ಪ್ರಧಾನಿ ಮೋದಿಗೆ ಬೆದರಿದ ಚೀನಾ ಡೋಕ್ಲಾಮ್ ಪ್ರದೇಶದಿಂದ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳವು ನಿರ್ಧಾರ…!

0
667

ಭಾರತ ಮತ್ತು  ಚೀನಾ ಮತ್ತು ಭೂತಾನ್ ದೇಶಗಳ ಗಡಿಭಾಗದಲ್ಲಿರುವ ವಿವಾದಿತ ಡೋಕ್ಲಾಮ್ ಪ್ರದೇಶದಿಂದ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳಲು ಚೀನಾ ಸರಕಾರ ನಿರ್ಧರಿಸಿದೆ. ಭಾರತೀಯ ಸೇನೆ ಕೂಡ ಅಲ್ಲಿಂದ ವಾಪಸ್ ಬರಲಿದೆ. ಈ ಮೂಲಕ ಎರಡು ತಿಂಗಳ ಗಡಿ ಬಿಕ್ಕಟ್ಟು ಅಂತ್ಯಗೊಂಡು ಯುದ್ಧದ ಕಾರ್ಮೋಡಗಳು ಸರಿಯುತ್ತಿವೆ. ಈ ಬೆಳವಣಿಗೆಯನ್ನು ಭಾರತದ ರಾಜತಾಂತ್ರಿಕ ಗೆಲುವೆಂದು ಬಣ್ಣಿಸಲಾಗುತ್ತಿದೆ.

ತನ್ನ ನೆಲದಲ್ಲಿ ತಾನು ಏನು ಬೇಕಾದರೂ ಮಾಡಿಕೊಳ್ಳುತ್ತೇನೆ. ಭಾರತ ಇಲ್ಲಿ ತಲೆಹಾಕಬಾರದು. ಇಲ್ಲದಿದ್ದರೆ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ ಎಂದು ಪದೇಪದೇ ಚೀನಾ ಎಚ್ಚರಿಕೆ ಕೊಡುತ್ತಲೇ ಬಂದಿತ್ತು. ಚೀನಾ ಸೇನೆ ಡೋಕ್ಲಾಮ್’ನಿಂದ ಹಿಂದೆ ಸರಿಯುವವರೆಗೂ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಿಲ್ಲ ಎಂದೂ ಭಾರತ ಹಠ ತೊಟ್ಟಿತು. ಎರಡು ತಿಂಗಳಲ್ಲಿ ಹೇಳಿಕೆ, ಪ್ರತಿಹೇಳಿಕೆಗಳು ಯುದ್ಧದ ಕಾರ್ಮೋಡವನ್ನೇ ನಿರ್ಮಿಸಿದ್ದವು.

ಇದೀಗ ಚೀನಾ ದೇಶ ಡೋಕ್ಲಾಮ್’ನಿಂದ ಸೇನೆಯನ್ನು ವಾಪಸ್ ಕರೆಸಿಕೊಳ್ಳಲು ನಿರ್ಧರಿಸಿದೆ ಇದಕ್ಕೆ ಪ್ರಮುಖ ಕಾರಣಗಳು;

ಒತ್ತಡದ ಸ್ಥಿತಿಯಲ್ಲೂ ಸಂಯಮ ಕಳೆದುಕೊಳ್ಳದ ಭಾರತದ ವಿದೇಶಾಂಗ ಇಲಾಖೆ.

ಡೋಕ್ಲಾಮ್’ನಿಂದ ಸೇನೆ ಹಿಂಸರಿಯದಿದ್ದರೆ ಚೀನಾದಲ್ಲಿ ನಡೆಯುವ ಬ್ರಿಕ್ಸ್ ಸಮಾವೇಶದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳುವುದಿಲ್ಲವೆಂಬ ಸಂದೇಶ ರವಾನೆಯಾಗಿತ್ತು.

ಚೀನಾ ಪಾಲಿಗೆ ಪ್ರತಿಷ್ಠೆಯಾಗಿರುವ ಸೌಥ್ ಚೀನಾ ಸಮುದ್ರದ ವಿಚಾರದಲ್ಲಿ ಚೀನಾಗೆ ವಿರುದ್ಧವಾಗಿ ನಿಂತಿರುವ ಜಪಾನ್, ದಕ್ಷಿಣ ಕೊರಿಯಾ ದೇಶಗಳೊಂದಿಗೆ ಭಾರತೀಯ ಸೇನೆ ಮೈತ್ರಿ ಮಾಡಿಕೊಂಡಿದೆ. ಡೋಕ್ಲಾಮ್ ಗಡಿ ವಿವಾದಲ್ಲಿ ಭಾರತಕ್ಕೆ ಜಪಾನ್ ಬೆಂಬಲ ಕೊಡಲೂ ಮುಂದಾಗಿತ್ತು.

ಈರೀತಿಯಾದ ಕಾರಣಗಳಿಂದ ಚೀನಾ ತನ್ನ ಸೇನೆಯನ್ನು ವಾಪಾಸ್ ಕರೆಸಿಕೊಳ್ಳಲು ನಿರ್ಧಾರ ಮಾಡಿದೆ.