ಕ್ಯಾನ್ಸರ್ ಕಾಯಿಲೆಗೆ ಆಯುರ್ವೇದ ಚಿಕಿತ್ಸೆ ಹೋಗುವ ಮುನ್ನ ಎಚ್ಚರ; ರಾಜ್ಯದಲ್ಲೇ ನಡೆಯುತ್ತಿದೆ ನಕಲಿ ವ್ಯೆದ್ಯರ ಸುಳ್ಳು ಚಿಕಿತ್ಸೆ.!

0
241

ದೇಶದಲ್ಲಿ ಕ್ಯಾನ್ಸರ್ ಕಾಯಿಲೆ ಹರಡುವುದು ಹೆಚ್ಚಾಗಿದ್ದು, ಸರಿಯಾದ ಚಿಕಿತ್ಸೆ ಇಲ್ಲದೆ ಸಾವಿರಾರು ಜನರು ಸಾವನ್ನಪ್ಪುತ್ತಿದ್ದಾರೆ. ಅದರಂತೆ ರಾಜ್ಯದಲ್ಲಿವೂ ಕೂಡ ಕ್ಯಾನ್ಸರ್ ಗೆ ತುತ್ತಾಗಿ ಪ್ರತಿನಿತ್ಯವೂ ಸಾಯಿತ್ತಿದ್ದಾರೆ, ಕೆಲವರಂತೆ ಚಿಕಿತ್ಸೆ ಹಣವಿಲ್ಲದೆ ಪರದಾಡುತ್ತಿದ್ದಾರೆ. ಇದಕ್ಕೆ ಸರ್ಕಾರ ಕ್ಯಾನ್ಸರ್ ಆಸ್ಪತ್ರೆ ಗೋಳು ಕೇಳುವರು ಯಾರಿಲ್ಲದಿರುವುದು ಕಾರಣವೇ ಆಗಿದೆ. ಇದಕ್ಕಾಗಿ ಜನರು ಇರುವಷ್ಟು ದಿನ ಕಡಿಮೆ ಬೆಲೆಗೆ ಸಿಗುವ ಗೌಟಿ ಔಷಧಿಗಳಿಗೆ ಮಾರು ಹೋಗುತ್ತಿರುವುದು ಹೆಚ್ಚಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಹಲವು ನಕಲಿ ಆಯುರ್ವೇದಿಕ್ ಚಿಕಿತ್ಸೆ ನೀಡಿ ರೋಗಿಗಳಿಂದ ಸಾವಿರಾರು ರೂ. ಕಸಿದುಕೊಳ್ಳುತ್ತಿದ್ದಾರೆ. ಇಂತಹದೆ ಒಂದು ಸುಳ್ಳು ಔಷಧಿ ನೀಡುತ್ತಿದ್ದ ಚಿತ್ರದುರ್ಗದ ವ್ಯೆದ್ಯನ ಅಸಲಿತ್ತು ಬಯಲಾಗಿದೆ ನೋಡಿ.

ಕ್ಯಾನ್ಸರ್ ಚಿಕಿತ್ಸೆಗೆಂದು ಗೌಟಿ ತೆಗೆದುಕೊಳ್ಳುತ್ತಿರಾ?

ಹೌದು ಅದೆಷ್ಟೋ ಜನರು ಕ್ಯಾನ್ಸರ್ ಗೆ ಕಿಮೋದಿಂದ ಗುಣವಾಗುವುದಿಲ್ಲ, ಅದರ ಜೊತೆಗೆ ಹಣವು ಹೋಗುತ್ತೆ ಎನ್ನುವ ಉದ್ದೇಶದಿಂದ ಇಂತಹ ಗಿಡಮೂಲಿಕೆ ಔಷಧಿ ತೆಗೆದುಕೊಂಡು ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇಂತಹದೆ ಒಂದು ಘಟನೆ ಆರೋಗ್ಯ ಸಚಿವ ಶ್ರೀರಾಮುಲು ತವರು ಜಿಲ್ಲೆ ಚಿತ್ರದುರ್ಗದಲ್ಲೇ ಕ್ಯಾನ್ಸರ್ ಚಿಕಿತ್ಸೆ ನೆಪದಲ್ಲಿ ದೊಡ್ಡ ಅಕ್ರಮ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಚಿತ್ರದುರ್ಗದ ಸರ್ಕಾರಿ ಆಸ್ಪತ್ರೆಯ ಆಯುಷ್ ಡಾಕ್ಟರ್ ಎ.ಎನ್ ಸುರೇಶ್ ಎಂಬ ಆಸಾಮಿ, ಹಣಕ್ಕಾಗಿ ತಾನೊಬ್ಬ ವೈದ್ಯ ಅನ್ನೋದನ್ನೇ ಮರೆತು ಕ್ಯಾನ್ಸರ್ ರೋಗಿಗಳಿಗೆ ಪಾರಂಪರಿಕಚಿಕಿತ್ಸೆ ಕೊಡುತ್ತೇವೆ ಎಂದು ಅವರ ಜೀವದ ಜೊತೆ ಚೆಲ್ಲಾಟವಾಡ್ತಿದ್ದಾನೆ.

