ಆಸ್ತಿಗಾಗಿ ತಂದೆ-ತಾಯಿಗೆ ಫೋರ್ಜರಿ ಮಾಡಿದ ಖತರ್ನಾಕ್ ಹೆಣ್ಣುಮಕ್ಕಳು; ಇಡೀ ಬದುಕನ್ನೇ ಮುಡಿಪಿಟ್ಟು ಸಾಕಿದವರು ಬೀದಿಗೆ.!

0
587

ಈಗಿನ ಕಾಲದಲ್ಲಿ ತಂದೆ-ತಾಯಿಗಳಿಗೆ ಗಂಡು ಮಕ್ಕಳು ಊಟ ಹಾಕಿ ಪೋಷಣೆ ಮಾಡುವುದು ಅತೀ ಕಡಿಮೆಯಾಗಿದ್ದು ಸಹಜವಾಗಿ ಕಂಡು ಬರುತ್ತಿದೆ. ಆದರೆ ಹೆಣ್ಣು ಮಕ್ಕಳೇ ತಂದೆ- ತಾಯಿಗಳಿಗೆ ಸಾಕುತ್ತಿರುವುದು ಕೂಡ ಕಂಡು ಬರುತ್ತಿದೆ. ಅದಕ್ಕಾಗಿ ಹೆಣ್ಣು ಮಕ್ಕಳು ಇರಲೇಬೇಕು ಎನ್ನುವುದು ಪ್ರತಿಯೊಬ್ಬರ ಅಭಿಪ್ರಾಯವಾದರೆ. ಬೆಂಗಳೂರಿನಲ್ಲಿ ಆಸ್ತಿಗಾಗಿ ತಂದೆ-ತಾಯಿಗಳಿಗೆ ಫೋರ್ಜರಿ ಮಾಡಿ ಅಸ್ತಿ ಪಡೆದು ಹೊರಹಾಕಿದ ಘಟನೆ ನಡೆದಿದ್ದು, ಈ ಹೆಣ್ಣು ಮಕ್ಕಳು ಆಸ್ತಿಯ ಆಸೆಗೆ ಹೆತ್ತವರಿಗೆ ದ್ರೋಹ ಬಗೆದಿದ್ದಾರೆ ಎನ್ನಲಾಗಿದೆ.

@publictv.in

ಹೌದು ತನ್ನ ಮಕ್ಕಳು ಸಂತೋಷದಿಂದ ಇರಲಿ ಎನ್ನುವ ಉದ್ದೇಶದಿಂದ ಜೀವನವನ್ನೇ ಶ್ರವಿಸಿ ಕಷ್ಟಪಟ್ಟು ಮಕ್ಕಳನ್ನು ಸಾಕಿ ಅವರೆಲ್ಲರಿಗೂ ಸೂರು ಮಾಡಿಕೊಟ್ಟ ಪಾಲಕರು ಹೆಣ್ಣುಮಕ್ಕಳು ಮನೆ ಕಣ್ಣು ಎನ್ನುವಂತೆ ಸಾಕಿ ಸಲುಹಿದರು. ಮಕ್ಕಳಿಗಾಗಿ ನಿಸ್ವಾರ್ಥವಾಗಿ ತಮ್ಮ ಸುಖವನ್ನೂ ಮರೆತು ಅವರ ಸುಖಕ್ಕೆ ಬದುಕನ್ನೇ ಹೆತ್ತವರು ಸವೆಯುತ್ತಾರೆ. ಆದರೆ ವೆಲ್ಲಿಯನ್, ಕಮಲಮ್ಮ ದಂಪತಿಗೆ ತಮ್ಮ ಮಕ್ಕಳೇ ಮೋಸ ಮಾಡಿದ್ದಾರೆ. ವೆಲ್ಲಿಯನ್ ದಂಪತಿಗೆ ಒಟ್ಟು ನಾಲ್ಕು ಜನ ಹೆಣ್ಣುಮಕ್ಕಳು. ಈ ಮಕ್ಕಳನ್ನು ಓದಿಸಿ, ಅವರಿಗೊಂದು ಬದುಕು ಕಟ್ಟಿಕೊಟ್ಟಿದ್ದು, ನಾಲ್ಕು ಜನರಿಗೂ ಚಾಮರಾಜಪೇಟೆಯಲ್ಲಿ ಪ್ರತ್ಯೇಕ ಮನೆ ಕಟ್ಟಿಕೊಟ್ಟಿದ್ದಾರೆ.

