ಮಕ್ಕಳು ತುಂಬಾನೇ ಇಷ್ಟಪಡುವ ಚೈನೀಸ್ ಪಕೋಡ ಹೇಗೆ ಮಾಡೋದು ಅಂತ ಕಲಿಯಿರಿ!!

0
702

ಬೇಕಾಗುವ ಸಾಮಗ್ರಿಗಳು

 • ಎಲೆಕೋಸು
 • ಈರುಳ್ಳಿ
 • ಕ್ಯಾರೆಟ್
 • ದಪ್ಪ ಮೆಣಸಿನಕಾಯಿ
 • ಹಸಿ ಮೆಣಸಿನಕಾಯಿ
 • ಶುಂಠಿ ಬೆಳ್ಳುಳ್ಳಿ ಪೇಸ್ಟ್
 • ರೆಡ್ ಚಿಲ್ಲಿ ಸಾಸ್
 • ಸೋಯಾ ಸಾಸ್
 • ವಿನಿಗರ್
 • ಮೈದಾ ಹಿಟ್ಟು
 • ಕಾರ್ನ್ ಫ್ಲೋರ್
 • ಫುಡ್ ಕಲರ್

ಮಾಡುವ ವಿಧಾನ :

ಒಂದು ಪಾತ್ರೆಯಲ್ಲಿ ಕಟ್ ಮಾಡಿರುವ ಎಲೆಕೋಸು 1 ಕಪ್, 1 ಕಪ್ ಮಾಡಿರುವ ಈರುಳ್ಳಿ, 1/4 ಕಪ್ ಕ್ಯಾರೆಟ್ , 1/4 ಕಪ್ ದಪ್ಪ ಮೆಣಸಿನಕಾಯಿ, 1 ಟೇಬಲ್ ಚಮಚದಷ್ಟು ಶುಂಠಿ ಬೆಳ್ಳುಳ್ಳಿ ಪೇಸ್ಟ್,1 ಟೇಬಲ್ ಚಮಚ ರೆಡ್ ಚಿಲ್ಲಿ ಸಾಸ್, 2 ಟೀ ಚಮಚ ಸೋಯಾ ಸಾಸ್, 1 ಟೀ ಚಮಚ ವಿನಿಗರ್, 1 ಟೀ ಚಮಚ ಹಸಿಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು(ಸೋಯಾ ಸಾಸ್ ಹಾಕಿರುವುದರಿಂದ ಉಪ್ಪುಕಡಿಮೆ ಹಾಕಿ) ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಈಗ ಒಂದು ಕಪ್ ಮೈದಾ ಹಿಟ್ಟು , 2 ಟೇಬಲ್ ಚಮಚದಷ್ಟು ಕಾರ್ನ್ ಫ್ಲೋರ್, ಸ್ವಲ್ಪ ಫುಡ್ ಕಲರ್ ಟೇಬಲ್ ಚಮಚ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಸ್ವಲ್ಪ ನೀರು ಹಾಕಿ ಪಕೋಡ ಹದಕ್ಕೆ ಕಲಿಸಿಕೊಳ್ಳಬೇಕು. (ಫುಡ್ ಕಲರ್ ನ ಸ್ಕಿಪ್ ಕೂಡ ಮಾಡಬಹುದು)

ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಲು ಇಡಿ. ಎಣ್ಣೆ ಬಿಸಿ ಆದ ನಂತರ ಎಣ್ಣೆಯಲ್ಲಿ ಪಕೋಡಾಗಳನ್ನು ಹಾಕಿ ಕರಿಯಿರಿ.

Also read: ಬ್ರೆಡ್ ಪಕೋಡಾ