ವೀಸಾ ಪಡೆಯಲು ಕಷ್ಟವಾಗುತ್ತಿದೆಯೇ ಹಾಗಿದ್ದರೆ ಈ ದೇವಸ್ತಾನಕ್ಕೆ ಭೇಟಿ ಕೊಡಿ..!!

0
905

ಹೈದರಬಾದಿನ ಓಸ್ಮಾನ್ ಸಾಗರದ ಬಳಿಯಿರುವ ಚಿಕ್ಲುರ್ ಬಾಲಾಜಿ ದೇವಸ್ಥಾನವು ನಿಮ್ಮೆಲ್ಲ ಬೇಡಿಕೆಗಳನ್ನು ಇಡೇರಿಸುವುದು ಅದರಲ್ಲೂ ವಿಶೇಷವಾಗಿ ಯುಎಸ್ಎ ಹಾಗು ಇನ್ನಿತರ ದೇಶಗಳಿಗೆ ತೆರೆಳಲು ಬೇಕಾಗುವ ವೀಸವನ್ನು ಖಂಡಿತವಾಗಿಯೂ ನಿಮಗೆ ಸಿಗುವಂತೆ ಮಾಡುತ್ತದೆ ಎಂಬುದು ಭಕ್ತಾದಿಗಳ ನಂಬಿಕೆ..

ವರ್ಷಕ್ಕೆ ಸಾವಿರಾರು ಜನ ವಿದೇಶಕ್ಕೆ ತೆರಳುವರು ಈ ಒಂದು ದೇವಸ್ಥಾನಕ್ಕೆ ವೀಸ ದೊರಕಲಿ ಎಂಬ ಕೊರಿಕೆಯನ್ನಿಟ್ಟುಕೊಂಡು ಇಲ್ಲಿಗೆ ಬರುವ ಪ್ರತೀತಿ ಇದೆ. ಕೇವಲ ತೆಲಂಗಾಣ ಮತ್ತು ಆಂಧ್ರಪ್ರದೇಶ ಮಾತ್ರವಲ್ಲದೇ ಕರ್ನಾಟಕ, ತಮಿಳುನಾಡು ಹಾಗು ಮಹಾರಾಷ್ಟ್ರದಿಂದಲೂ ಭಕ್ತರು ತಮ್ಮ ವೀಸ ಕೊರಿಕೆಯೊಂದಿಗೆ ಈ ದೇವಸ್ಥಾನಕ್ಕೆ ಬರುತ್ತಾರೆ..

ಈ ದೇವಸ್ಥಾನಕ್ಕೆ 500 ವರ್ಷದ ಇತಿಹಾಸವಿದೆ, ಇದು ಮಾದಣ್ಣ ಮತ್ತು ಅಕ್ಕಣ್ಣರವರು ಕಟ್ಟಿಸ್ಸಿದ್ದರು ಎಂಬ ಪ್ರತೀತಿ ಇದೆ, ಆದರೆ ವೀಸಾ ದೇವಸ್ಥಾನ ಎಂದು ಪ್ರಚಾರ ಪಡೆದುಕೊಂಡಿರುವುದು ಇತ್ತೀಚಿನ ವರ್ಷಗಳಲ್ಲಿ. ಆಗಲೇ ಲಕ್ಷಕ್ಕೂ ಹೆಚ್ಚು ಜನರು ಇಲ್ಲಿ ಬೇಡಿಕೆ ಇಟ್ಟು ವೀಸ ಪಡೆದುಕೊಂಡಿದ್ದಾರೆ ಎಂದು ದೇವಸ್ಥಾನದ ಸಿಬ್ಬಂದಿ ಹೇಳುತ್ತಾರೆ.

 

ವೀಸಾ ಬೇಡಲು ಬರುವವರು ದೇವಸ್ಥಾನದ ಪ್ರಾಕಾರದ ಸುತ್ತ 11 ಪ್ರದಕ್ಷಿಣೆ ಹಾಕಬೇಕು, ತಮ್ಮ passport ಜೊತೆಗೆ ತೆಂಗಿನಕಾಯಿಯನ್ನು ದೇವರ ಮುಂದೆ ಇಟ್ಟು ಪ್ರಾರ್ಥಿಸಿಕೊಳ್ಳಬೇಕು. ವೀಸಾ ಪಡೆದರೆ 108 ಪ್ರದಕ್ಷಿಣೆ ಹಾಕುತ್ತೇನೆ ಎಂದು ಹರಕೆ ಹೊರಬೇಕು.

ಅಮೇರಿಕ ಮತ್ತು ಯೂರೋಪೆ ದೇಶಗಳಿಗೆ ವೀಸಾ ಪಡೆಯುವುದು ಕಷ್ಟಸಾಧ್ಯ, ಅದಕ್ಕಾಗಿಯೇ ಇಲ್ಲಿ ಸಾವಿರಾರು ಜನರು ಭೇಟಿ ನೀಡಿ ವೀಸಾ ಪಡೆದು ತಮ್ಮ ಜೀವನದ ದಿಕ್ಕು ಬದಲಾಗುವುದು ಎಂಬ ನಮ್ಬಿಕೆಯನ್ನಿಟ್ಟು ಇಲ್ಲಿಗೆ ಭೇಟಿನೀಡುತ್ತಾರೆ.

ನೀವು ಇಲ್ಲಿಗೆ ಭೇಟಿ ನೀಡಿದ್ದರೆ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿ…