು , ಬಂದ ಪ್ರವಾಸಿಗರನ್ನ ಇಂಗ್ಲಿಷ್ನಲ್ಲಿಯೇ ಮಾತನಾಡಿಸುತ್ತಾ ತಮ್ಮ ಇಂಗ್ಲಿಷ್ ಭಾಷೆಯ ಜ್ಞಾನ ಹೆಚ್ಚಿಸಿಕೊಳ್ಳುದರ ಜೊತೆಗೆ ತಮ್ಮ ಸಂಪಾದನೆಯನ್ನು ಇತರರಿಗೂ ಮಾದರಿಯಾಗಿದ್ದಾರೆ.

ನಾವು ಬರೀ ಟೀ ಮಾರಾಟ ಮಾಡಲ್ಲ , ಬೆಳಗ್ಗಿನಿಂದ ಶಾಲೆಯಲ್ಲಿ ಪಾಠ ಕಲಿತು ಮನೆಗೆ ಬರುತ್ತೇವೆ , ಸಂಜೆ ಟೀ ಮಾರಾಟ ಮಾಡಿ ಮನೆಯವರಿಗೆ ಹಣಕಾಸಿಗೆ ನೆರವಾಗುತ್ತೇವೆ ಎಂದು ಟೀ ಮಾರುವ ವಿದ್ಯಾರ್ಥಿ ಹೇಳಿದ.

ಸುಮಾರು ೧೦ ರಿಂದ ೧೫ ಮಕ್ಕಳು ಹೀಗೆ ಟೀ ಮಾರುತ್ತಾ ತಮ್ಮ ಶಿಕ್ಷಣದ ಜೊತೆಗೆ ಬದುಕು ಕಟ್ಟಿಕೊಳ್ಳುವ ವ್ಯವಹಾರನೂ ಕಲಿಯುತ್ತಿದಾರೆ. ರಾಜ್ಯದ ಪ್ರವಾಸಿತಾಣಗಳಾದ ಹಂಪಿ, ಆನೆಗುಂದಿ ಇತ್ಯಾದಿ ಸುತ್ತಲಿನ ನಿಸರ್ಗ ಸಂಪತ್ತು ಕೇವಲ ಪ್ರವಾಸಿ ತಾಣವಾಗಿರದೆ ಬಡ ಮಕ್ಕಳಿಗೂ ದಾರಿ ದೀಪವಾಗುತ್ತಿವೆ.

 

ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಈ ಮಕ್ಕಳಿಗೆ ಸ್ವ ಉದ್ಯೋಗದ ಬಗ್ಗೆ ಕಲ್ಪನೆ ಬಂದಿರುವುದು ನಿಜ್ಜಕ್ಕೂ ಗ್ರೇಟ್ ಅಲ್ವಾ.