ಸಾಮಾನ್ಯವಾಗಿ ಜನರು ದೀಪಾವಳಿಯಲ್ಲಿ ಮಾಡುವ ಉಪಹಾರವಾದ ಚಿರೋಟಿ ಮಾಡುವ ವಿಧಾನ..!!

0
1237

ಚಿರೋಟಿ ಪ್ರಧಾನವಾಗಿ ದಕ್ಷಿಣ ಭಾರತದಲ್ಲಿ ಕಾಣುವ ಒಂದು ಸವಿತಿನಿಸು. ಅದನ್ನು ಸಾಮಾನ್ಯವಾಗಿ ಜನರು ದೀಪಾವಳಿಯಲ್ಲಿ ಮಾಡುವ ಉಪಹಾರವಾಗಿ ಮಾಡಲಾಗುತ್ತದೆ. ಹಾಗಾದರೆ ಬನ್ನಿ ಚಿರೋಟಿ ಮಾಡುವ ವಿಧಾನವನ್ನು ನಾವು ಇಲ್ಲಿ ನಿಮಗಾಗಿ ತಿಳಿಸುತ್ತಿದ್ದೇವೆ.

ಚಿರೋಟಿಗೆ ಬೇಕಾಗುವ ಸಾಮಗ್ರಿಗಳು.

  • ಚಿರೋಟಿ ರವೆ 1 kg
  • ಅಕ್ಕಿ ಹಿಟ್ಟು 1 ಬಟ್ಟಲು.
  • ತುಪ್ಪ 1 ಬಟ್ಟಲು.
  • ಕರಿಯಲು ಎಣ್ಣೆ.

ಮಾಡುವ ವಿಧಾನ:

ಮೊದಲಿಗೆ ಸಕ್ಕರೆಯನ್ನು ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ. (ಬೇಕಾದರೆ ಏಲಕ್ಕಿ ಬೆರಸಿಕೊಳ್ಳಬಹುದು)

ಚಿರೋಟಿ ರವೆಗೆ ಚಿಟಿಕೆ ಉಪ್ಪು ಅರ್ಧ ಬಟ್ಟಲು ಬಿಸಿ ತುಪ್ಪ ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ. ಅರ್ಧ ಗಂಟೆಗಳ ಕಾಲ ನೆನೆಯಲು ಬಿಡಿ.

ಒಂದು ಬಟ್ಟಲಿನಲ್ಲಿ ಅಕ್ಕಿಹಿಟ್ಟು ಉಳಿದ ತುಪ್ಪ ಕಲೆಸಿಡಿ.ನೆನೆದ ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ. ದುಂಡಗೆ ಎರಡು ರೊಟ್ಟಿಗಳನ್ನು ಲಟ್ಟಿಸಿ. ಒಂದರ ಮೇಲೆ ಅಕ್ಕಿ ಹಿಟ್ಟಿನ ಮಿಶ್ರಣವನ್ನು ಚೆನ್ನಾಗಿ ಸವರಿ ಇನ್ನೊಂದು ರೊಟ್ಟಿಯನ್ನು ಅದರ ಮೇಲೆ ಹಾಕಿ ಒತ್ತಿ‌ ಅಂಚುಗಳು ಒಳಗೆ ಬರುವಂತೆ ಮಡಚಿ ಮತ್ತೆ ಮಿಶ್ರಣ ಸವರಿ. ಮತ್ತೆ ಮಡಚಿ ಒಂದು ಪಟ್ಟಿಯ ಹಾಗೆ ಮಾಡಿಕೊಂಡು ಚಿಕ್ಕ ಚೌಕಗಳನ್ನು ಕತ್ತರಿಸಿ.

ಚೌಕಗಳನ್ನು ದಪ್ಪಗೆ ಲಟ್ಟಿಸಿ ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವಂತೆ ಕರಿದು ತೆಗೆಯಿರಿ.

ನಂತರ ಏಲಕ್ಕಿ ಬೆರಸಿದ ಸಕ್ಕರೆಪುಡಿ ಅಥವ ಚಟ್ನಿಪುಡಿ ಯೊಂದಿಗೆ ಸವಿಯಿರಿ. ಇದನ್ನ ಹಾಗೆಯೆ ತಿನ್ನಬಹುದು.

ಟಿಪ್ಸ್

* ಚಿರೋಟಿಯನ್ನು ತಯಾರಿಸುವಾಗ ಎಣ್ಣೆ ಬದಲಿಗೆ ತುಪ್ಪವನ್ನು ಬಳಸಬಹುದು.

*ಚಿರೋಟಿಯನ್ನು ಸರ್ವ್ ಮಾಡುವಾಗ ಬಿಸಿ ಬಾದಾಮಿ ಹಾಲನ್ನು ಕೂಡ ಬಳಸಬಹುದು.

* ಡ್ರೈ ಚಿರೋಟಿಯನ್ನು ಏರ್ ಟೈಟ್ ಬಾಕ್ಸ್‌ನಲ್ಲಿ ಹೆಚ್ಚು ದಿನ ಶೇಖರಿಸಿ ಬಳಸಬಹುದು

* ಚಿರೋಟಿಯ ಮೇಲೆ ಸಕ್ಕರೆ ಪುಡಿ ಹರಡುವುದರಿಂದ ಮೈದಾ ಹಿಟ್ಟಿಗೆ ಬೆಲ್ಲ ಅಥವಾ ಸಕ್ಕರೆ ಬಳಸದಿರುವುದು ಉತ್ತಮ.

* ಹಿಟ್ಟನ್ನು ಚೆನ್ನಾಗಿ ನಾದಿ ಕಲೆಸಿದರೆ ಚಿರೋಟಿ ಉತ್ತಮವಾಗಿರುತ್ತದೆ.

* ಚಿರೋಟಿಯನ್ನು ಮಕ್ಕಳಿಗೆ ಇಷ್ಟವಾಗುವಂತೆ ವಿವಿಧ ಆಕಾರದಲ್ಲಿ ತಯಾರಿಸಬಹುದು.