ಚೀನಾ ಮತ್ತೆ ಭಾರತದ ತಾಳ್ಮೆಯನ್ನು ಪರೀಕ್ಷಿಸುತ್ತಿದೆ, ಈ ಬಾರಿ ನೇಪಾಳವನ್ನು ಅಸ್ತ್ರವನ್ನಾಗಿಸಿ ಕೊಂಡಿದೆ…

0
635

ಚೀನಾ ಹಾಗೂ ಭಾರತದ ನಡುವಿನ ಬಿಕ್ಕಟ್ಟು ಇಂದು ನಿನ್ನೆಯದಲ್ಲ. ಚೀನಾ ತನ್ನ ಕಾಲು ಕೆದರಿ ಜಗಳ ತೆಗೆಯುವ ಬುದ್ಧಿ ಇನ್ನು ಬಿಟ್ಟಿಲ್ಲ. ಆಗಲೇ ಮತ್ತೊಂದು ವಿವಾದವನ್ನು ಮಾಡಿಕೊಂಡಿದೆ.

source: ndtv.com

ಹೌದು ನಿರ್ಮಿಸಿರುವ ಒಂದು ರಸ್ತೆ ತಲೆ ನೋವು ಹೆಚ್ಚಿಸಿದೆ. ಚೀನಾ ತನ್ನ ಗಡಿಯಲ್ಲಿ ನೇಪಾಳಕ್ಕೆ ಹೊಂದಿಕೊಂಡಂತೆ ಹೆದ್ದಾರಿಯನ್ನು ನಿರ್ಮಿಸಿದೆ. ೪೦.೪ ಕಿ.ಮೀ ಉದ್ದದ ಈ ಹೆದ್ದಾರಿಯು, ಟಿಬೇಟ್‌ನ ಕ್ಸಿಗಾಝೆ ಏರ್‌ಪೋರ್ಟ್‌ನಿಂದ ಕ್ಸಿಗಾಝೆ ಸಿಟಿ ಸೆಂಟರ್‌ವರೆಗೆ ಹರಡಿದ್ದು, ಇದೇ ಶುಕ್ರವಾರ ಈ ರಸ್ತೆ ಸಂಚಾರಕ್ಕೆ ಮುಕ್ತವಾಗಲಿದೆ.

source: hindustantimes.com

ಈ ರಸ್ತೆಯ ಸಹಾಯದಿಂದ ನೇಪಾಳ ರಾಷ್ಟ್ರ ಭಾರತದ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಅಲ್ಲದೆ ಚೀನಾ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ತನ್ನ ಹಿಡಿತ ಸಾಧಿಸಲು ಸಹಾಯಕಾವಗುತ್ತದೆ. ಭಾರತ ಈ ಯೋಜನೆಯನ್ನು ಮೊದಲಿನಿಂದ ಸಂದೇಹದಿಂದ ನೋಡುತ್ತಾ ಬಂದಿತ್ತು. ಇನ್ನು ಈ ರಸ್ತೆಯು ಶಿಗ್ಸ್-ಲಾಸಾ ರೈಲ್ವೆ ಮಾರ್ಗದ ಸಮಾನಾಂತರವಾಗಿದೆ. ಈ ರಸ್ತೆ ಜಿ-೩೧೮ಗೆ ಸೇರಲಿದೆ. ಅಂದ್ರೆ ಸುಮಾರು ೫೪೭೬ ಕಿಲೋ ಮೀಟರ್ ನಷ್ಟು ದೂರವನ್ನು ಸಂಪರ್ಕಿಸಬಲ್ಲದು. ಇನ್ನು ಚೀನಾ ತನ್ನ ಸ್ನೇಹ ಸಂಬಂಧವನ್ನು ಟಿಬೇಟ್ ಹಾಗೂ ನೇಪಾಳ ಜೊತೆಗೆ ಉತ್ತಮವಾಗಿಸಿಕೊಳ್ಳಲು ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ.

ಶುಕ್ರವಾರ ಉದ್ಘಾಟನೆ ಯಾಗಲಿರುವ ಹೈವೇ ೨೫ ಮೀಟರ್ ಅಗಲವಿದೆ. ಅಲ್ಲದೆ ನಾಲ್ಕು ವಾಹನಗಳ ಸಂಚಾರವನ್ನು ಒಂದು ಬದಿಯಲ್ಲಿ ಹೊಂದಿದೆ. ಈ ರಸ್ತೆಯ ಸಹಾಯದಿಂದ ಚೀನಾ ತನ್ನ ವಿಮಾನಗಳಿಗೆ ರನ್‌ವೇ ತರಹ ಬಳಸುವ ಯೋಜನೆಯನ್ನು ಹೊಂದಿದೆ. ಅಲ್ಲದೆ ಈ ರಸ್ತೆಯ ಸಹಾಯದಿಂದ ಚೀನಾ ಎರಡೂ ದೇಶಗಳ ಜೊತೆ ಉತ್ತಮ ಸಂಬಂಧ ಹಾಗೂ, ಸೇನಾ ಕಾರ‍್ಯಗಳಿಗೆ ಬಳಸಲು ಯೋಜನೆಯನ್ನು ರೂಪಿಸಿಕೊಂಡಿದೆ. ಈ ರಸ್ತೆಯ ಸಹಾಯದಿಂದ ಚೀನಾದ ಒಂದು ದೊಡ್ಡ ನಗರದಿಂದ, ನೇಪಾಳ ನಗರಕ್ಕೆ ಸೇರಲು ಯಾವುದೇ ಮಾರ್ಗದಿಂದ ಬಂದಲ್ಲಿ ೩೦ ನಿಮಿಷದ ಸಮಯವನ್ನು ಉಳಿಸಬಹುದಾಗಿದೆ.