ದೇವರ ಹೆಸರಲ್ಲಿ ಪ್ರಚಾರ ಪಡೆದ ನಕಲಿ ವ್ಯೆದ್ಯ;

ಅಮಾಯಕರಿಂದ ಸಾವಿರಾರು ರೂ. ಹಣ ಪಡೆದು ಅವರ ಪ್ರಾಣವನ್ನೂ ಬಲಿ ತೆಗೆದುಕೊಳ್ಳುವ ಈ ವ್ಯೆದ್ಯ ಎ.ಎನ್ ಸುರೇಶ್ ಕುಣಿಗಲ್‍ನ ಶ್ರೀ ಸಿದ್ಧಲಿಂಗೇಶ್ವರ ಸ್ವಾಮೀಜಿ ಹೆಸರಲ್ಲಿ ಖಾಸಗಿ ವಾಹಿನಿಗಳಲ್ಲಿ ಹಾಗೂ ಯೂಟ್ಯೂಬ್ ನಲ್ಲಿ ಭರ್ಜರಿ ಪ್ರಚಾರ ಗಿಟ್ಟಿಸಿಕೊಳ್ತಾ, ಕ್ಯಾನ್ಸರ್ ರೋಗಿಗಳನ್ನು ಚಿತ್ರದುರ್ಗದ ಯೋಗಾವನ ಬೆಟ್ಟಕ್ಕೆ ಸೆಳೆಯುತ್ತಾನೆ. ಅಲ್ಲದೇ ಇವರ ಅಕ್ರಮ ಬಯಲಾಗದಿರಲಿ ಎಂದು ನಕಲಿ ಖಾವಿಧಾರಿಗಳ ಬೆಂಗಾವಲಿನಲ್ಲಿ ಕ್ಯಾನ್ಸರ್ ರೋಗಿಗಳಿಗೆ ಇಲ್ಲಸಲ್ಲದ ಚಿಕಿತ್ಸೆ ನೀಡುತ್ತಿರುವ ಆರೋಪಗಳು ಕೇಳಿ ಬಂದಿವೆ.

ಯೋಗದಿಂದ ಕ್ಯಾನ್ಸರ್ ವಾಸಿ ಮಾಡುತ್ತಾನಂತೆ;

ಯೋಗದಿಂದ ಕ್ಯಾನ್ಸರ್ ಗುಣಮಾಡುತ್ತೇನೆ ಎಂದು ಬಡಾಯಿ ಕೊಚ್ಚಿಕೊಳ್ಳೋ ಈ ದಂಧೆಕೋರರ ಮಾತಿಗೆ ಮರುಳಾದ ಹುಬ್ಬಳ್ಳಿ ಮೂಲದ ಬಾಲರಾಜ್ ಕುಮಾರ್ ಎಂಬ ರೋಗಿಯಿಂದ 30 ಸಾವಿರ ರೂಪಾಯಿ ಹಣ ಪಡೆದು, ಆರು ತಿಂಗಳಿಂದ ಅಲ್ಲೇ ಉಳಿದರೂ ರೋಗ ಗುಣವಾಗದೇ ಆತ ಸಾವಿನಂಚಿಗೆ ತಲುಪಿದ್ದಾನೆ. ಈ ಬಗ್ಗೆ ಕೇಳಲು ಬಂದಿದ್ದ ಬಾಲರಾಜ್ ಕುಟುಂಬದ ಮೇಲೆ ಡಾಕ್ಟರ್ ಸುರೇಶನ ರೌಡಿಗಳು ದೌರ್ಜನ್ಯವೆಸಗಲು ಮುಂದಾಗಿ ರೋಗಿಯನ್ನು ಕೂಡ ತಳಿಸಿದ್ದಾರೆ. ಇದನ್ನು ಸಹಿಸದ ರೋಗಿಯ ಸಂಬಂಧಿಕರು ಆಕ್ರೋಶಗೊಂಡ ನಕಲಿ ಖಾವಿಧಾರಿಗಳಿಗೆ ಭರ್ಜರಿ ತಳಿಸಿದ್ದಾರೆ ತನ್ನ ಈ ನಡುವೆ ಬಂದ ನಕಲಿ ವ್ಯೆದ್ಯನಿಗೆ ರೋಗಿ ಗೋಸಾ ನೀಡಿದ್ದಾನೆ.

ಈ ಘಟನೆ ಪ್ರಚರವಗುತ್ತಿದ್ದಂತೆ ತಲೆ ಮರೆಸಿಕೊಳ್ಳಲು ಯತ್ನಿಸಿದ ಆರೋಪಿ ವ್ಯೆದ್ಯನ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಅಕ್ರಮ ದಂದೆ ಸುಮಾರು ನಾಲ್ಕು ವರ್ಷಗಳಿಂದ ನಡೆಯುತಿದ್ದರೂ ಸಹ ಆರೋಗ್ಯ ಇಲಾಖೆ ಮಾತ್ರ ಸುಮ್ಮನೆ ಇರುವುದು ಯಾಕೇ? ವ್ಯೆದ್ಯರಿಂದ ಏನಾದರು ಬಿಸಕೆತ್ ಬರುತ್ತಾ ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ. ಇಂತಹ ಮೋಸದ ವ್ಯೆದ್ಯರಿಂದ ರೋಗಿಗಳನ್ನು ಇನ್ನಾದರೂ ಆರೋಗ್ಯ ಸಚಿವರು ಮತ್ತು ಇಲಾಖೆ ಕಾಪಾಡುತ್ತದೇಯೋ ಎನ್ನುವುದು ಕಾದುನೋಡಬೇಕಿದೆ.