ಸೊಳ್ಳೆ ಹೆಚ್ಚಾಗಿವೆ ಅಂತ ಅಪ್ಪಿ ತಪ್ಪಿಯೂ ಚೀನಿಯ ಸೊಳ್ಳೆ ಬ್ಯಾಟ್ ಬಳಸುತ್ತಿದ್ದರೆ ಎಚ್ಚರ..!

0
2342

ನಮ್ಮ ದೇಶದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ ಮತ್ತು ಸೊಳ್ಳೆಗಳ ನಿರ್ಮೂಲನೆಗಾಗಿ ಸರ್ಕಾರಗಳು ಏನೆಲ್ಲಾ ಕಸರತ್ತು ನಡೆಸಿದರು ಪ್ರಯೋಜನವಾಗುತ್ತಿಲ್ಲ. ಈ ಮಧ್ಯೆ ಚೀನಾ ಅಗ್ಗದ ದರದಲ್ಲಿ ಸೊಳ್ಳೆ ಬ್ಯಾಟ್ ಗಳನ್ನು ತಯಾರಿಸಿದ್ದು ಈ ಬ್ಯಾಟ್ ಗಳು ಅಪಾಯಕಾರಿ ಎಂಬ ಆಘಾತಕಾರಿ ವಿಷಯವನ್ನು ಸಂಶೋಧಕರು ಬಹಿರಂಗಪಡಿಸಿದ್ದಾರೆ.

Also read: ವಿಟಮಿನ್ ಎ ಮಾತ್ರೆಗಳನ್ನು ಸೇವಿಸುವರು ಎಚ್ಚರ; ಅತಿಯಾದ ವಿಟಮಿನ್​ ಎ ಮಾತ್ರೆಗಳನ್ನು ಸೇವಿಸುವರ ಎಲುಬುಗಳ ಮೇಲೆ ದುಷ್ಟಪರಿಣಾಮ ಬೀರಲಿದೆ..

ಚೀನಾ ನಿರ್ಮಿತ ಅಗ್ಗದ ಸೊಳ್ಳೆ ಬ್ಯಾಟುಗಳಲ್ಲಿ ಮಿತಿ ಮೀರಿದ ಸೀಸದ ಅಂಶವು ಪರಿಸರ ಹಾಗೂ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೈದರಾಬಾದ್ ನ ಸೆಂಟರ್ ಫಾರ್ ಮಟೀರಿಯಲ್ಸ್ ಫಾರ್ ಇಲೆಕ್ಟ್ರಾನಿಕ್ಸ್ ಟೆಕ್ನಾಲಜಿ ಸಂಸ್ಥೆಯ ಸಂಶೋಧಕರು ತಿಳಿಸಿದ್ದಾರೆ.

ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಚೀನಾ ನಿರ್ಮಿತ ಸೊಳ್ಳೆ ಬ್ಯಾಟ್ ಗಳಲ್ಲಿ ಮೀತಿ ಮೀರಿದ ಸೀಸದ ಅಂಶ ಇರುವುದು ದೃಢಪಟ್ಟಿದೆ. ಇನ್ನು ಯೂರೋಪ್ ಒಕ್ಕೂಟದ ತಜ್ಞರು ನಿಗದಿಪಡಿಸಿರುವ ಮಾನದಂಡಗಳ ಅನುಸಾರ, ಸೊಳ್ಳೆ ಬ್ಯಾಟ್ ಗಳಲ್ಲಿ ಸೀಸದ ಅಂಶವು ಗರಿಷ್ಠ 1000 ಪಿಪಿಎಂ(ಪಾರ್ಟ್ಸ್ ಪರ್ ಮಿಲಿಯನ್) ಇರಬೇಕು. ಆದರೆ ಚೀನಾ ನಿರ್ಮಿತ ಸೊಳ್ಳೆ ಬ್ಯಾಟ್ ಗಳಲ್ಲಿ ಇದರ ಅಂಶ 3000 ಪಿಪಿಎಂನಿಂದ 82 ಸಾವಿರ ಪಿಪಿಎಂವರೆಗೂ ಇದೆ ಎಂದು ತಿಳಿದುಬಂದಿದೆ.

ಅಂಕಿ-ಅಂಶದ ಪ್ರಕಾರ ಫೆಬ್ರವರಿಯಿಂದ ನವೆಂಬರ್ 2016ರವರೆಗೆ ಚೀನಾದಿಂದ 2 ಲಕ್ಷ ಸೊಳ್ಳೆ ಬ್ಯಾಟ್ ಗಳನ್ನು ಭಾರತ ಆಮದು ಮಾಡಿಕೊಂಡಿದೆ ಎಂದು ವರದಿಯಾಗಿದೆ.

Also read: ನೀವು ಈ ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದೀರ? ಹಾಗಾದ್ರೆ ಪಕ್ಕಾ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಚ್ಚರ…