ಈಗ PayTM ನ ಬಹುತೇಕ ಹೂಡಿಕೆ ಹಾಗೂ ಮಾಲೀಕತ್ವ ಚೀನಿಯರ ಬಳಿ ಇದೆ, ಚೀನಿಯರು ಪಾಕಿಸ್ತಾನದ ಬೆನ್ನಿಗೆ ನಿಂತಿದ್ದಕೆ PayTM ಕಥೆ ಏನಾಗ್ತಿದೆ ಗೊತ್ತಾ?

0
530

ಪುಲ್ವಾಮಾ ದಾಳಿಯಿಂದ ಭಾರತದಲ್ಲಿ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಈ ಕೃತ್ಯದಲ್ಲಿ ಪಾಕಿಸ್ತಾನದ ಕೈವಾಡ ಇರುವದಾಗಿ ಆರೋಪಿಸಿದ ಭಾರತಕ್ಕೆ ಹಲವು ದೇಶಗಳು ಬೆಂಬಲ ಸೂಚಿಸಿ ಈ ಘಟನೆಯಲ್ಲಿ ಪಾಕ್ ಪಾತ್ರವಿದೆ ಎಂದು ಇಡೀ ವಿಶ್ವವೂ ದೂರುತ್ತಿದೆ. ಆದರೆ ಪಾಕ್ ಪರ ಬಕೆಟ್ ಹಿಡಿಯುತ್ತಿರುವ. ಚೀನಾ ‘ಸಾಕ್ಷ್ಯಾಧಾರವಿಲ್ಲದೆ ಪಾಕಿಸ್ತಾನದ ಮೇಲೆ ವೃಥಾ ಗೂಬೆ ಕೂರಿಸಬೇಡಿ’ ಎಂದು ಪಾಕ್ ಪರ ನಿಂತಿದೆ. ಇದೆಲ್ಲವನ್ನು ತಿಳಿದು ಭಾರತದ ವಿರುದ್ಧ ಪಾಕ್ ಯಾವುದೇ ಕೃತ್ಯ ಎಸಗಿದರೂ ಅದರಲ್ಲಿ ಚೀನಾ ಬೆಂಬಲ ಪರೋಕ್ಷವಾಗಿಯಾದರೂ ಇದ್ದೇ ಇರುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಗಿದ ಹಿನ್ನೆಲೆಯಲ್ಲಿ ಪಾಕ್ ಪರ ದೇಶಗಳಿಗೆ ಬಿಸಿ ಮುಟ್ಟಿಸಲು ಮುಂದಾದ ಭಾರತ ಚೀನಾಕ್ಕೆ ದೊಡ್ಡ ಆಘಾತ ತಂದಿದೆ.


Also read: ನರೇಂದ್ರ ಮೋದಿ ಸರ್ಕಾರದಿಂದ ಕೇಂದ್ರ ನೌಕರರಿಗೆ ಗುಡ್ ನ್ಯೂಸ್: ಶೇ. 3ರಷ್ಟು ತುಟ್ಟಿ ಭತ್ಯೆ ಹೆಚ್ಚಳ..

ಹೌದು ಪುಲ್ವಾಮಾ ದಾಳಿಯ ಬಳಿಕ, ಪಾಕಿಸ್ತಾನದ ಬೆಂಬಲಕ್ಕೆ ನಿಂತ ಚೀನಾಕ್ಕೆ ಭಾರೀ ನಷ್ಟ ಅನುಭವಿಸುವ ಆತಂಕ ಎದುರಾಗಿದೆ. ಏಕೆಂದರೆ ಚೀನಾ ತನ್ನೆಲ್ಲ ಉತ್ಪನಗಳಿಗೆ ಭಾರತದಲ್ಲಿ ಮಾರಾಟದ ವೇದಿಕೆಯನ್ನು ರೂಪಿಸಿಕೊಂಡು ಮೆರೆಯುತ್ತಿತ್ತು. ಅದೇ ರೀತಿ ಚೀನಾದ ಹಲವು ವಸ್ತುಗಳಾದ ಮೊಬೈಲ್ಸ್, ಇಲೆಕ್ಟ್ರಾನಿಕ್, ಸೇರಿದಂತೆ ಇತರೆ ವಸ್ತುಗಳು ಭಾರತದಲ್ಲಿ ಬೇಡಿಕೆ ಹೆಚ್ಚಿತು. ಆದರೆ ಭಾರತದಲ್ಲಿ ಆದ ಪುಲ್ವಾಮಾ ದಾಳಿಯಲ್ಲಿ ಪಾಕ್ ದೇಶಕ್ಕೆ ಮಾಡುತ್ತಿರುವ ಸಹಕಾರಕ್ಕೆ ವಿರೋಧಿಸಿದ ಭಾರತ ಚೀನಾ ವಸ್ತುಗಳ ಬಗ್ಗೆ ಈಗಾಗಲೇ ತಿರಸ್ಕಾರ ಆರಂಭವಾಗಿದ್ದು ಚೀನಾ ಉತ್ಪನ್ನಗಳ ಮೇಲೆ ಜನರೇ ಸ್ವಇಚ್ಛೆಯಿಂದ ಬಹಿಷ್ಕಾರ ಹಾಕುತ್ತಿದ್ದಾರೆ. ಅದರ ಸಾಲಿನಲ್ಲಿ ನಗದು ರಹಿತ ವ್ಯವಹಾರಕ್ಕೆ ಹೆಸರು ಮಾಡಿಕೊಂಡ Paytm ವ್ಯವಹಾರಕ್ಕೆ ಭಾರತದಲ್ಲಿ ಹಿನ್ನೆಡೆ ಎದುರಾಗಿದೆ.