@publictv.in

ನಾಲ್ವರಲ್ಲಿ ಮೂವರು ಆಸ್ತಿಯನ್ನು ಫೋರ್ಜರಿ ಸಹಿ ಮೂಲಕ ತಮ್ಮ ಹೆಸರಿಗೆ ಬರೆದುಕೊಂಡಿದ್ದು, ತಂದೆ- ತಾಯಿಯನ್ನು ಮನೆಗೆ ಸೇರಿಸಿಕೊಳ್ಳುತ್ತಿಲ್ಲ. ಒಬ್ಬಳು ಪುತ್ರಿ ಹೆತ್ತವರನ್ನು ಮನೆಗೆ ಕರೆತಂದು ಸಾಕಲು ಮುಂದಾದಾಗ ಆಕೆಯ ಮನೆ ಸೇರಿದಂತೆ, ಆಸ್ತಿಯನ್ನು ಕೂಡ ಲಪಟಾಯಿಸಲು ಉಳಿದ ಮೂವರು ಸ್ಕೆಚ್ ಹಾಕಿದ್ದಾರಂತೆ. ಹೆಣ್ಣು ಮಕ್ಕಳ ಕೆಟ್ಟ ವರ್ತನೆಗೆ ವೃದ್ದ ದಂಪತಿ ನೋವು ಅನುಭವಿಸುತ್ತಿದ್ದಾರೆ. ಈ ಮೊದಲೇ ಮಕ್ಕಳಿಗೆಂದು ದಂಪತಿ ವಿಲ್ ಸಹ ಮಾಡಿದ್ದರು. ಆದರೆ ಅದನ್ನ ನಂಬದೇ ಫೋರ್ಜರಿ ಮಾಡಿ ಆಸ್ತಿಯನ್ನ ಮಕ್ಕಳು ಕಬಳಿಸಿಕೊಂಡಿದ್ದಾರೆ. ಹೆಣ್ಣು ಮಕ್ಕಳಿಗೆ ಇರಲು ಮನೆ ಬೇಕು ಎಂದು ದೊಡ್ಡ ಸೈಟಿನಲ್ಲಿ ನಾಲ್ಕು ಮನೆಗಳನ್ನ ನಿರ್ಮಿಸಿ, ಎಲ್ಲರ ಹೆಸರಲ್ಲೂ ಒಂದೊಂದು ಮನೆಯನ್ನ ದಂಪತಿ ಬರೆದು ವಿಲ್ ಮಾಡಿದ್ದರು.

ಆ ವಿಲ್ ಅನ್ನು ಹೆಣ್ಣು ಮಕ್ಕಳಿಗೆ ತೋರಿಸಿರಲಿಲ್ಲ. ಇದೇ ವಿಚಾರಕ್ಕೆ ತಂದೆ ತಾಯಿ ಮೇಲೆ ಮಕ್ಕಳು ಮುನಿಸಿಕೊಂಡಿದ್ದರು. ನಂತರ ಜನವರಿಯಲ್ಲಿ ಜಿಗಣಿ ರಿಜಿಸ್ಟ್ರಾರ್ ಆಫೀಸಿನಲ್ಲಿ ಸಬ್ ರಿಜಿಸ್ಟ್ರಾರ್ ಮಂಜುನಾಥ್ ಅನ್ನೋರು ಚಿನ್ನಪ್ಪ ಎಂಬುವವರಿಗೆ ಜನರಲ್ ಪವರ್ ಆಫ್ ಅಟಾರ್ನಿಯ(ಜಿಪಿಎ) ಕೊಟ್ಟು ನಂತರ ಅದನ್ನ ದಾನದ ರೂಪದಲ್ಲಿ ಈ ಹೆಣ್ಣು ಮಕ್ಕಳು ಫೋರ್ಜರಿ ಮಾಡಿ ಬರೆಸಿಕೊಂಡಿದ್ದಾರೆ. ಈಗ ತಾವೇ ಕಟ್ಟಿದ ಮನೆಯಲ್ಲಿ ಇರಲೂ ಆಗದೇ ಕಣ್ಣೀರಿಡುತ್ತಿದ್ದಾರೆ. ಹೆಣ್ಣುಮಕ್ಕಳ ಬಗ್ಗೆ ತಂದೆಗೆ ಹೆಚ್ಚು ಪ್ರೀತಿ ಅಂತಾರೆ ಆದರೆ ಮಕ್ಕಳಿಂದಲೇ ತಂದೆಯ ಇಷ್ಟೊಂದು ನೋವು ಅನುಭವಿಸುತ್ತಿದ್ದಾರೆ.

@publictv.in

ಹೆಣ್ಣು ಮಕ್ಕಳಿಗೆ ತಂದೆ-ತಾಯಿ ಮೆಲಿಯೇ ಹೆಚ್ಚು ಪ್ರೀತಿ ಇರುತ್ತೆ ಎನ್ನುತಾರೆ ಆದರೆ ಆಸ್ತಿಗಾಗಿ ಮಕ್ಕಳೇ ಮಾಡಿದ ಈ ಕೃತ್ಯಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಒಟ್ಟಾರೆಯಾಗಿ ಸಂಬಂಧಕ್ಕಿಂತ ಆಸ್ತಿಗಾಗಿ ಈಗಿನಕಾಲ ನಡೆಯುತ್ತಿದ್ದು ಪಾಲಕರು ಯಾರನ್ನು ನಂಬದೆ ತಮ್ಮ ಮುಪ್ಪಿನ ಕಾಲಕ್ಕೆ ಬೇಕಾದ ಎಲ್ಲವನು ಮೊದಲೇ ಸಿದ್ದ ಮಾಡಿಕೊಳ್ಳುವುದು ಒಳ್ಳೆಯದು.

ಮಾಹಿತಿ ಕೃಪೆ: publictv.in

Also read: ಬೆಂಗಳೂರಿನಲ್ಲಿ ವಿಚಿತ್ರ ಕಳ್ಳರ ಗ್ಯಾಂಗ್​; ರಾತ್ರಿ ವೇಳೆ ಬೆತ್ತಲಾಗಿ ಕಳ್ಳತನ ಮಾಡುವ ಗ್ಯಾಂಗ್.!