ಹೇಗಿದ್ದ ಹೇಗಾದ ಗೊತ್ತಾ ನೈಜೀರಿಯಾದ ಈ `ಚಿನ್ನಾರಿ ಮುತ್ತ`

0
1408

Kannada News | kannada Useful Tips

ಒಂದು ವರ್ಷದ ಹಿಂದಿನ ಮಾತು. ವಿದೇಶೀ ಮಹಿಳೆಯೊಬ್ಬರು ಬಡತನದ ಬೇಗೆಯಲ್ಲಿ ಬಸವಳಿದು ನಿತ್ರಾಣನಾಗಿದ್ದ ಬಾಲಕನೊಬ್ಬನಿಗೆ ನೀರು ಕುಡಿಸುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿ ಸಂಚಲನ ಸೃಷ್ಟಿಸಿತ್ತು. ಈಗ ಅದನ್ನು ಬಹುತೇಕ ಮಂದಿ ಮರೆತಿರಬಹುದು.

ಹಾಗೆ ನಿತ್ರಾಣನಾಗಿದ್ದ ನೈಜೀರಿಯಾದ ಎರಡರಿಂದ ಮೂರು ವರ್ಷದ ಬಾಲಕ `ಹೋಪ್’ ಈಗ ಶಾಲೆಗೆ ಹೋಗುತ್ತಿದ್ದಾನೆ. ಡೆನ್ಮಾರ್ಕ್‍ನ ಸಾಮಾಜಿಕ ಕಾರ್ಯಕರ್ತರು ಬೀದಿ ಬದಿಯಲಲ್ಲಿ ವಾಸವಾಗಿದ್ದ `ಹೋಪ್‍‘ ಪೋಷಣೆಯ ಜವಾಬ್ದಾರಿ ಹೊತ್ತಿದ್ದಾರೆ.

ಬಾಲಕ ಹೋಪ್‍ ಪೋಷಣೆ ಮಾಡುತ್ತಿರುವ ಕಾರ್ಯಕರ್ತರಲ್ಲಿ ಒಬ್ಬರಾದ ಅಂಜಾ ರಿಂಗರಿನ್ ಲೋವೆನ್ ಎಂಬಾಕೆ ಒಂದು ವರ್ಷದ ಹಿಂದೆ ತೆಗೆದಿದ್ದ ಪೋಟೋ ಮಾದರಿಯಲ್ಲೇ ಈಗ ಫೋಟೋ ತೆಗೆದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಿದೆ.

ನಿತ್ರಾಣನಾಗಿದ್ದ ನೈಜೀರಿಯಾದ ಈ ಬಾಲಕ ಆರೋಗ್ಯವಂತನಾಗಿದ್ದು, ಶಾಲೆಯ ಧಿರಿಸಿನಲ್ಲಿ ಕಾಣಿಸಿಕೊಂಡಿದ್ದು, ದೃಷ್ಟಿ ಆಗುವಂತೆ ಕಾಣುತ್ತಿದ್ದಾನೆ.

ಈ ಬಾಲಕನ ಪೋಷಣೆ ಜವಾಬ್ದಾರಿ ಹೊತ್ತು ಒಂದು ವರ್ಷ ಪೂರ್ರೈಸಿದ ಹಿನ್ನೆಲೆಯಲ್ಲಿ ಜನವರಿ 30ರಂದು ಈ ಫೋಟೋ ಮೊದಲ ಬಾರಿ ಅಪ್‍ಲೋಡ್‍ ಆಗಿದ್ದು, ಇದುವರೆಗೆ 31,000 ಪ್ರತಿಕ್ರಿಯೆಗಳು ಬಂದಿವೆ. ಫೇಸ್‍ಬುಕ್‍ವೊಂದರಲ್ಲೇ 7000 ಷೇರ್‍ ಆಗಿವೆ.

ಹೋದ ವರ್ಷ ಹೋಪ್‍ಗೆ ನೀರು ಕುಡಿಸಿ ಮಾನವೀಯತೆ ಮೆರೆದಿದ್ದು ಮಾಟಗಾರ್ತಿ. ನೈಜೀರಿಯಾದಲ್ಲಿ ಮಾಟಗಾರ್ತಿಯರ ಸಂಖ್ಯೆ ಹೆಚ್ಚಿದ್ದು, ಮಕ್ಕಳ ಕೊಲೆ, ಸುಲಿಗೆ, ಹಿಂಸಾಕೃತ್ಯಗಳು ನಡೆಯುತ್ತಿವೆ. ಇವುಗಳ ವಿರುದ್ಧ ಸಂಘಟನೆಗಳು ಹೋರಾಟ ನಡೆಸಿವೆ.

`ಹೋಪ್‍’ ಈಗ ಆರೋಗ್ಯವಾಗಿ, ಚುರುಕಾಗಿ ಇದ್ದಾನೆ. ಪ್ರತಿ ಬಾರಿ ಆಡುವಾಗಲೂ ವೈದ್ಯರ ಆಟಿಕೆಗಳೊಂದಿಗೆ ಆಡುತ್ತಾನೆ. ನಮ್ಮ ಕಾರ್ಯಕರ್ತರಲ್ಲಿ ಒಬ್ಬರು ಅವನ ಪೇಶೆಂಟ್‍ ಆಗಿದ್ದಾರೆ. ಆತ ವೇಗವಾಗಿ ಬೆಳೆಯುತ್ತಿದ್ದು, ಮುಂದೊಂದು ದಿನ ಸುಂದರ ಯುವಕ ಆಗುತ್ತಾನೆ. ಆತನ ಆಸಕ್ತಿ ಗಮನಿಸಿದರೆ ವೈದ್ಯನೂ ಆಗುತ್ತಾನೆ ಎನಿಸುತ್ತಿದೆ ಎಂದು ಫೇಸ್‍ಬುಕ್‍ನಲ್ಲಿ ಲೋವೆನ್‍ ಹೇಳಿಕೊಂಡಿದ್ದಾರೆ.

ಹೋಪ್‍ ಬಗ್ಗೆ ಎಷ್ಟು ಜನ ಆಸಕ್ತಿ ವಹಿಸಿದ್ದಾರೆ. ಅವನ ಬಗ್ಗೆ ಪ್ರಾರ್ಥಿಸುತ್ತಿದ್ದಾರೆ ಅಂದರೆ ಊಹಿಸಲೂ ಅಸಾಧ್ಯ. ಪ್ರತಿದಿನವೂ ಅವನ ಬಗ್ಗೆ ಕಾಳಜಿ ವಹಿಸಿ ನಮಗೆ ಕರೆಗಳು ಬರುತ್ತಿವೆ. ಹೋಪ್‍ ಬಗ್ಗೆ ಅಭಿಮಾನ ನೋಡಿದರೆ ಹೋಪ್‍ಲೆಸ್‍ ಕೂಡ ಜೀವನದಲ್ಲಿ ಹೊಸ ಹೊಪ್ ಪಡೆಯುತ್ತಾನೆ ಎಂದು ಹೇಳಿದ್ದಾರೆ.

Also Read: ಅಪರೂಪದ ಪಕ್ಷಿ ಕಲ್ಲುಗೌಜಲು’!!!

Watch: