ತಮಿಳುನಾಡಿನಲ್ಲೀಗ ‘ಚಿನ್ನಮ್ಮ’ನ ದರ್ಬಾರ್ : ಪ್ರಧಾನ ಕಾರ್ಯದರ್ಶಿಯಾಗಿ ಶಸಿಕಲಾ ಅವಿರೋಧ ಆಯ್ಕೆ

0
745

ಚೆನ್ನೈ:ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಮಾಜಿ ಮುಖ್ಯಮಂತ್ರಿ ದಿವಗಂತ ಜಯಲಲಿತಾ ಆಪ್ತೆ ಶಶಿಕಲಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಂದು ನಡೆದ ಪಕ್ಷದ ಪಕ್ಷದ ಸಾಮಾನ್ಯ ಸಭೆಯಲ್ಲಿ ಶಶಿಕಲಾ ಆಯ್ಕೆಯಾದ ಬಗ್ಗೆ ನಿರ್ಣಯವನ್ನು ಅಂಗೀಕರಿಸಲಾಯಿತು.

sasikala

ಜಯಲಲಿತಾ ಅವರಿಗೆ ಸಂತಾಪ ಸೂಚಿಸಿದ ನಂತರ ಎಐಎಡಿಎಂಕೆ ಪಕ್ಷದ ಅಧ್ಯಕ್ಷ ಇ. ಮಧುಸೂಧನ್ ಹಾಗೂ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಮುಂತಾದ ನಾಯಕರ ಉಪಸ್ಥಿತಿಯಲ್ಲಿ ಸಭೆ ನಡೆಯಿತು.

ಪಕ್ಷದ ನಂ 20 ರ ಹಾಗೂ ಸೆಕ್ಷನ್ 2 ನಿಯಮದ ಅನ್ವಯ ಶಶಿಕಲಾ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ’. ಈ ನಿರ್ಣಯದ ಪ್ರಕಾರ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರು ಪಕ್ಷದ ಎಲ್ಲ ಅಧಿಕಾರವನ್ನು ಹೊಂದಿರಲಿದ್ದಾರೆ’ ಎಂದು ಸಭೆಯಲ್ಲಿ ನಿರ್ಣಯವನ್ನು ಓದಲಾಯಿತು.

sashijaya380

ಈ ಸಭೆಯಲ್ಲಿ ಒಟ್ಟು 14 ಮಹತ್ವದ ನಿರ್ಣಯಗಳನ್ನು ಅಂಗೀಕರಿಸಲಾಯಿತು. ಜಯಲಲಿತಾ ನಿಧನರಾದ ದಿನವನ್ನು ರಾಷ್ಟ್ರೀಯ ರೈತ ದಿನವನ್ನಾಗಿ ಘೋಷಿಸಬೇಕು. ಜಯಾ ಅವರಿಗೆ ಮ್ಯಾಗ್ಸಸ್ಸೆ ಪ್ರಶಸ್ತಿ ನೀಡಬೇಕು. ಪುರುಚ್ಚಿ ತಲೈವಿ ಅವರಿಗೆ ಭಾರತ ರತ್ನ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕು ಎಂಬಿತ್ಯಾದಿ ನಿರ್ಣಯಗಳು ಇದರಲ್ಲಿವೆ. ಜಯಲಲಿತಾ ನಿಧನಾನಂತರ ಪಕ್ಷದ ನಾಯಕತ್ವ ವಹಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದ ಶಶಿಕಲಾ ನಟರಾಜನ್ ಮತ್ತು ಉಚ್ಚಾಟಿತ ಸಂಸದೆ ಶಶಿಕಲಾ ಪುಷ್ಟಾ ನಡುವಣ ಜಟಾಪಟಿ ತೀವ್ರಗೊಂಡಿದ್ದು, ನಿನ್ನೆ ಪುಷ್ಪಾ ಅವರ ಪತೆ ಲಿಂಗೇಶ್ವರ ತಿಳಗನ್ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಹಂತದಲ್ಲಿ ಪಕ್ಷದ ಎರಡು ಬಣಗಳ ನಡುವೆ ಘರ್ಷಣೆ ನಡೆದು ಕೆಲವು ಗಾಯಗೊಂಡಿದ್ದರು.