Also read: ಸೇನೆಯಿಂದ ಖಡಕ್ ವಾರ್ನಿಂಗ್; ಕಾಶ್ಮೀರಿ ಉಗ್ರರೆ ಹೇಡಿತನ ಬಿಟ್ಟು ಶರಣಾಗಿ, ಇಲ್ಲ ಸಾಯಲು ಸಿದ್ಧರಾಗಿ..

ಚೀನಾದ Paytm ಗೆ ಪುಲ್ವಾಮಾ ಬಿಸಿ?

ನಗದು ರಹಿತ ಪೇಮೆಂಟ್ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ನಿರ್ಮಿಸಿದ್ದ Paytm appಗೆ ತಟ್ಟಿದೆ. ಚೀನಾ ಮೂಲದ ಆಲಿಬಾಬಾ ಸಂಸ್ಥೆಯ ಭಾಗವಾಗಿರುವ ಕಾರಣ ಪೇಟಿಎಂ ಅನ್ನೂ ಬಹಿಷ್ಕರಿಸಲು ಕೆಲವು ಭಾರತೀಯರು ಆರಂಭಿಸಿದ್ದಾರೆ. ಈಗಾಗಲೇ ಡಿಜಿಟಲ್ ಪೇಮೆಂಟ್ ಗೆ ಸಾಕಷ್ಟು app ಗಳೂ ಬಂದಿರುವ ಕಾರಣ ಪೇಟಿಎಂ ಮೇಲೆಯೇ ಹೆಚ್ಚು ಅವಲಂಬಿತರಾಗುವ ಅಗತ್ಯವೂ ಇಲ್ಲ. ಆದ್ದರಿದ ಹಲವರು ಈಗಾಗಲೇ ತಮ್ಮ ಫೊನ್ ಗಳಿಂದ ಪೇಟಿಎಂ app ಅನ್ನೇ ಡಿಲೀಟ್ ಮಾಡಿದ್ದಾರೆ. ‘ನಾನು ಕಷ್ಟಪಟ್ಟು ದುಡಿದ ದುಡ್ಡು ನೇರವಾಗಿ ಕುತಂತ್ರಿ ಚೀನಾ ಪಾಲಾಗುವುದು ಬೇಡ. ಆದ್ದರಿಂದ ನಾನು ಪೇಟಿಎಂ ಮೂಲಕ ಹಣ ಪಾವತಿಸುವುದಿಲ್ಲ’ ಎಂದು ಬಹುತೇಕರು ನಿರ್ಧರಿಸಿದ್ದಾರೆ.


Also read: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ CRPF ಯೋಧರ ಸಾಲ ಮನ್ನಾ ಮಾಡಿದ ಭಾರತೀಯ ಸ್ಟೇಟ್‌ ಬ್ಯಾಂಕ್‌..

ಪುಲ್ವಾಮಾ ದಾಳಿ ಬಿಸಿ ಪಾಕ್ ಕ್ರಿಕೆಟ್ ಮೇಲೆ?

ಜಮ್ಮು ಕಾಶ್ಮೀರದ ಪುಲ್ವಾಮಾ ದಾಳಿಯಲ್ಲಿ 44 ಸೈನಿಕರು ಸಾವನ್ನಪ್ಪಿರುವುದು ಎರಡು ದೇಶಗಳ ನಡುವೆ ಪರಿಸ್ಥಿತಿಯನ್ನ ಮತ್ತಷ್ಟು ಹದಗೆಡುವಂತೆ ಮಾಡಿದೆ. ದಾಳಿಯನ್ನು ಜೈಶ್ ಇ ಮಹಮದ್ ಸಂಘಟನೆ ಹೊಣೆ ಹೊತ್ತುಕೊಂಡ ಬಳಿಕ ಪಾಕ್ ವಿರುದ್ಧ ವಿಶ್ವಕಪ್ ಪಂದ್ಯ ಆಡುವುದಕ್ಕೆ ಹಿರಿಯ ಆಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಫೈನಲ್ ಗೆ ಬಂದರೂ ಭಾರತ ಪಾಕ್ ವಿರುದ್ಧ ಪಂದ್ಯ ಆಡಬಾರದು. ಈ ಮೂಲಕ ಪಾಕಿಸ್ತಾನಕ್ಕೆ ವಿಶ್ವಮಟ್ಟದಲ್ಲಿ ಮುಜುಗರವನ್ನು ಉಂಟುಮಾಡಬೇಕು. ಕ್ರೀಡೆಗೆ ಗಡಿ ಇಲ್ಲದೇ ಇದ್ದರೂ ಉಗ್ರರನ್ನು ಛೂ ಬಿಟ್ಟು ಪದೇ ಪದೇ ಭಾರತಕ್ಕೆ ಕಿರಿಕ್ ಮಾಡುತ್ತಿರುವ ಪಾಕಿಸ್ತಾನಕ್ಕೆ ಈ ಮೂಲಕ ಟೀ ಇಂಡಿಯಾ ತಂಡ ವಿಶ್ವಕಪ್ ನಲ್ಲಿ ಪಾಠ ಕಲಿಸಬೇಕು ಎನ್ನುವ ಅಭಿಪ್ರಾಯವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಅದರಂತೆ ಪಾಕ್ ವಿರುದ್ಧ ಪಂದ್ಯ ಆಡಕೂಡದು ಎಂದು ಭಾರತ ಸರ್ಕಾರ ನಿರ್ಧಾರ ತೆಗೆದುಕೊಂಡರೆ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಪಾಕ್ ವಿರುದ್ಧ ಕ್ರಿಕೆಟ್ ಆಡುವುದಿಲ್ಲ ಎಂದು ಬಿಸಿಸಿಐ ಹಿರಿಯ ವಕ್ತಾರರು ತಿಳಿಸಿದ್ದಾರೆ.