ಚೀನಾಗೆ ಬುದ್ದಿ ಕಲಿಸಿದ ಭಾರತೀಯರು, ಚೀನಾಕ್ಕೆ ವಾಪಾಸ್ ಆಗುತ್ತಿರುವ ಚೀನಿ ಫೋನ್ ಮಾರಾಟಗಾರರು..!

1
1639

ಹೌದು ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಚೀನಾದ ನಡುವಿನ ಸಂಬಂಧ ಹದಗೆಟ್ಟಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಚೀನಿ ವಸ್ತುಗಳನ್ನು ನಿಷೇಧಿಸುವಂತೆ ನಾನಾ ಭಾರತೀಯರು ಕರೆ ನೀಡಿದ್ದರು. ಇದರ ಬೆನ್ನಲೇ ಭಾರತ ಮಾರುಕಟ್ಟೆಯಲ್ಲಿ ಚೀನಿ ವಸ್ತುಗಳಿಗೆ ಅವಕಾಶ ಕಡಿಮೆಯಾಗಿದೆ.

ಡೋಕ್ಲಾಮ್‌’ನಲ್ಲಿ ಭಾರತ ಹಾಗೂ ಚೀನಾ ನಡುವೆ ಉದ್ಭವಿಸಿದ್ದ ಬಿಕ್ಕಟ್ಟು ಚೀನಾದ ಮೊಬೈಲ್ ಕಂಪನಿಗಳಿಗೆ ಭಾರಿ ಹೊಡೆತ ನೀಡಿದೆ. ಚೀನಾ ವಿರೋಧಿ ಭಾವನೆ ಭಾರತೀಯರಲ್ಲಿ ಬಲವಾಗಿ ಮೊಳೆತ ಫಲವಾಗಿ ಚೀನಿ ಮೂಲದ ಮೊಬೈಲ್ ಕಂಪನಿಗಳು ಅದರಲ್ಲೂ ವಿಶೇಷವಾಗಿ ಒಪ್ಪೋ ಹಾಗೂ ವೀವೊ ಮೊಬೈಲ್ ಗಳ ಮಾರಾಟ ಜುಲೈ ಮತ್ತು ಆಗಸ್ಟ್‌ನಲ್ಲಿ ಗಣನೀಯವಾಗಿ ಕುಸಿದಿದೆ.

ಹೀಗಾಗಿ ದೇಶದಲ್ಲಿ ದುಡಿಯುತ್ತಿದ್ದ ಆ ಎರಡೂ ಕಂಪನಿಗಳ ಸುಮಾರು 400 ಚೀನಿ ನೌಕರರು ಗಂಟು, ಮೂಟೆ ಕಟ್ಟಿಕೊಂಡು ತವರಿಗೆ ಮರಳುತ್ತಿದ್ದಾರೆ. ಡೋಕ್ಲಾಮ್ ಬಿಕ್ಕಟ್ಟು ಸೃಷ್ಟಿಯಾದ ಬಳಿಕ ಈ ಎರಡೂ ಕಂಪನಿಗಳ ಮೊಬೈಲ್ ಮಾರಾಟದಲ್ಲಿ ಶೇ.30ರಷ್ಟು ಕುಸಿತ ಕಂಡುಬಂದಿದೆ.

ದೇಶದಲ್ಲಿ ಚೀನಾ ಮೂಲದ ಕ್ಸಿಯೋಮಿ, ಲೆನೋವೋ, ಮೋಟೊ ರೋಲ ಹಾಗೂ ಒನ್‌’ಪ್ಲಸ್ ಕಂಪನಿಯ ಮೊಬೈಲ್‌’ಗಳೂ ಬಿಕರಿಯಾಗುತ್ತಿವೆಯಾದರೂ, ಒಪ್ಪೋ ಹಾಗೂ ವೀವೊ ಮಾತ್ರ ಚೀನಿ ಬ್ರ್ಯಾಂಡ್‌’ಗಳು ಎಂದು ಜನಮಾನಸದಲ್ಲಿ ಗಟ್ಟಿಯಾಗಿ ಬೇರೂರಿರುವುದೇ ಮಾರಾಟ ಕುಸಿಯಲು ಕಾರಣ ಎಂದು ಹೇಳಲಾಗಿದೆ.